OMG! ಬೆಟ್ಟದ ತುತ್ತ ತುದಿಯ ಮೇಲೆ ಸ್ಟಂಟ್ ಮಾಡಿದ ಹುಡುಗಿ!

ಊಹಿಸಲು ಅಸಾಧ್ಯವಾದ, ಮೈನವಿರೇಳಿಸುವ, ಭಯಾನಕ ಹಾಗೂ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವಲ್ಲಿ ಬಲಿಷ್ಠವಾದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೊಂದಿರುವ ಪುರುಷರಿಂದ ಮಾತ್ರ ಮಾಡಲು ಸಾಧ್ಯ ಎನ್ನುವ ಆಲೋಚನೆ ನಿಮ್ಮದಾಗಿದ್ದರೆ ಅದನ್ನು ಬದಲಿಸಿ. ಕಾರಣ ಇಲ್ಲೊಬ್ಬ 27 ವರ್ಷದ ಮಹಿಳೆ ಸವಾಲೆನಿಸುವಂತಹ ಸಾಹಸವನ್ನು, ಅಪಾಯಕಾರಿಯಾದ ತಾಣಗಳಲ್ಲಿ ಪ್ರದರ್ಶಿಸುವ ಮೂಲಕ ನಿಮ್ಮ ಆಲೋಚನೆಯನ್ನು ಬದಲಿಸಿ ಬಿಡುತ್ತಾರೆ. ಏಕೆಂದರೆ ಈ ಮಹಿಳೆ ಮಾಡುವ ಸ್ಟಂಟ್ ಗಳನ್ನು ನೋಡಿದಾಗ ಒಂದು ಕ್ಷಣ ಬೆರಗಾಗುವುದು ಮಾತ್ರವೇ ಅಲ್ಲದೇ ರೋಮಾಂಚನ ಕೂಡಾ ಆಗುತ್ತದೆ.

ಎತ್ತರದ ಪರ್ವತಗಳ ತುತ್ತ ತುದಿಯಲ್ಲಿ, ಮುಂದಕ್ಕೆ ಚಲಿಸುತ್ತಿರುವ ವಾಹನಗಳ ಮೇಲೆ, ಸಿಗ್ನಲ್ ಗಳ ಬಳಿ ಟ್ರಾಫಿಕ್ ಲೈಟ್ ಗಳನ್ನು ಹಾಕಿರುವ ಕಂಬದ ಮೇಲೆ ಹೀಗೆ ವಿಭಿನ್ನವಾದ ಕಡೆಗಳಲ್ಲಿ ತನ್ನ ತೋಳ್ಬಲದ ಮೂಲಕ ಸಾಹಸವನ್ನು ಪ್ರದರ್ಶಿಸುವ ಈ ಸಾಹಸಿ ಮಹಿಳೆಯ ಹೆಸರು ಸ್ಟಿಫಾನಿ ಮಿಲ್ಲಿಂಜರ್. ಮೂಲತಃ ಆಸ್ಟ್ರಿಯಾದವರಾದ ಈಕೆ ವಿಶ್ವ ವಿಖ್ಯಾತ ಜಿಮ್ನಾಸ್ಟ್. ತನ್ನ ತೋಳ್ಬಲದ ಸಹಾಯದಿಂದ ಮೈನವಿರೇಳಿಸುವ ಆ್ಯಕ್ರೋಬ್ಯಾಟ್ ಸ್ಟಂಟ್ ಗಳನ್ನು ಮಾಡುವುದರಲ್ಲಿ ಈಕೆ ಸಾಟಿಯಿಲ್ಲದ ಸಮತೋಲವನ್ನು ಸಾಧಿಸಿದ್ದಾರೆ. ಈಕೆ ತಮ್ಮ ಅದ್ಭುತ ಸ್ಟಂಟ್ ಗಳನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇನ್ಸ್ಟಾಗ್ರಾಂ ನಲ್ಲಿ 4 ಲಕ್ಷ ಮೀರಿದ ಫಾಲೋಯರ್ಸ್ ಹೊಂದಿರುವ ಸ್ಟಿಫಾನಿ ಅವರ ವೀಡಿಯೋಗಳನ್ನು ಆಕೆಯ ಅಸಂಖ್ಯಾತ ಅಭಿಮಾನಿಗಳು ವೀಕ್ಷಿಸಿದ್ದಾರೆ.

