ಫನ್ನಿ ಜೋಕ್ಸ್ : ಒಬ್ಬಳು ಸುಂದರ ಸೆಕ್ರೆಟರಿ ಬಾಸ್ ಆಫೀಸಿನಿಂದ ಸಿಟ್ಟಿನಿಂದ ಹೊರಗೆ ಬಂದಳು, ಸಹೋದ್ಯೋಗಿಗಳು ಕೇಳಿದರು- ಯಾಕೆ ಏನಾಯಿತು? ಸೆಕ್ರೆಟರಿ ಸಿಟ್ಟಿನಿಂದ – ಬಾಸ್ ನನ್ನನ್ನು ಇವತ್ತು ಸಂಜೆ…

ಆಧುನಿಕ ಜೀವನ ಶೈಲಿಯಲ್ಲಿ ಜನರು ಬಹುತೇಕ ಒತ್ತಡದಲ್ಲಿಯೇ ಬದುಕು ನಡೆಸುವಂತಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೊರೊನಾ ಆರ್ಭಟದ ನಡುವೆ ಮನಸ್ಸಿಗೆ ಸಮಾಧಾನ ಎನ್ನುವುದೇ ದೂರವಾಗಿದೆ. ಆದರೆ ನಗು ಹಾಗೂ ಸಂತಸ ನಮ್ಮ ಜೊತೆಯಾದರೆ ಅದು ನಮ್ಮ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ಆದ್ದರಿಂದಲೇ ನಗು ಎಂಬ ಸಿದ್ಧೌಷಧವನ್ನು ನೀಡಲು, ಮನಸ್ಸಿಗೆ ಸ್ವಲ್ಪ ಖುಷಿ, ಮುಖದಲ್ಲಿ ಒಂದಿಷ್ಟು ನಗೆ, ಆತಂಕ ಹಾಗೂ ಸಮಸ್ಯೆಗಳಿಂದ ಸ್ವಲ್ಪ ನೆಮ್ಮದಿಯನ್ನು ನೀಡಲು ನಾವು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಗಳಲ್ಲಿ ಜನಪ್ರಿಯವಾದ ಕೆಲವು ಹಾಸ್ಯ ಚಟಾಕಿಗಳನ್ನು, ನಗೆ ಹನಿಗಳನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಬನ್ನಿ ಹಾಗಾದರೆ ನಾವೂ ನಕ್ಕು, ಈ ಜೋಕ್ಸ್ ಗಳನ್ನು ಹಂಚಿಕೊಂಡು ಇತರರನ್ನು ಕೂಡಾ ನಗೆಗಡಲಿನಲ್ಲಿ ತೇಲಿಸೋಣ.

ಜೋಕ್ 1 :

ಒಂದು ಕೋಳಿ ತನ್ನ ಯಜಮಾನನನ್ನು ಅವನ ಕೋಣೆಯ ಕಿಟಕಿಯ ಬಳಿ ಕುಳಿತು ನೋಡುತ್ತಾ ಇತ್ತು.
ಆ ಕೋಳಿಯ ಮಾಲೀಕ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಆತನ ಪತ್ನಿ ಅವನ ಪಕ್ಕದಲ್ಲಿ ಕುಳಿತು ಆರೈಕೆ ಮಾಡುತ್ತಾ,

ಮಾಲೀಕರ ಪತ್ನಿ: “ನಿಮಗೆ ತುಂಬಾ ಜ್ವರವಿದೆ,
ನಾನು ನಿಮಗಾಗಿ ಚಿಕನ್ ಸೂಪ್ ತಯಾರಿಸುತ್ತೇನೆ “

ಆ ಮಾತು ಕೇಳಿದ ಕೂಡಲೇ ಕೋಳಿಯ ತಲೆ ತಿರುಗಿತು.. ಅದು ಮಾಲೀಕನ ಪತ್ನಿಯ ಕಡೆ ನೋಡುತ್ತಾ, ಯಾವುದಕ್ಕೂ ಒಂದ್ಸಲ ಪ್ಯಾರೆಸಿಟಮಾಲ್ ಮಾತ್ರೆ ಕೊಟ್ಟು ನೋಡಿ ಎಂದು ಹೇಳಿತು.

