OMG! ರಾಮ ಜನ್ಮಭೂಮಿ ಟ್ರಸ್ಟ್ ಗೆ ನಾಲ್ಕೇ ದಿನದಲ್ಲಿ ಹರಿದು ಬಂತು “ಇಷ್ಟೊಂದು” ಕೋಟಿ ರೂಪಾಯಿ ಹಣ!

ಶತಕಾನೂ ಶತಕಗಳ ದೊಡ್ಡ ಗ್ಯಾಪ್ ನಂತರ ಅಯೋಧ್ಯೆಯಲ್ಲಿ ಕೊನೆಗೂ ಭಾರತೀಯರ ಆರಾಧ್ಯ ದೈವ ಶ್ರೀರಾಮನ ವಾಪಾಸಾತಿ ಆಯಿತು. ಮೊನ್ನೆ ದೊಡ್ಡ ವಿಜೃಂಭಣೆಯಿಂದ ಇಲ್ಲಿ ಭೂಮಿ ಪೂಜನದ ಕಾರ್ಯಕ್ರಮಗಳು ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ನಡೆಯಿತು.

ಇದಕ್ಕೂ ಮೊದಲಿನಿಂದ ರಾಮ ಜನ್ಮಭೂಮಿಯ ಟ್ರಸ್ಟಿಗೆ ಹಣದ ಮಾಹಾಸಗರವೇ ಹರಿದು ಬರುತ್ತಿದೆ. ಶ್ರೀರಾಮನ ಭಕ್ತರು ಸಹೃದಯದಿಂದ ದಾನ ಮಾಡುತ್ತಿದ್ದಾರೆ. ಹೀಗಾಗಿ ಅಯೋಧ್ಯೆಯ ಶ್ರೀರಾಮ ಶ್ರೀಮಂತಿಕೆಯಲ್ಲಿ ಆಸೀನರಾದರು.

ಶ್ರೀರಾಮಚರಿತ ಮಾನಸ ಪ್ರತಿಷ್ಠಾನದ ಅಂತಾರಾಷ್ಟ್ರೀಯ ವಕ್ತಾರರಾದ ಶ್ರೀ ಸಂತ ಮುರಾರಿ ಬಾಪು ಅವರು ಮಾಡಿದ ಆವ್ಹಾನದ ಮೇರೆಗೆ ಅವರ ಅನುಯಾಯಿಗಳು ಬರೀ ನಾಲ್ಕೇ ನಾಲ್ಕು ದಿನಗಳಲ್ಲಿ 18 ಕೋಟಿ ರೂಪಾಯಿಗಳ ಧನರಾಶಿಯನ್ನು ಓಟ್ಟುಗೂಡಿಸಿದ್ದಾರೆ. ಆ ಹಣವನ್ನು ಮಂಗಳವಾರ ಮಂದಿರದ ಟ್ರಸ್ಟಿಗೆ ಹಸ್ತಾಂತರ ಮಾಡಲಾಯಿತು.

ಇದನ್ನು ಹೊರತು ಪಡಿಸಿ ರಾಮಜನ್ಮಭೂಮಿ ಪೂಜಾ ಅನುಷ್ಠಾನದ ಸಂಧರ್ಭದಲ್ಲಿಯ ಯಜಮಾನರಾದ ಮಹೇಶ ಭಾಗ ಚಂದಕಾ ಅವರು ಒಂದು ಕೋಟಿ ರೂಪಾಯಿಗಳನ್ನು ದಾನ ಮಾಡುವ ಘೋಷಣೆಯನ್ನು ಮಾಡಿದರು. ಇದೇ ರೀತಿ ಸಜನ್ ಬನ್ಸಲ್ ಹೆಸರಿನ ಇನ್ನೊಬ್ಬ ಭಕ್ತನು ಕೂಡ ಒಂದು ಕೋಟಿ ರೂಪಾಯಿಗಳ ದಾನವನ್ನು ನೀಡಿದರು. ಇನ್ನೋರ್ವ ಭಕ್ತ ಗುಪ್ತವಾಗಿ ಒಂದು ಕೋಟಿ ರೂಪಾಯಿಗಳ ದಾನವನ್ನು ನೀಡಿದ್ದಾನೆ.

ಹೀಗೆ ಇನ್ನು ಲಕ್ಷ ಲಕ್ಷ ರೂಪಾಯಿಗಳ ದಾನವು ಸಹಿತ ಆನ್ ಲೈನ್ ಬ್ಯಾಕ್ನಿಂಗ್ ನ್ ಮುಖಾಂತರ ಡೈರೆಕ್ಟ್ ಅಕೌಂಟ್ ನಲ್ಲಿಯೇ ಜಮೆಯಾಗುತ್ತಿದೆ. ಒಂದು ಲಕ್ಷ ದಾನವನ್ನು ನೀಡುವವರ ಸಂಖ್ಯೆ ತುಂಬಾ ಹೆಚ್ಚಿದೆ. ಹಾಗೂ ಇದಕ್ಕಿಂತ ಕಡಿಮೆ ದಾನ ಮಾಡುವವರ ಸಂಖ್ಯೆಯಂತೂ ಲೆಕ್ಕವೇ ಇಲ್ಲ.

ಇವೆಲ್ಲದಕ್ಕೂ ಮೊದಲೇ ಮಹಾವೀರ ಟ್ರಸ್ಟ್ ಪಟ್ನಾ ಇವರು 10 ಕೋಟಿ ರೂಪಾಯಿಗಳ ದಾನ ಕೊಡುವದಾಗಿ ಮೊದಲೇ ಘೋಷಿಸಿದ್ದರು. ಅದರಲ್ಲಿ 2 ಕೋಟಿ ರೂಪಾಯಿಗಳ ಮೊದಲ ಹಂತದ ಹಣವನ್ನು ಟ್ರಸ್ಟಿನ ಹೆಸರಿನ ಖಾತೆಯಲ್ಲಿ ಕಳುಹಿಸಿ ಕೊಟ್ಟಿದ್ದಾರೆ.

ಇನ್ನುಳಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕರೆ ಯವರ ವತಿಯಿಂದ ಒಂದು ಕೋಟಿ ರೂಪಾಯಿಗಳು ರಾಮಜನ್ಮಭೂಮಿ ಟ್ರಸ್ಟಿಗೆ ಬಂದಿವೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೂ ಮುನ್ನ ಉದ್ಧವ್ ಠಾಕರೆ ಅವರು ಅಯೋಧ್ಯೆಗೆ ಬಂದಾಗ 3 ಕೋಟಿ ರೂಪಾಯಿಗಳ ಧನರಾಶಿಯ ಸಹಾಯ ಮಾಡುತ್ತೇನೆಂದು ಹೇಳಿದ್ದರು. ಆ ಪ್ರಕಾರ ಅದರಲ್ಲಿ ಒಂದು ಕೋಟಿ ರೂಪಾಯಿಗಳ ಮೊದಲ ಕಂತು ಟ್ರಸ್ಟಿನ ಖಾತೆಗೆ ವರ್ಗಾವಣೆ ಮಾಡಿದ್ದಾರೆ.