ಅಕ್ಷಯ್ ಕುಮಾರ್ ಮಗ ಆರವ್ ಗೆ ‘ಈ’ ಬಾಲಿವುಡ್ ನಟಿಯ ಮೇಲೆ ಮನಸ್ಸಾಗಿದೆಯಂತೆ! ಸಾರ್ವಜನಿಕವಾಗಿ ಮನಸು ಬಿಚ್ಚಿ ಮಾತನಾಡಿದ ಆರವ್!

ಬಾಲಿವುಡ್ ನಲ್ಲಿ ಅನೇಕ ದಿಗ್ಗಜರು ಹೀಗೂ ಇದ್ದಾರೆ, ಅವರ ಜನಪ್ರಿಯತೆಗೆ ಯಾವುದೇ ತೊಂದರೆ ಇಲ್ಲ. ಅವರು ಯಾವಾಗಲೂ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಹೀಗಾಗಿ ಇವರ ಮಕ್ಕಳು ಕೂಡಾ ಸದಾ ಫೋಕಸ್ ನಲ್ಲಿರುತ್ತಾರೆ. ಸ್ಟಾರ್ ಗಳು ಸುದ್ದಿಯಲ್ಲಿರುವದರಿಂದ ಮಿಡಿಯಾದಲ್ಲಿ ಸ್ಟಾರ್ ಸನ್ ಗಳ ಬಗ್ಗೆ ಮಿಡಿಯಾದಲ್ಲಿ ಸದಾ ಏನಾದರೊಂದು ಸುದ್ದಿಗಳು ಹರಡುತ್ತಲೇ ಇರುತ್ತವೆ. ಈಗ ನಾವು ಇಂಥದ್ದೇ ಸೂಪರ್ ಸ್ಟಾರ್ ಮಗನಾದ ಆರವ್ ಬಗ್ಗೆ ಹೇಳ್ತಾ ಇದ್ದೇವೆ. ಆರವ್ ಬಾಲಿವುಡ್ ಖಿಲಾಡಿ ಎಂದೇ ಪರಿಚಿತರಾದ ಅಕ್ಷಯ್ ಕುಮಾರ್ ಅವರ ಮಗ. ಮಗ ಆರವ್ ದೊಡ್ಡವನಾಗುತ್ತಿದ್ದಂತೆಯೇ ಈತನಿಗೂ ಮಿಡಿಯಾದಲ್ಲಿ ಸ್ಥಾನ ದೊರೆಯಲು ಪ್ರಾರಂಭವಾಗಿದೆ.

ಬಾಲಿವುಡ್ ನಲ್ಲಿ ತನ್ನ ಅಭಿನಯದಿಂದ ಬಹುಬೇಗ ಮುಂಚೂಣಿಯ ಸ್ಥಾನವನ್ನು ಗಿಟ್ಟಿಸಿದ ಚುಲ್ ಬುಲಿ ಗರ್ಲ್ ಎಂದೇ ಪ್ರಸಿದ್ಧಿಯನ್ನು ಪಡೆದ ಆಲಿಯಾ ಅವರನ್ನು ಕಂಡರೆ ಆರವ್ ಗೆ ತುಂಬಾ ಇಷ್ಟವಂತೆ. ಆರವ್ ಹೇಳುವ ಪ್ರಕಾರ ‘ಆಲಿಯಾಳ ನಟನೆಗೆ ನಾನು ಮಾರು ಹೋಗಿದ್ದೇನೆ’ ಎನ್ನುತ್ತಾರೆ. ಇದೇ ಕಾರಣದಿಂದ ಆರವ್ ಆಲಿಯಾಳನ್ನು ತುಂಬಾ ಇಷ್ಟ ಪಡುತ್ತಾರಂತೆ.

ಆಲಿಯಾಗೆ ಡೇಟ್ ಸಹ ಮಾಡುವಾಸೆ.

ಆಲಿಯಾ ಆರವ್ ಗೆ ಎಷ್ಟರಮಟ್ಟಿಗೆ ಹಿಡಿಸಿದ್ದಾಳೆಂದರೆ ಆಕೆಗೆ ಡೇಟಿಂಗ್ ಗೆ ಕರೆದೊಯ್ಯಲು ಸಹ ತಯಾರಿದ್ದಾರಂತೆ!

ಆದರೆ ಆಲಿಯಾ ಸದ್ಯಕ್ಕೆ ಕಪೂರ್ ಕುಟುಂಬದ ಫೇಮಸ್ ಸ್ಟಾರ್ ರಣಬೀರ್ ಅವರಿಗೆ ಡೇಟ್ ಮಾಡ್ತಾ ಇರೋದು ಎಲ್ಲರಿಗೂ ಗೊತ್ತಿದ್ದ ವಿಷಯವೇ.

ಆದರೆ ಈಗ ಆರವ್ ವ್ಯಕ್ತ ಮಾಡಿದ ಈ ವಿಚಾರಕ್ಕೆ ಆಲಿಯಾ ಯಾವ ರೀತಿ ಸ್ಪಂದಿಸುತ್ತಾಳೆ ಎಂಬುದನ್ನು ನೋಡುವದು ಮಾತ್ರ ಈಗ ತುಂಬಾ ಇಂಟರೆಸ್ಟಿಂಗ್ ವಿಷಯವಾಗಲಿದೆ!