ಫನ್ನಿ ಜೋಕ್ಸ್ : ಗುಂಡನಿಗೆ ಮಹಿಳೆಯರ ಬಟ್ಟೆ ಮಾರುವ ಅಂಗಡಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿಗೆ ಯುವತಿಯೊಬ್ಬಳು ಬಂದು ಕೇಳಿದಳು….
ಆರೋಗ್ಯಕರವಾದ ಜೀವನ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕೆ ನಾವು ನಗುತ್ತಾ ಸಂತೋಷವಾಗಿರುವುದು ಕೂಡಾ ಅತಿ ಅವಶ್ಯಕ. ಆದರೆ ಒತ್ತಡದ ಜೀವನದಲ್ಲಿ ಅನೇಕರ ಮುಖದಿಂದ ನಗು ಮಾಯವಾಗಿದೆ. ಆದರೆ ನಗು ನಮ್ಮ ಜೀವನಕ್ಕೊಂದು ಹೊಸ ಉತ್ಸಾಹವನ್ನು ನೀಡುತ್ತದೆ. ಹಾಗಾದರೆ ನಮ್ಮನ್ನು ನಾವು ನಕ್ಕು, ಸಂತೋಷವಾಗಿ ಇರಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಬಂದಾಗ, ಅದಕ್ಕೆ ಉತ್ತರ ನಗೆ ಹನಿಗಳು ಅಥವಾ ಜೋಕ್ಸ್ ಓದುವುದು ಅಥವಾ ಕೇಳುವುದು. ಅವು ನಮ್ಮ ಮನಸ್ಸಿಗೆ ಒಂದು ಆಹ್ಲಾದವನ್ನು ನೀಡುತ್ತದೆ. ಅಂತಹುದೇ ಒಂದು ಸಣ್ಣ ಪ್ರಯತ್ನ ನಮ್ಮದು.
ಗಂಡ ಹೆಂಡತಿ ಡೈವೋರ್ಸ್ ಪಡೆಯಲು ನ್ಯಾಯಾಲಯಕ್ಕೆ ಬಂದರು.
ಜಡ್ಜ್: ನಿಮಗೆ ಮೂರು ಜನ ಮಕ್ಕಳಿದ್ದಾರೆ, ಅವರನ್ನು ಸಮಾನವಾಗಿ ಹೇಗೆ ಹಂಚಿಕೊಳ್ತೀರಾ?
ಅದನ್ನು ಕೇಳಿಸಿಕೊಂಡ ಪತಿ ಪತ್ನಿ ಬಹಳ ಹೊತ್ತು ಚರ್ಚೆ ಮಾಡಿದ ನಂತರ..
ಪತಿ: ಜಡ್ಜ್ ಸಾಹೇಬರೇ ನಾವಿಬ್ಬರೂ ಬಹಳ ಚರ್ಚೆ ಮಾಡಿ ಒಂದು ತೀರ್ಮಾನ ಮಾಡಿದ್ದೇವೆ. ಮುಂದಿನ ವರ್ಷ ಇನ್ನೊಂದು ಮಗು ಜೊತೆ ಬರ್ತೀವಿ..
ಜೋಕ್ ಇನ್ನೂ ಮುಗಿದಿಲ್ಲ..
ಹಾಗೆ ಹೇಳಿದ ಅವರಿಗೆ ಒಂಬತ್ತು ತಿಂಗಳ ನಂತರ ಅವಳಿ ಮಕ್ಕಳಾಗಿತ್ತು.

