ಸಾವಿಗೂ ಮುನ್ನ ಸುಶಾಂತ್ ಗೂಗಲ್‌ನಲ್ಲಿ ಏನು ಸರ್ಚ್ ಮಾಡಿದ್ದರು? ‘ಅವರಿಗೆ ಯಾವ ಚಿಂತೆ ಕಾಡುತ್ತಿತ್ತು..?’ ಸರ್ಚ್ ಹಿಸ್ಟರಿಯಿಂದ ಬಹಿರಂಗ!

ಜೂನ್ 14 ರಂದು ಮೃತ್ಯುವಶರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುತ್ತ ಹರಡಿರುವ ಅನುಮಾನಗಳನ್ನು, ಆರೋಪಗಳನ್ನು ಪರಿಹರಿಸಲು ಮುಂಬೈ ಹಾಗೂ ಬಿಹಾರದ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಸುಶಾಂತ್ ಸಾವಿಗೆ ಶರಣಾಗುವ ಮುನ್ನ ಗೂಗಲ್ ನಲ್ಲಿ ಏನೇನು ಸರ್ಚ್ ಮಾಡಿದ್ದರು ಎನ್ನುವ ಮಾಹಿತಿಯೊಂದು ಅವರ ಲ್ಯಾಪ್ ಟ್ಯಾಪ್ ಹಾಗೂ ಮೊಬೈಲ್ ನ ಫೊರೆನ್ಸಿಕ್ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಪ್ರಮುಖ ಪತ್ರಿಕೆಯೊಂದು ವರದಿ ಮಾಡಲಾಗಿದೆ ಎನ್ನಲಾಗಿದೆ. ಹಾಗಾದರೆ ಸಾವಿಗೆ ಮುನ್ನ ಸುಶಾಂತ್ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾದರೂ ಏನೂ ಅನ್ನೋದರ ಮಾಹಿತಿ ಇಲ್ಲಿದೆ.

ನಟ ಸುಶಾಂತ್ ಸಾವಿಗೆ ಶರಣಾಗೋ ಮೊದಲು ಗೂಗಲ್ ನಲ್ಲಿ ತನ್ನದೇ ಹೆಸರನ್ನು ಹಾಕಿ ಹೊಸ ಸುದ್ದಿಗಳೇನಾದರೂ ಇದ್ಯಾ ಎಂದು ಚೆಕ್ ಮಾಡಿದ್ದಾರೆ. ಅಲ್ಲದೇ ಅವರ ಸಾವಿಗೆ ಕೆಲವೇ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಅವರ ಮಾಜಿ ಸೆಕ್ರೆಟರಿ ದಿಶಾ ಸಾಲಿಯಾನ್ ಬಗ್ಗೆ ಕೂಡಾ ಸರ್ಚ್ ಮಾಡಿದ್ದಾರೆ. ಆಕೆಯ ಸಾವಿನ ಜೊತೆಗೆ ತನ್ನ ಹೆಸರೇನಾದರೂ ಸೇರ್ಪಡೆಯಾಗಿದೆಯಾ? ಎಂಬುದನ್ನು ತಿಳಿಯುವ ಪ್ರಯತ್ನವನ್ನು ಮಾಡಿದ್ದಾರೆ ಸುಶಾಂತ್. ಅಲ್ಲದೇ ಅದೇ ಅವರು ಗೂಗಲ್ ನಲ್ಲಿ ಬೈ ಪೋಲಾರ್ ಡಿಸಾರ್ಡರ್, ಸಿಜೊಪ್ರೇನಿಯಾ ಹಾಗೂ ಪೈನ್ ಲೆಸ್ ಡೆತ್ ಎಂಬ ವಿಷಯಗಳ ಬಗ್ಗೆ ಕೂಡಾ ಸರ್ಚ್ ಮಾಡಿದ್ದಾರೆ ಎನ್ನಲಾಗಿದೆ.

