ನಿಸರ್ಗದ ‘ಈ’ ಚಮತ್ಕಾರ ಸೆರೆ ಹಿಡಿಯಲು ಜೀವನದ 19 ವರ್ಷ ಖರ್ಚು ಫೋಟೋಗ್ರಾಫರ್! ನೋಡಿ ಈ ವಿಡಿಯೋ ಮತ್ತು ಫೋಟೋ!
ಹಮ್ಮಿಂಗ್ ಬರ್ಡ್ ಜಗತ್ತಿನ ಎಲ್ಲಕ್ಕಿಂತ ಚಿಕ್ಕ ಆಕಾರದ ಪಕ್ಷಿಯಂದು ಗುರುತಿಸಲಾಗುವದು. ಮುಂಜಾನೆಯ ಸಮಯದಲ್ಲಿ ಇದರ ಮುಖ ನೋಡುವದು ಎಲ್ಲಕ್ಕಿಂತ ಶುಭದಾಯಕ ವಾಗಿದೆ ಎಂದು ಅನೇಕರು ನಂಬುತ್ತಾರೆ. ಕೇವಲ 3 ರಿಂದ 4 ಇಂಚು ಆಕಾರದ ಈ ಪಕ್ಷಿಯನ್ನು ನಿಸರ್ಗದ ಒಂದು ಅದ್ಭುತವಾದ ಕೊಡುಗೆಯಂದೇ ಪರಿಗಣಿಸಲಾಗುವದು. ಅಷ್ಟೇ ಅಲ್ಲದೆ ಈ ಪಕ್ಷಿಯ ಇನ್ನೊಂದು ವಿಶೇಷತೆ ಏನೆಂದರೆ ಯಾವಾಗ ಮುಂಜಾನೆಯ ಸಮಯದಲ್ಲಿ ಸೂರ್ಯ ಕಿರಣಗಳು ಈ ಹಮ್ಮಿಂಗ್ ಬರ್ಡ್ ನ ರೆಕ್ಕೆಯಿಂದ ಹಾಯ್ದು ಹೋಗುತ್ತವೆಯೋ ಆಗ ಅಲ್ಲಿ ಕಾಮನಬಿಲ್ಲು ನಿರ್ಮಾಣವಾಗುವದು. ಈ ಒಂದು ಕ್ಷಣದ ಚಿತ್ರವನ್ನು ಸೆರೆಹಿಡಿಯಲು ಫೋಟೋಗ್ರಾಫರ್ ಗಂಟೆಯಲ್ಲ, ದಿವಸವಲ್ಲ, ಸುಮಾರು 19 ವರ್ಷಗಳ ವರೆಗೆ ಕಾಯ್ದು ಆ ಅದ್ಭುತ ಕ್ಷಣವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಈ ಒಂದು ಅದ್ಭುತವಾದ ಫೋಟೋ ಸರೆ ಹಿಡಿದ ಫೋಟೋಗ್ರಾಫರ್ ಯಾರು ಅಂದರೆ ಕ್ರಿಶ್ಚಿಯನ್ ಸ್ಪೆನ್ಸರ್!.

ಹಮಿಂಗ್ ಬರ್ಡ್ ಕಾಣಲು ಚಿಕ್ಕದಿದ್ದರೂ ಅದು ಪ್ರತಿ ಗಂಟೆಗೆ ಸುಮಾರು 54 ಕಿಲೋಮೀಟರ್ ನಷ್ಟು ವೇಗದಿಂದ ಹಾರಾಡುವದು. ಅಷ್ಟೇ ಅಲ್ಲ ಒಂದು ಸೆಕೆಂಡ್ ನಲ್ಲಿ ತನ್ನ ರೆಕ್ಕೆಗಳನ್ನು ಸುಮಾರು 80 ಸಲ ಬೀಸುವದು. ಈ ರೆಕ್ಕೆಯಿಂದ ಕಾಮನಬಿಲ್ಲಿನ ಆವಿಷ್ಕಾರ ಸೆರೆ ಹಿಡಿಯುವ ಸಲುವಾಗಿ ಆ ಪಕ್ಷಿ ಸೂರ್ಯನ ಎದುರು ಇರುವದು ಕೂಡಾ ತುಂಬಾ ಮಹತ್ವದ್ದಾಗಿದೆ. ಇದರ ಮೇಲಿಂದ ಕ್ರಿಶ್ಚಿಯನ್ ಸ್ಪೆನ್ಸರ್ ಅವರು ಎಷ್ಟು ಕಷ್ಟ ಪಟ್ಟಿರಬಹುದು ಎಂಬುದು ಸಹಜವಾಗಿಯೇ ಅರಿವಾಗುತ್ತದೆ.