ಈಕೆ ಜಿಮ್ನಾಸ್ಟಿಕ್ಸ್ ನಲ್ಲಿ ಯಾವ ಮಟ್ಟದ ಪ್ರಬುದ್ಧತೆ ಪಡೆದಿದ್ದಾರೆ ಎಂದರೆ ಆಕೆ ತಮ್ಮ ದೇಹವನ್ನು ವಿಚಿತ್ರ ಮತ್ತು ಅಸ್ವಾಭಾವಿಕ ಎನ್ನುವಂತೆ ಟರ್ನ್ ಮಾಡುವ, ಬೆಂಡ್ ಮಾಡುವ ಸಾಮರ್ಥ್ಯ ಹೊಂದಿದ್ದು ನೋಡುಗರಿಗೆ ಮನರಂಜನೆ ಜೊತೆಗೆ ಅದ್ಭುತ ಎನಿಸುವ ಅನುಭವ ‌ನೀಡುತ್ತದೆ. ಬೆಟ್ಟದ ತುತ್ತತುದಿಯಲ್ಲಿರುವ ಒಂದು ಬಂಡೆಯ ಮೇಲೆ ಈಕೆ ಮಾಡುವ ಸ್ಟಂಟ್ ನಲ್ಲಿ, ಕೈಗಳ ಮೇಲೆ ದೇಹದ ಭಾರವನ್ನು ಬಿಟ್ಟು ಮಾಡುವ ಸ್ಟಂಟ್ ನೋಡುವಾಗ ಎದೆಯಲ್ಲೊಂದು ಕಂಪನ ಉಂಟಾಗುತ್ತದೆ.‌ ಸ್ಟಿಫಾನಿ ಒಂದು ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ಅಂತಿಮ ಹಂತದವರೆಗೆ ಕೂಡಾ ತಲುಪಿದ್ದರು.

ಸ್ಟಿಫಾನಿ ಹಂಚಿಕೊಳ್ಳುವ ವೀಡಿಯೋಗಳನ್ನು ನೋಡಿದವರು ಎಂತಹ ಅದ್ಭುತ, ಈಕೆಗೆ ಭಯ ಎಂದರೇನು ಎಂಬುದೇ ತಿಳಿದಿಲ್ಲ, ಎಂತಹ ಅಪಾಯಕಾರಿ ಸಾಹಸಗಳು ಇವು ಎಂದೆಲ್ಲಾ ಕಾಮೆಂಟ್ ಮಾಡುವ ಜೊತೆಗೆ ಆಕೆಯ ಆಸಕ್ತಿ ಹಾಗೂ ಧೈರ್ಯವನ್ನು ಮೆಚ್ಚುತ್ತಲೇ ಆದಷ್ಟು ಹುಷಾರಾಗಿರುವಂತೆ ಸಲಹೆಗಳನ್ನು ಸಹಾ ನೀಡುತ್ತಾರೆ. ಸ್ಟಿಫಾನಿ ತರಬೇತಿ ಪಡೆದ ಜಿಮ್ನಾಸ್ಟ್ ಆಗಿರುವುದರಿಂದ ಇಂತಹ ಅದ್ಭುತ ಸಾಹಸಕ್ಕೆ ಕೈ ಹಾಕಿರುವುದು ನಿಜವೇ ಆದರೂ ಆಕೆ ಆರಿಸಿಕೊಳ್ಳುವ ಪ್ರದೇಶಗಳು ಮಾತ್ರ ಊಹೆಗೆ ಮೀರಿದ್ದು ಎಂಬುದು ಮಾತ್ರ ನಿಜ. ಒಂದಂತೂ ವಾಸ್ತವ ತರಬೇತಿಯಿಲ್ಲದೆ ಇಂತಹ ಸ್ಟಂಟ್ ಮಾಡಲು ಕೈ ಹಾಕುವುದು ಮಾತ್ರ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ.

ಸ್ಟಿಫಾನಿ ಮಾಡಿದ ಇನ್ನೂ ಕೆಲವು ಸ್ಟಂಟ್ ಗಳು ನೋಡಿ