ಗಂಡನ ಮೇಲೆ ಅತಿಯಾದ ಅನುಮಾನವಿದ್ದ ಪತ್ನಿ ಒಮ್ಮೆ ಊರಿಗೆ ಹೋದಳು.. ಅಲ್ಲಿಂದ ಗಂಡನಿಗೆ ಫೋನ್ ಮಾಡಿದಳು
ಮೊದಲ ದಿನ
ಪತ್ನಿ: ಎಲ್ಲಿದ್ದೀರಾ?
ಪತಿ: ಮನೇಲಿ ಡಾರ್ಲಿಂಗ್
ಪತ್ನಿ: ಒಂದ್ಸಲ ಮಿಕ್ಸರ್ ಆನ್ ಮಾಡಿ
ಪತಿ: ಕೇಳಿಸಿ ಕೋ, ಮಿಕ್ಸಿ ಆನ್ ಮಾಡಿದ.. ಗರ್ರ್ ಶಬ್ಧ..
ಎರಡನೇ ದಿನ
ಪತ್ನಿ: ಎಲ್ಲಿದ್ದೀರಾ?
ಪತಿ: ಮನೇಲಿ ಡಾರ್ಲಿಂಗ್
ಪತ್ನಿ: ಒಂದ್ಸಲ ಮಿಕ್ಸರ್ ಆನ್ ಮಾಡಿ
ಪತಿ: ಕೇಳಿಸಿ ಕೋ, ಮಿಕ್ಸಿ ಆನ್ ಮಾಡಿದ.. ಗರ್ರ್ ಶಬ್ಧ..
ಮೂರನೇ ದಿನ
ಪತ್ನಿ ಸರ್ಪ್ರೈಸ್ ಕೊಡೋದಿಕ್ಕೆ ಗಂಡನಿಗೆ ಹೇಳದೆ ಮನೆಗೆ ಬಂದಳು… ಮನೆಯಲ್ಲಿ ಮಗ ಮಾತ್ರ ಇದ್ದ, ಗಂಡ ಇರಲಿಲ್ಲ. ಮಗನನ್ನು ನಿಮ್ಮಪ್ಪ ಎಲ್ಲಿ ಎಂದು ಕೇಳಿದಳು..
ಮಗ: ಗೊತ್ತಿಲ್ಲಮ್ಮ, ಆದರೆ ಎರಡು ದಿನದಿಂದ ಮಿಕ್ಸಿ ಎತ್ಕೊಂಡು ಹೋಗ್ತಾ ಇದ್ದಾರೆ…

ಗುಂಡ ಆಟವಾಡುತ್ತಿದ್ದ ಆಗ ಆ ರಸ್ತೇಲಿ ಬಂದ ವ್ಯಕ್ತಿ…
ಪುಟ್ಟ: ನಾನು ಈ ಏರಿಯಾಗೆ ಹೊಸಬ ಹೇರ್ ಕಟ್ ಶಾಪಿಗೆ ಹೇಗೆ ಹೋಗಬೇಕು ಹೇಳು?
ಗುಂಡ: ಅಷ್ಟು ಗೊತ್ತಿಲ್ವ ಅಂಕಲ್, ತಲೆ ಕೂದಲು ಬೆಳೆಸಿಕೊಂಡು ಹೋಗಬೇಕು…..

ಗುಂಡ ತರಗತಿಯಲ್ಲಿ ಶಿಕ್ಷಕಿಯನ್ನು ಕೇಳಿದ…
ಗುಂಡ: ನೀವು ನಮ್ಮನ್ನ ಇಷ್ಟು ಪ್ರಶ್ನೆ ಕೇಳ್ತೀರಾ ಈಗ ನಾನು ಕೇಳೋ ಪ್ರಶ್ನೆಗೆ ನೀವು ಉತ್ತರ ಹೇಳಿ…
ಮೇಡಂ: ಕೇಳೊ ಪುಣ್ಯಾತ್ಮ…
ಗುಂಡ: ಯಾವ ಮೀನು ನೀರಿನಲ್ಲಿ ಈಜೋದಿಲ್ಲ ಹೇಳಿ ನೋಡೋಣ…
ಮೇಡಂ: ಯೋಚನೆ ಮಾಡಿ,, ಅಂತ ಮೀನು ಇರಲ್ಲ..
ಗುಂಡ: ನಿಮಗೆ ಗೊತ್ತಿಲ್ಲ ಅಂತ ಹೇಳಿ….
ಮೇಡಂ: ಹೇಳೊ ಯಾವುದು? ಇಲ್ದೆ ಇದ್ರೆ ನಿನಗೆ ಸರಿಯಾಗಿ ಬೀಳುತ್ತೆ ಏಟು…
ಗುಂಡ: ಸತ್ತು ಹೋಗಿರೋ ಮೀನು..!!