ಸೊಸೆ ಐಶ್ವರ್ಯ ಬಗ್ಗೆ ಕೆಟ್ಟದಾಗಿ ಪ್ರಶ್ನೆ ಮಾಡಿದವನಿಗೆ ಸರಿಯಾದ ಉತ್ತರ ಕೊಟ್ಟ ಅಮಿತಾಭ್ ಬಚ್ಚನ್! ಟ್ರೋಲರ್’ಗೆ ಭಾರಿ ಮುಖಭಂಗ!
ನಟ ನಟಿಯರು ಟ್ರೋಲಿಗರಿಗೆ ತುತ್ತಾಗುವದು ಹೊಸ ವಿಷಯವೇನಿಲ್ಲ. ಆದರೆ ಕೆಲವೊಂದು ಸಲ ನೆಟ್ಟಿಗರು ಟ್ರೋಲ್ ಮಾಡುತ್ತಾ ತಮ್ಮ ಸೀಮೆಯನ್ನು ದಾಟಿ ಆಡಬಾರದ ಪದಗಳನ್ನು ಆಡಿ ತಮ್ಮ ಕೆಳಮಟ್ಟದ ಅಸಹ್ಯವಾದ ವಿಚಾರಗಳನ್ನು ಹೊರ ಹಾಕುತ್ತಾರೆ. ಆಗ ಕೆಲವು ನಟ ನಟಿಯರು ಇಂಥವರು ಮಾಡಿದ ಕಾಮೆಂಟ್ ಗಳಿಗೆ ಡೋಂಟ್ ಕೇರ್ ಅಂತ ದುರ್ಲಕ್ಷ ಮಾಡಿ ಬಿಡುತ್ತಾರೆ, ಇನ್ನು ಕೆಲವರು ಅವರಿಗೆ ಅವರ ಭಾಷೆಯಲ್ಲಿಯೇ ಸಖತ್ ಉತ್ತರ ಕೊಡುತ್ತಾರೆ, ಮತ್ತು ಇನ್ನು ಕೆಲವರು ತುಂಬಾ ಮಾರ್ಮಿಕವಾದ ಮಾತುಗಳಲ್ಲಿಯೇ ಮುಖಭಂಗ ಮಾಡುತ್ತಾರೆ. ಹೀಗಾಗಿ ಸೋಶಿಯಲ್ ಮಿಡಿಯಾದಲ್ಲಿ ಇವುಗಳ ಬಗ್ಗೆ ತುಂಬಾ ಚರ್ಚೆಯಾಗುತ್ತದೆ.

ಇಂಥದೇ ಒಂದು ವಿಷಯವನ್ನು ಇಲ್ಲಿ ಹೇಳುತ್ತಿದ್ದೇವೆ. ಶ್ರಾವಣ ಮಾಸದ ನಿಮಿತ್ಯವಾಗಿ ಅಮಿತಾಭ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಅಭಿಮಾನಿಗಳಿಗೆ ದೇಶದ ಪ್ರಜೆಗಳಿಗೆ ಶುಭಾಶಯಗಳನ್ನು ಕೋರಿದ್ದರು. ಇದೇ ಪೋಸ್ಟಿಗೆ ಸಂಬಂಧಿಸಿ ಅಕ್ಷಯ್ ಶರ್ಮಾ ಹೆಸರಿನ ಟ್ರೋಲರ್ ‘ ‘ಐಶ್ವರ್ಯ ಕಹಾ ಹೈ ರೆ ಬೂಢೇ’ ಅಂದ್ರೆ ‘ಐಶ್ವರ್ಯ ಎಲ್ಲಿದ್ದಾಳೋ ಮುದಿಯ’ ಎಂದು ತರಲೆಯಾಗಿ ಪ್ರಶ್ನೆ ಕೇಳಿದ್ದಾನೆ. ಹೆಚ್ಚುವರಿಯಾಗಿ ಅಮಿತಾಭ್ ಅವರು ಇಂಥ ಕಾಮೆಂಟ್ ಗಳಿಗೆ ಉತ್ತರಿಸಲು ಹೋಗುವದಿಲ್ಲ. ಆದರೆ ಇದಕ್ಕೆ ಮಾತ್ರ ಅವರಿಗೆ ಉತ್ತರಿಸದೆ ಸುಮ್ಮನೆ ಕೂಡಲು ಆಗಿಲ್ಲ. ಅವರು ಕೊಟ್ಟ ಉತ್ತರದಿಂದ ಅಕ್ಷಯ್ ಶರ್ಮಾ ಈ ಟ್ರೋಲರ್ ಗೆ ಚೆನ್ನಾಗಿಯೇ ಮುಖಭಂಗವಾಗಿದೆ. ಅಮಿತಾಭ್ ಅವರು ಕೊಟ್ಟ ಉತ್ತರವೇನು ನೋಡಿ, ‘ವೋ ವಹಾ ಹೈ ಜಹಾ ಆಪ್ ಕಭೀ ಪಹುಚ್ ನಹೀ ಪಾಯೆಂಗೆ’ ‘ನೀನೆಂದು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಅಂಥ ಸ್ಥಾನದಲ್ಲಿದ್ದಾಳೆ’ ಎಂದು ಏಟಿಗೆ ಸರಿಯಾಗಿ ಎದಿರೇಟು ಕೊಟ್ಟಾಗ ಟ್ರೋಲರ್ ಮೂರ್ಛೆ ಹೋಗುವದೊಂದೆ ಬಾಕಿ. ಈ ಉತ್ತರಕ್ಕೆ ಆತನಿಗೆ ಸರಿಯಾಗಿ ಬುದ್ಧಿ ಬಂದು ತನ್ನ ಮಾತಿನ ಧಾಟಿ ಬದಲಿಸಿ, ‘ಎನ್ ಸಾರ್ ತಪ್ಪಾಗಿ ಅರ್ಥೈಸಿಕೊಂಡು ಬಿಟ್ರಿ, ನಿಮ್ಮನ್ನು ಇಷ್ಟ ಪಡುವವರ ಮೇಲೆ ಇಷ್ಟೊಂದು ಬೇಸರವಾಗ್ತಾರಾ? ಎಂದಿದ್ದಾನೆ.