ಈ ಫೋಟೋ ತೆಗೆಯುವ ಸಲುವಾಗಿ ಆಸ್ಟ್ರೇಲಿಯಾ ಫೋಟೋಗ್ರಾಫರ್ ಸುಮಾರು 19 ವರ್ಷ ಬ್ರಾಜಿಲ್ ದ ಇಟಾಟಿಯಾ ನ್ಯಾಷನಲ್ ಪಾರ್ಕ್ ನಲ್ಲಿ ನೆಲೆಯೂರಿ ಕುಳಿತಿದ್ದರು. ಇವರ ಈ ಅದ್ಭುತ ಸಾಧನೆ ನೋಡಿ ಎಲ್ಲಡೆಗೂ ಅವರ ಗುಣಗಾನ ಮಾಡಲಾಗುತ್ತಿದೆ. ಈ ಫೋಟೋಗ್ರಾಫಿಯ ಸಲುವಾಗಿ 2011 ರಲ್ಲಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಹಮ್ಮಿಂಗ್ ಬರ್ಡ್ ನ ಮೋಡಿ ಮಾಡುವ ದೃಶ್ಯಗಳನ್ನು ಸೆರೆಹಿಡಿದು ಕ್ರಿಶ್ಚಿಯನ್ ಸ್ಪೆನ್ಸರ್ ಅವರು ಒಂದು ಸುಂದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ‘The dance of time’ ಈ ಹೆಸರಿನಿಂದ ಯೂಟ್ಯೂಬ್ ನಲ್ಲಿ ಉಪಲಬ್ಧವಿದೆ.
ಪ್ರಾಣಿ ಜಗತ್ತಿನಲ್ಲಿ ಇಂತಹ ಅನೇಕ ಅವಿಸ್ಮರಣೀಯ ಘಟನೆಗಳ ದರ್ಶನವಾಗುತ್ತದೆ. ಆದರೆ ಅದರ ಬಗ್ಗೆ ತುಂಬಾ ಪ್ರೀತಿ ಮತ್ತು ಸಂಯಮದಿಂದ ಅಭ್ಯಾಸ ಮಾಡಬೇಕಾಗುವದು. ಇಲ್ಲಿ ಮನುಷ್ಯನು ಕೂಡಾ ಒಬ್ಬ ಆವಿಷ್ಕಾರ ಹೊಂದಿದ ಪ್ರಾಣಿಯಾಗಿದ್ದಾನೆ. ಈ ಘಟನೆಯಿಂದ ನಮಗೆ ತಿಳಿದು ಬರುವದು ಏನೆಂದರೆ ನಮಗೆ ಇನ್ನು ಹಲವಾರು ಸಂಗತಿಗಳ ಕುರಿತು ತಿಳಿದುಕೊಳ್ಳುವದು ಬಾಕಿ ಇದೆ. ನಮ್ಮ ಸುತ್ತಮುತ್ತಲಿನ ಅನೇಕ ವಿಚಿತ್ರ ಪ್ರಾಣಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಅದರ ಅಭ್ಯಾಸ ಮಾಡುವದು ತುಂಬಾ ಮಹತ್ವದ್ದಾಗಿದೆ.