ರಾಮ ಜನ್ಮಭೂಮಿ ಶಿಲಾನ್ಯಾಸದ ಬಗ್ಗೆ ಪಾಕಿಸ್ತಾನಿ ಕ್ರಿಕೆಟರ್ ಮಾಡಿದ ಟ್ವಿಟ್ ವೈರಲ್!
ಮೊನ್ನೆ ರಾಮ ಮಂದಿರದ ಭೂಮಿ ಪೂಜನ ಕಾರ್ಯಕ್ರಮವು ತುಂಬಾ ಅದ್ಭುತವಾಗಿ ನೆರವೇರಿತು. ಕೊರೊನ ಕಾರಣದಿಂದ ಕೆಲವೇ ಮುಖ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿದರೂ ಹರ್ಷ ಮತ್ತು ಉಲ್ಲಾಸಕ್ಕೇನೂ ಕಡಿಮೆ ಇರಲಿಲ್ಲ. ಸ್ವತಃ ಪ್ರಧಾನಿ ಮೋದಿಯವರೂ ಕಾರ್ಯಕ್ರಮಕ್ಕೆ ಉಪಸ್ಥಿರಿದ್ದು ರಾಮ ಮಂದಿರದ ಭೂಮಿ ಪೂಜನದ ಕಾರ್ಯಕ್ರಮಕ್ಕೆ ತಮ್ಮನ್ನು ಕರೆದಿದ್ದಕ್ಕಾಗಿ ನಾನು ಮಂದಿರ ಟ್ರಸ್ಟಿಗೆ ಋಣಿಯಾಗಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಇದೇ ಸಮಯದಲ್ಲಿ ಪ್ರಧಾನಿಯವರು ರಾಮ ಮಂದಿರದ ಟಪಾಲ್ ಟಿಕೇಟ್ ಒಂದನ್ನು ಬಿಡುಗಡೆ ಮಾಡಿದರು.
ಈ ಅಡಿಗಲ್ಲು ಸಮಾರಂಭದಿಂದ ಇಡೀ ಜಗತ್ತೇ ರಾಮನ ಭಕ್ತಿಯಲ್ಲಿ ಲೀನವಾಗಿದೆ. ಇಂಥದ್ದರಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರ ದಾನಿಷ್ ಕನೇರಿಯಾ ರಾಮ ಮಂದಿರದ ಭೂಮಿ ಪೂಜೆಗೆ ಸಂಬಂಧಿಸಿ ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.
The beauty of Lord Rama lies in his character, not in his name. He is a symbol of the victory of right over the evil. There is wave of happiness across the world today. It is a moment of great satisfaction. #JaiShriRam pic.twitter.com/wUahN0SjOk
— Danish Kaneria (@DanishKaneria61) August 5, 2020
ದಾನಿಷ್ ಅವರು ತಮ್ಮ ಟ್ವೀಟ್ ನಲ್ಲಿ ರಾಮನ ಫೋಟೋ ಒಂದನ್ನು ಶೇರ್ ಮಾಡುತ್ತ, ‘ಭಗವಾನ್ ರಾಮನ ಸೌಂದರ್ಯ ಅವರ ಹೆಸರಿನಲ್ಲಿಲ್ಲ, ಅವರ ಪಾತ್ರದಲ್ಲಿದೆ. ಅವರು ದುಷ್ಟರ ಮೇಲೆ ಪಡೆದ ವಿಜಯ ಹಕ್ಕಿನದಾಗಿದೆ. ಇಂದು ಪ್ರಪಂಚದಾದ್ಯಂತ ಸಂತೋಷದ ಅಲೆಯೇ ನಿರ್ಮಾಣವಾಗಿದೆ. ಇದು ಮನಸ್ಸಿಗೆ ತುಂಬಾ ತೃಪ್ತಿ ನೀಡುವ ವಿಷಯವಾಗಿದೆ, ಜೈ ಶ್ರೀರಾಮ. ಎಂದು ಹೇಳಿದ್ದಾರೆ.