ಭಾರತದ ಮೊದಲ ಮೊಬೈಲ್ ಕರೆಗೆ ಇಂದು ರಜತ ಮಹೋತ್ಸವದ ಸಂಭ್ರಮ! ಎಲ್ಲಕ್ಕೂ ಮೊದಲ ಕರೆ ಯಾರು ಮತ್ತು ಎಲ್ಲಿಗೆ ಮಾಡಿದ್ದರು ಗೊತ್ತಾ..?

ಎಷ್ಟು ಜನರಿಗೆ ಗೊತ್ತು ಭಾರತದಲ್ಲಿ ಮೊಬೈಲ್ ಯುಗದ ಪ್ರಾರಂಭವಾಗಿ ನಿನ್ನೆಯ ಶುಕ್ರವಾರ 31 ಆಗಸ್ಟ್ ಗೆ ಬರೋಬ್ಬರಿ 25 ವರ್ಷಗಳು ಪೂರ್ಣವಾದ ಬಗ್ಗೆ. ಈ 25 ವರ್ಷಗಳಲ್ಲಿ ಮೊಬೈಲ್ ಮಾಡಿದ ಪ್ರವಾಸದ ಬಗ್ಗೆ ಸ್ವಲ್ಪ ವಿಚಾರ ಮಾಡಿದರೆ ನಿಜಕ್ಕೂ ತುಂಬಾ ಆಶ್ಚರ್ಯವಾಗದೆ ಇರದು. ಭಾರತದಲ್ಲಿ ಮೊಬೈಲ್ ಕರೆ ಮೊಟ್ಟ ಮೊದಲ ಬಾರಿಗೆ 31 ಜುಲೈ 1995 ರಲ್ಲಿ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 1G ಯಿಂದ ಈಗ ಸದ್ಯಕ್ಕೆ ಬರಲಿರುವ 5G ಗಣನೆಗೆ ತಂದುಕೊಂಡರೆ ಮೊಬೈಲ್ ಲೋಕದಲ್ಲಿ ಊಹಿಸಲಾರದಂಥ ಅಮೂಲಾಗ್ರ ಬದಲಾವಣೆ ಬೆಚ್ಚಿ ಬೀಳಿಸುವಂಥದ್ದು.

ಹಾಗಾದರೆ ಮೊಬೈಲ್ ಪ್ರಾರಂಭವಾದ ನಂತರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಯಾರು ಮಾತಾಡಿರಬೇಕು ಎಂದು ಎಲ್ಲರಿಗೂ ಸಹಜವಾದ ಕುತೂಹಲ ಇದ್ದೇ ಇರುತ್ತದೆ. ಆದ್ದರಿಂದ ಈ ಕುತೂಹಲಕ್ಕೆ ಉತ್ತರವನ್ನು ನಾವು ಹೇಳುವವರಿದ್ದೇವೆ. ಭಾರತದಲ್ಲಿ ಮೊದಲ ಮೊಬೈಲ್ ಕಾಲ್ ಪಶ್ಚಿಮ ಬಂಗಾಳದ ತತ್ಕಾಲೀನ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಆಗಿನ ಕೇಂದ್ರದ ದೂರಸಂಚಾರ ಮಂತ್ರಿಯಾದ ಸುಖರಾಮ್ ಅವರ ಜೊತೆಗೆ ಮಾತನಾಡಿದರು. ಅವರು ಯಾವುದೋ ಒಂದು ವಿಷಯದ ಬಗ್ಗೆ ಮೊಬೈಲ್ ನಲ್ಲಿ ಚರ್ಚೆ ಮಾಡಿದರು. ಜ್ಯೋತಿ ಬಸು ಅವರು ಕೊಲ್ಕತ್ತಾದ ರಾಯಟರ್ಸ್ ಬಿಲ್ಡಿಂಗ್ ನಿಂದ ದೆಹಲಿಯ ಸಂಚಾರ ಭವನದಲ್ಲಿದ್ದ ಸುಖರಾಮ್ ಅವರಿಗೆ ಮೊದಲ ಕಾಲ್ ಮಾಡಿದ್ದರು.