ಅವರ ಸಾವಿನ ತನಿಖೆ ನಡೆಸಿರುವ ಮುಂಬೈ ಪೋಲಿಸರು ಹೇಳುವ ಪ್ರಕಾರ ಈಗಾಗಲೇ ಅವರು 40 ಹೇಳಿಕೆಗಳನ್ನು ದಾಖಲು ಮಾಡಿದ್ದು, ಮಾಜಿ ಸೆಕ್ರೆಟರಿ ದಿಶಾ ಸಾಲಿಯನ್ ಸಾವಿನೊಂದಿಗೆ ತನಗೆ ಸಂಬಂಧವಿದೆ ಎಂಬ ವದಂತಿಗಳು ಮಾದ್ಯಮಗಳಿಗೆ ತಲುಪಿದೆ ಎಂದು ಸುಶಾಂತ್‌ಗೆ ತಿಳಿದು ಅವರಲ್ಲಿ ಆತಂಕವನ್ನುಂಟು ಮಾಡಿತ್ತು ಎನ್ನಲಾಗಿದೆ. ಅದೇ ಆತಂಕದಿಂದ ಸುಶಾಂತ್ ತನ್ನ ಹೆಸರನ್ನು ಗೂಗಲ್ ಮಾಡಿ ಸುದ್ದಿಗಳನ್ನು ಸರ್ಚ್ ಮಾಡಿರಬಹುದು ಎನ್ನುತ್ತಾರೆ ಪೋಲಿಸರು. ಈ ವಿಚಾರವಾಗಿ ಮೂರು ಜನ ಮನೋವೈದ್ಯರು ಮತ್ತು ಒಬ್ಬ ಮಾನಸಿಕ ರೋಗಗಳ ಚಿಕಿತ್ಸಕರ ಹೇಳಿಕೆಗಳನ್ನು ಕೂಡಾ ಪೊಲೀಸರು ದಾಖಲಿಸಿದ್ದಾರೆ.

ಅವರು ಹೇಳುವ ಪ್ರಕಾರ ಸುಶಾಂತ್ ಅವರಲ್ಲಿ ಚಿಕಿತ್ಸೆ ಪಡೆಯಲು ಈ ಹಿಂದೆ ಸಮಾಲೋಚನೆ ನಡೆಸಿದ್ದಾರೆ. ಆ ವೈದ್ಯರು ತಾವು ಸುಶಾಂತ್ ಅವರಿಗೆ ಚಿಕಿತ್ಸೆಯ ಭಾಗವಾಗಿ ಸೂಚಿಸಿದ್ದ ಔಷಧಿಗಳು ಬಗ್ಗೆ ಕೂಡಾ ಮಾಹಿತಿ ನೀಡಿದ್ದು, ತಾನು ಮಾಮೂಲಿ ಸ್ಥಿತಿಗೆ ತಲುಪಿದ್ದೇನೆ, ಸಮಸ್ಯೆ ಏನಿಲ್ಲ ಎಂದು ಭಾವಿಸಿದ ಸುಶಾಂತ್ ಆ ಔಷಧಿಗಳ ಸೇವನೆಯನ್ನು ನಿಲ್ಲಿಸಿದ್ದರು ಎಂದು ತಿಳಿದುಬಂದಿದೆ. ಪೋಲಿಸರು ಸುಶಾಂತ್ ಅವರ ಗೆಳೆಯ ಸಿದ್ಧಾರ್ಥ್ ಪಠಾಣಿ, ಅಡುಗೆಯವನು ಮತ್ತು ಅವರ ಕೇರ್ ಟೇಕರ್ ಅನ್ನು ಕೂಡಾ‌ ವಿಚಾರಣೆ ಮಾಡಿದ್ದು ಅವರ ಹೇಳಿಕೆಗಳನ್ನು ಕೂಡಾ ದಾಖಲಿಸಿಕೊಂಡಿದ್ದಾರೆ.

ಚಿತ್ರರಂಗದ ಕೆಲವರನ್ನು ಕೂಡಾ ವಿಚಾರಣೆ ಮಾಡಲಾಗಿದ್ದು ಅವರ ಹೇಳಿಕೆಗಳನ್ನು ಕೂಡಾ ದಾಖಲಿಸಲಾಗಿದೆ. ಇನ್ನು ಬಿಹಾರದ ಶಾಸನ ಸಭೆಯಲ್ಲಿ ಕೂಡಾ ನಿನ್ನೆ ಸುಶಾಂತ್ ಅವರ ಸಾವಿನ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕೆಂಬ ಶಾಸನ ಸಭೆಯ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ ಎನ್ನಲಾಗಿದೆ.