ಜೋಕ್ : 2

ಒಮ್ಮೆ ಪಪ್ಪುಗೆ ಅವರ ಟೀಚರ್ ನೀನು ಮನೆಯಲ್ಲಿ ನನಗೆ ಎಲ್ಲಾ ಗೊತ್ತು ಎಂದು ಹೇಳಿ ನೋಡು ಎಂದರಂತೆ. ಪಪ್ಪು ಆ ದಿನ ಶಾಲೆಯಿಂದ ಮನೆಗೆ ಬಂದ ಮೇಲೆ,

ಪಪ್ಪು(ಅಪ್ಪನ ಬಳಿ): ಅಪ್ಪಾ ನಂಗೆ ಎಲ್ಲಾ ಗೊತ್ತು?

ಅಪ್ಪ (ಭಯದಿಂದ) : ಅಯ್ಯೋ ಪಪ್ಪು ಪಾಪಾ ಅವಳು ಕೆಲಸದವಳು ಆಗಾಗ ನನ್ನ ಭೇಟಿಯಾಗೋಕೆ ಬರ್ತಾಳೆ, ತಗೋ 100 ರೂಪಾಯಿ.. ಯಾರಿಗೂ ಹೇಳಬೇಡ…‌

ಪಪ್ಪುಗೆ ಏನೂ ಅರ್ಥ ಆಗ್ಲಿಲ್ಲ..

ಪಪ್ಪು(ಅಮ್ಮನ ಬಳಿ): ಅಮ್ಮ ನಂಗೆ ಎಲ್ಲಾ ಗೊತ್ತು.

ಅಮ್ಮ ( ಭಯದಿಂದ): ತಗೋ 200 ರೂಪಾಯಿ. ರಾಮು ಸುಮ್ಮನೆ ರೂಂ ಕ್ಲೀನ್ ಮಾಡೋಕೆ ಬರೋದು, ಅದನ್ನು ಯಾರಿಗೂ ಹೇಳಬೇಡ ..

ಪಪ್ಪುಗೆ ಈಗಲೂ ಏನೂ ಅರ್ಥ ಆಗಲಿಲ್ಲ…‌

ಪಪ್ಪು (ಕೆಲಸದವನ ಬಳಿ): ರಾಮು ನಂಗೆ ಎಲ್ಲಾ ಗೊತ್ತು..

ರಾಮು( ಪ್ರೀತಿಯಿಂದ): ಬಾ ಮಗು ಎಂದು ಅಪ್ಪಿಕೊಂಡು, ನಿಮ್ಮ ಅಪ್ಪ ನಾನೇ ಅಂತ ಗೊತ್ತಾಗಿ ಬಿಡ್ತಾ??

ಪಪ್ಪುಗೆ ಈಗ ಪ್ರಜ್ಞೆ ತಪ್ಪಿ ಬೀಳೋದು ಒಂದು ಬಾಕಿ.

ಜೋಕ್ : 3

ಶಿಕ್ಷಕಿ ಪಪ್ಪುಗೆ ನಿನ್ನ ನೀನು ಸುಧಾರಿಸಿಕೊಂಡು,ಒಳ್ಳೆ ಗುಣ ಬೆಳೆಸಿಕೊಳ್ಳಬೇಕು, ಒಳ್ಳೆ ಕ್ಯಾರೆಕ್ಟರ್ ನಿನ್ನದು ಅನಿಸಿಕೊಳ್ಳಬೇಕು ಅಂದ್ರೆ ನಿಮ್ಮ ಶಿಕ್ಷಕಿಯನ್ನು ನಿಮ್ಮ ತಾಯಿಯಂತೆ ಪರಿಗಣಿಸಿಬೇಕು

ಪಪ್ಪು- ಮೇಡಂ, ನೀವು ಏನು ಮಾತಾಡ್ತಾ ಇದ್ದೀರಾ?
ಹಾಗೇನಾದ್ರೂ ಅನ್ಕೊಂಡು ನನ್ನ ಕ್ಯಾರೆಕ್ಟರ್ ಸರಿ ಮಾಡೋಕೆ ಹೋದ್ರೆ ಆದ್ರಿಂದ ನಮ್ಮ ತಂದೆಯ ಕ್ಯಾರೆಕ್ಟರ್ ಹಾಳಾಗುತ್ತೆ !!