ಆಗ ಭಾರತದ ಮೊದಲ ಮೊಬೈಲ್ ಆಪರೇಟರ್ ಕಂಪನಿ ಮೋದಿ ಟ್ರೆಲ್ಸ್ಟ್ರಾ ಎಂಬ ಹೆಸರಿನದಿತ್ತು. ಇದು ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ದೂರ ಸಂಚಾರ ಕಂಪನಿ ಟ್ರೆಲ್ಸ್ಟ್ರಾ ಹೀಗೆ ಇಬ್ಬರ ಪಾಲುದಾರಿಕೆಯಲ್ಲಿ ಇತ್ತು. ಮೊದಲ ಕಾಲ್ ಇದೇ ಸೇವೆಯ ಅಧೀನದಲ್ಲಿ ಮಾಡಲಾಗಿತ್ತು. ಇದು ಮೊಬೈಲ್ ನೆಟ್ ಎಂಬ ಹೆಸರಿನಿಂದಲೂ ಪರಿಚಿತವಾಗಿತ್ತು

ಇನ್ನು ವಿಶೇಷವೆಂದರೆ ಆಗಿನ ಕಾಲ್ ರೇಟ್ ಬಗ್ಗೆ. ಮೊದಲು ಔಟ್ ಗೋಯಿಂಗ್ ಕಾಲ್ ಸಲುವಾಗಿ 16 ₹ 40 ಪೈಸೆ ಮತ್ತು ಇನ್ ಕಮಿಂಗ್ ಸಲುವಾಗಿ 8 ₹ 40 ಪೈಸೆ ಪ್ರತಿ ನಿಮಿಷಕ್ಕೆ ಈ ರೀತಿ ದರ ನಿಗದಿಯಾಗಿತ್ತು. ಮೊದಲ ಐದು ವರ್ಷಗಳಲ್ಲಿಯೇ ಭಾರತದಲ್ಲಿ ಮೊಬೈಲ್ ಯೂಜ್ ಮಾಡುವವರ ಸಂಖ್ಯೆ 50 ಲಕ್ಷದವರೆಗೆ ಮುಟ್ಟಿತ್ತು. ಮುಂದೆ 1995 ರಲ್ಲಿ ವಿದೇಶ ಸಂಚಾರ ನಿಗಮ್ ಲಿಮಿಟೆಡ್ (VSNL) ವು ಸ್ವಾತಂತ್ರೋತ್ಸವದ ಅಂಗವಾಗಿ ಭಾರತೀಯರಿಗೆ ಇಂಟರ್ ನೆಟ್ ಸೌಲಭ್ಯವನ್ನು ಸಹಿತ ನೀಡಿತು.

VSNL ಆಗ ದೇಶದಲ್ಲಿ ಗೇಟ್ ವೇ ಇಂಟರ್ ನೆಟ್ ಎಕ್ಸೆಸ್ ಸರ್ವಿಸ್ ಪ್ರಾರಂಭಿಸುವ ವಿಚಾರವನ್ನು ಜಾಹೀರು ಪಡಿಸಿತು. ಮೊದಲ ಇಂಟರ್ನೇಟ್ ಸೇವೆ ಮಹಾನಗರಗಳ ಸಲುವಾಗಿಯೇ ಇತ್ತು. ಆಗ 250 ಗಂಟೆಗಳ ಇಂಟರ್ನೇಟ್ ಸೇವೆಯ ಸಲುವಾಗಿ 5000 ರೂಪಾಯಿಗಳ ಶುಲ್ಕವಿತ್ತು. ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಈ ದರ 15 ಸಾವಿರದವರೆಗೆ ಇತ್ತು.

ಯಾವಾಗ ಲಾಂಚ್ ಆದದ್ದು 1G to 5G ?

1) 1G – 1980
2) 2G – 1990
3) 3G – 2000
4) 4G – 2010
5) 5G – 2020-2021