ಮನೆಯ ಮುಂದೆ ಮಲಗಿದ ನಾಯಿಯನ್ನು ಚಾಣಾಕ್ಷತೆಯಿಂದ ಬೇ-ಟೆಯಾಡಿದ ಚಿರತೆ! 96 ಲಕ್ಷ ಜನ ನೋಡಿದ ವೈರಲ್ ವಿಡಿಯೋ!
ಕೆಲವೊಮ್ಮೆ ಕೆಲವೊಂದು ಸನ್ನಿವೇಶಗಳು, ದೃಶ್ಯಗಳನ್ನು ನೋಡಿದಾಗ ಪ್ರಕೃತಿಯು ತಾನು ಆಶ್ರಯ ನೀಡಿರುವ ಜೀವಿಗಳಿಗೆ ಎಂತಹ ಅದ್ಭುತವಾದ ಕೌಶಲ್ಯಗಳನ್ನು ಕರಗತ ಮಾಡಿದೆ ಎಂಬುದು ನಮಗೆ ಆಶ್ಚರ್ಯವನ್ನುಂಟು ಮಾಡುವುದು. ಅಂತಹ ದೃಶ್ಯ ನೋಡುವ ಅಷ್ಟು ಹೊತ್ತು ಕೂಡಾ ಮೈ ನವಿರೇಳುವುದು ಮಾತ್ರವೇ ಅಲ್ಲದೇ ಒಂದೆರಡು ಕ್ಷಣಗಳು ನಮ್ಮ ಎದೆ ಝಲ್ಲೆನ್ನುವುದು ಕೂಡಾ ವಾಸ್ತವ. ಇಂತಹುದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಚಿರತೆಯೊಂದು ತನ್ನ ಬೇಟೆಯನ್ನು ಮನೆಯ ಮುಂದಿನಿಂದಲೇ ಹಿಡಿದು ಹೋಗುವ ದೃಶ್ಯ ಕ್ಷಣ ಕ್ಷಣಕ್ಕೂ ಕೂಡಾ ನಮ್ಮ ದೃಷ್ಟಿಯನ್ನು ಸೆಳೆಯುವುದು ಮಾತ್ರವೇ ಅಲ್ಲ, ದೃಷ್ಟಿ ಪಕ್ಕಕ್ಕೆ ಹೊರಳದಂತೆ ರೋಚಕತೆಯನ್ನು ತೆರೆದಿಡುತ್ತದೆ.
ಮನೆಯ ಮುಂಬಾಗಿಲು ಹಾಕಿಕೊಂಡು ಮನೆಯವರು ಒಳಗೆ ಇರುವಾಗ, ಯಾವುದೇ ಅಪಾಯದ ನಿರೀಕ್ಷೆ ಇಲ್ಲದ ನಾಯಿ, ಬಾಗಿಲ ಬಳಿ ಬೆಚ್ಚಗೆ ಮಲಗಿ ನಿದ್ರೆ ಮಾಡುವಾಗಲೇ, ಬೇಟೆಗೆಂದು ಬಂದ ಚಿರತೆ ನಾಯಿ ಮಲಗಿರುವ ಜಾಗದಿಂದ ಸ್ವಲ್ಪ ದೂರದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಹೊಂಚು ಹಾಕುತ್ತಿರುತ್ತದೆ. ಭೇಟೆಯನ್ನು ಪಡೆದೇ ತೀರಬೇಕೆಂದು ನಿಶ್ಚಯಿಸಿದ್ದ ಚಿರತೆ ಯಾವುದೇ ಆತುರವನ್ನು ತೋರದೆ ತನ್ನ ಚಾಣಾಕ್ಷ ತನವನ್ನು ಪ್ರದರ್ಶನ ಮಾಡಿರುವ ವೀಡಿಯೋ, ನೋಡುಗನನ್ನು ಒಂದು ಕ್ಷಣ ವಾರೆವ್ಹಾ ಎಂತ ನೈಪುಣ್ಯ ಎಂದು ಉದ್ಗರಿಸುವಂತೆ ಮಾಡದೇ ಇದ್ದರೆ ಕೇಳಿ.
ಸಣ್ಣ ಸದ್ದಾದರೂ ಎಚ್ಚರವಾಗಿ ಬಿಡುತ್ತದೆ ನಾಯಿ, ಆದರೆ ಚಿರತೆ ಎಷ್ಟು ಬುದ್ಧಿವಂತಿಕೆಯನ್ನು ತೋರಿದೆ ಎಂದರೆ ನಾಯಿಗೆ ಅದರ ಸದ್ದು, ಅದರ ಅಸ್ತಿತ್ವದ ಆಲೋಚನೆ ಕೂಡಾ ಬಂದಿಲ್ಲ. ನಾಯಿ ನಿದ್ರಿಸಿದ ಮೇಲೆ ಚಿರತೆ ನಿಧಾನವಾಗಿ ಹೆಜ್ಜೆಗಳನ್ನು ಇಡುತ್ತಾ ಬಹಳ ಅಂದ್ರೆ ಬಹಳ ಎಚ್ಚರಿಕೆಯಿಂದ ನಾಯಿಯ ಹತ್ತಿರಕ್ಕೆ ಬಂದಿದೆ. ಆದರೆ ಆಕ್ರಮಣ ಮಾಡಿಲ್ಲ. ಸುಮಾರು ಎರಡರಿಂದ ಮೂರು ನಿಮಿಷ ಚಿರತೆ ಹಾಗೇ ಚಲನೆ ಇಲ್ಲದ ಜಡದಂತೆ ನಿಂತಿದೆ. ನಾಯಿಯ ಕೊರಳ ಬಳಿಗೆ ನಿಧಾನವಾಗಿ ಹೋದ ಅದು ಅನಂತರ ಕ್ಷಣ ಮಾತ್ರವೂ ತಡೆಯದೆ ನಾಯಿಯ ಕುತ್ತಿಗೆಗೆ ತನ್ನ ಚೂಪಾದ ಹಲ್ಲಿನಿಂದ ಕಚ್ಚಿ ಹಿಡಿದಿದೆ.
ನಾಯಿಗೆ ತಪ್ಪಿಸಿಕೊಳ್ಳಲು ಕೂಡಾ ಆಗದ ಪರಿಸ್ಥಿತಿ, ಗಟ್ಟಿಯಾಗಿ ಕಿರುಚಲು ಆಗದ ದುಸ್ಥಿತಿ, ತನ್ನ ಬೇಟೆಯನ್ನು ಪಡೆದ ಚಿರತೆ ಮನೆ ಮಾಲೀಕರು ಬಾಗಿಲು ತೆರೆದು ಹೊರ ಬರುವ ವೇಳೆಗೆ ನಾಯಿಯನ್ನು ಎಳೆದುಕೊಂಡು ಹೋಗಿದೆ. ಇದೆಲ್ಲಾ ಕೂಡಾ ಸಿಸಿಟಿವಿ ಯಲ್ಲಿ ರೆಕಾರ್ಡ್ ಆಗಿದ್ದು, ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿ
ಈಗಾಗಲೇ 96 ಲಕ್ಷಕ್ಕಿಂತ ಅಧಿಕ ವೀಕ್ಷಣೆ ಪಡೆದಿರುವ ಈ ವೀಡಿಯೋ ನೋಡಿ ಸಾವಿರಾರು ಜನ ಪ್ರತಿಕ್ರಿಯೆ ನೀಡಿ ಮೆಚ್ಚಿದ್ದಾರೆ. ಕೆಲವರು ಚಿರತೆಯ ಆಕ್ರಮಣ ಕೌಶಲ್ಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ.