‘ಅಮಿತಾಭ್ ಆಸ್ಪತ್ರೆಯಲ್ಲಿ, ಈಗ ನೀನು ನಿನ್ನ ಹೊಟ್ಟೆ ಹೇಗೆ ತುಂಬಿಸಿಕೊಳ್ಳುವೆ?’, ಎಂದ ಟ್ರೋಲರ್’ಗೆ ಸಖತ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!
ಕೊರೊನ ಸೋಂಕಿನಿಂದಾಗಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್ ಇಬ್ಬರೂ ನಾನಾವಟಿ ಆಸ್ಪತ್ರೆಯಲ್ಲಿ ಉಪಚಾರ ತೆಗೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಇಬ್ಬರೂ ಬೇಗ ಗುಣಮುಖವಾಗಲೆಂದು ಹಾರೈಸಿದ್ದಾರೆ.
ಕಳೆದ ಬುಧವಾರ ಅಭಿಷೇಕ್ ಅವರು ತಮ್ಮ ‘ಬ್ರೀದ್’ ಈ ವೆಬ್ ಸೀರಿಜ್ ಬಗ್ಗೆ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಗೆ ಸಂಬಂಧಿಸಿ ಟ್ವಿಟ್ಟರ್ ನಲ್ಲಿ ಮಹಿಳೆಯೊಬ್ಬಳು ಅಭಿಷೇಕ್ ಗೆ ಟ್ಯಾಗ್ ಮಾಡಿ, ‘ಈಗ ನಿನ್ನ ತಂದೆ ಆಸ್ಪತ್ರೆಯಲ್ಲಿದ್ದಾರೆ, ನಿನ್ನ ಹೊಟ್ಟೆ ಹೇಗೆ ತುಂಬಿಕೊಳ್ಳುತ್ತಿರುವಿ’ ಎಂಬ ಪ್ರಶ್ನೆ ಕೇಳಿದಾಗ ಅಭಿಷೇಕ್ ಇದಕ್ಕೆ ತುಂಬಾ ಸುಂದರವಾದ ಉತ್ತರ ಕೊಟ್ಟಿದ್ದಾರೆ.

‘ಸದ್ಯಕ್ಕೆ ಆಸ್ಪತ್ರೆಯಲ್ಲಿರುವದರಿಂದ ಇಬ್ಬರೂ ನಮ್ಮ ಹೊಟ್ಟೆ ಮಲಗಿಕೊಂಡೇ ತುಂಬುತ್ತಿದ್ದೀವಿ’ ಎಂದು ತಮಾಷೆಯ ಉತ್ತರ ಕೊಟ್ಟಿದ್ದಾರೆ. ಆಗ ಅದಕ್ಕೆ ಟ್ರೋಲರ್ ಳು ‘ಆದಷ್ಟು ಬೇಗ ಆರೋಗ್ಯವಂತರಾಗಿ ಬನ್ನಿ ಸರ್, ಪ್ರತಿಯೊಬ್ಬರ ಹಣೆಬರಹದಲ್ಲಿ ಮಲಗಿಕೊಂಡು ತಿನ್ನುವ ಯೋಗ ಎಲ್ಲಿ ಇರುತ್ತೆ? ಎಂದು ಅಭಿಷೇಕ್ ಅವರ ಕಾಲೆಳೆಯಲು ಪ್ರಯತ್ನಿಸಿದ್ದಾಳೆ. ಆನಂತರ ಈ ಮಾತಿಗೆ ಅಭಿಷೇಕ್ ಕೊಟ್ಟ ಉತ್ತರ ಮಾತ್ರ ತುಂಬಾ ಮರ್ಮವೇಧವಾಗಿತ್ತು. ‘ನಾವು ಯಾವ ಪರಿಸ್ಥಿತಿಯಲ್ಲಿ ಇಲ್ಲಿಗೆ ಬಂದಿದ್ದೇವೆ ಆ ಕೆಟ್ಟ ಸಮಯ ನಿಮಗೆ ಬರದೆ ಇರಲಿ, ನೀವು ಸುರಕ್ಷಿತವಾಗಿರಿ ಮತ್ತು ಆರೋಗ್ಯವಂತರಾಗಿರಿ, ನಿಮ್ಮ ಹಾರೈಕೆಗೆ ನಾನು ಋಣಿಯಾಗಿದ್ದನೆ ಮೇಡಂ’ ಎಂದು ಉತ್ತರ ಕೊಟ್ಟಿದ್ದಾರೆ.
ಬಚ್ಚನ್ ಕುಟುಂಬದ ನಾಲ್ಕು ಸದಸ್ಯರಿಗೆ ಜುಲೈ 11 ರಂದು ಕೊರೊನ ಸೋಂಕು ತಗುಲಿರುವದು ದೃಢ ಪಟ್ಟಿತ್ತು. ತಂದೆ ಮಗ ಇಬ್ಬರಿಗೂ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಐಶ್ವರ್ಯ ಮತ್ತು ಮಗಳು ಆರಾಧ್ಯಗೆ ಮನೆಯಲ್ಲಿಯೇ ಕ್ವಾರಂಟೈನ್ ಇಡಲಾಗಿತ್ತು. ಒಂದು ವಾರದ ನಂತರ ಈ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಅವರ ರಿಪೋರ್ಟ್ ನೆಗೆಟಿವ್ ಬಂದನಂತರ ಮನೆಗೆ ಬಿಡಲಾಗಿತ್ತು.