ಜೋಕ್ : 4

ಗಂಡ – ನಾನು ನಿನ್ನ ಮೇಲೆ ಕೋಪ ಮಾಡಿಕೊಂಡು ಕಿರುಚಾಡಿದಾಗ, ನಿನಗೆ ಬರೋ ಕೋಪಾನ ನೀನು ಹೇಗೆ ಹೊರಗೆ ಹಾಕ್ತೀಯಾ?

ಹೆಂಡತಿ – ಟಾಯ್ಲೆಟ್ ಕ್ಲೀನ್ ಮಾಡಿ.

ಗಂಡ – ಹಾಹಾಹಾಹಾ… ಎಂತ ಹುಚ್ಚಿ ಇವಳು..

ಹೆಂಡತಿ- ನಾನು ಕೋಪ ಬಂದಾಗ ಟಾಯ್ಲೆಟ್ ತೊಳೆಯೋದು ನಿಮ್ಮ ಟೂತ್ ಬ್ರಷ್‌ನಿಂದ..‌ ಈಗಲೂ ಜೋರಾಗಿ ನಗಾಡಿ ನೋಡೋಣ..

ಜೋಕ್: 5

ರೋಗಿ: ಡಾಕ್ಟ್ರೇ ನನಗೆ ಈ ಮಧ್ಯೆ ಶಬ್ಧಗಳು ಮಾತ್ರ ಕೇಳಿಸುತ್ತೆ ಆದರೆ ವ್ಯಕ್ತಿಗಳು ಮಾತ್ರ ಕಾಣಿಸೋದೆ ಇಲ್ಲ.

ವೈದ್ಯರು: ಭಯ ಪಡಬೇಡಿ, ಬಹುಶಃ ದೃಷ್ಟಿ ದೋಷ ಸಮಸ್ಯೆ ಉಂಟಾಗಿರಬೇಕು, ಚೆಕ್ ಮಾಡೋಣ ಇರಿ.

ರೋಗಿ : ಸರಿ ಡಾಕ್ಟರ್ ಹಾಗೇ ಮಾಡಿ..

ವೈದ್ಯರು: ನಿಮಗೆ ಈ ಸಮಸ್ಯೆ ಯಾವಾಗಿಂದ ಕಾಡ್ತಾ ಇದೆ?

ರೋಗಿ: ಯಾವಾಗಲೂ ಏನು ಸಮಸ್ಯೆ ಇಲ್ಲ ಡಾಕ್ಟ್ರೇ, ಜಸ್ಟ್ ಫೋನ್ ಬಂದಾಗ ಮಾತ್ರ ಈತರ ಆಗುತ್ತೆ..

ಆ ಮಾತು ಕೇಳಿ ಈಗ ಡಾಕ್ಟರ್ ಶಾಕ್..

ಜೋಕ್ : 6.
ಶಿಕ್ಷಕಿ : ಯಾರು ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುತ್ತಾರೋ ಅವರೇ ನಿಜವಾದ ಮನುಷ್ಯರು.
ವಿದ್ಯಾರ್ಥಿ: ಆದರೆ ಪರೀಕ್ಷೆಯ ಸಮಯದಲ್ಲಿ, ನೀವೂ ಮನುಷ್ಯರಾಗಿ ಇರುವುದಿಲ್ಲ, ಅಷ್ಟೇ ಯಾಕೆ ಬೇರೆ ಅವರನ್ನು ಕೂಡಾ ಮನುಷ್ಯರಾಗಿ ಇರೋಕೆ ಬೀಡೋದು ಇಲ್ಲ…‌