ಕೇವಲ 11 ವರ್ಷದವಳಿದ್ದಾಗ ಬಾಯ್ಫ್ರೆಂಡ್ ಗೆ ಕಿಸ್ ಮಾಡುವಾಗ ತಂದೆ ಕೈಯಲ್ಲಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಳು ‘ಈ’ ಪ್ರಸಿದ್ಧ ನಟಿ!

ಬಾಲಿವುಡ್ ಬೆಡಗಿಯರ ಜೀವನವು ಸರ್ವ ಸಾಮಾನ್ಯರಂತೆಯೇ ಅನೇಕ ಏರಿಳಿತಗಳಿಂದ ಕೂಡಿದೆ. ಅನೇಕ ನಟಿಯರು ತಮ್ಮ ಪರಿಶ್ರಮದಿಂದ ಮೇಲೆ ಬಂದವರಾಗಿದ್ದಾರೆ. ಕೆಲವರು ಬಂಗಾರದ ಸ್ಪೂನನ್ನೇ ಬಾಯಿಯಲ್ಲಿ ಹಿಡಿದುಕೊಂಡು ಬಂದಿರುವರು. ಅವರ ಜೊತೆಗೂ ಅನೇಕ ರೀತಿಯ ಬೇಡವಾದ ಪ್ರಸಂಗಗಳು ಆಗಿರುತ್ತವೆ. ಮತ್ತೆ ಕೆಲವೊಂದು ತಾವೇ ಏನಾದರೂ ಬೇಡವಾದ ಕೆಲಸಗಳನ್ನು ಮಾಡಬಾರದ ವಯಸ್ಸಿನಲ್ಲಿ ಮಾಡಿರುತ್ತಾರೆ. ಇಂಥ ವಿಷಯಗಳನ್ನು ಕೆಲವು ನಟಿಯರು ಯಾವುದೇ ಮುಚ್ಚು ಮರೆಯಿಲ್ಲದೆ ಮಿಡಿಯಾದ ಮುಂದೆ ಧೈರ್ಯದಿಂದ ಹೇಳಿಕೊಳ್ಳುತ್ತಾರೆ.

ಬಾಲಿವುಡ್ ನಲ್ಲಿ ಎಲ್ಲರಿಗೂ ಮೀರಿ ಬೋಲ್ಡ್ ಅಭಿನಯಕ್ಕಾಗಿ ಹೆಸರುವಾಸಿಯಾದವರೂ ಸನ್ನಿ ಲಿಯೋನಿ. ಇವರು ಇಂಟರ್ವ್ಯೂವ್ ಒಂದರಲ್ಲಿ ತಮ್ಮ 11 ನೆ ವಯಸ್ಸಿನಲ್ಲಿಯೇ ಮಾಡಿದ ತಪ್ಪಿನ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಸನ್ನಿ ಲಿಯೋನಿಗೆ ತನ್ನ ವಯಸ್ಸಿನ ಹುಡುಗಿಯರಿಗಿಂತಲೂ ಬೇಗನೆ ಕೆಲವೊಂದು ಸೂಪ್ತ ವಿಷಯಗಳ ಬಗ್ಗೆ ಜ್ಞಾನವಾಗಿತ್ತಂತೆ. ಒಂದು ಸಂದರ್ಭದಲ್ಲಿ ಸನ್ನಿಯು ತನ್ನ 11 ನೆ ವಯಸ್ಸಿನಲ್ಲಿದ್ದಾಗ ಬಾಯ್ ಫ್ರೆಂಡ್ ಒಬ್ಬನಿಗೆ ಮೊಟ್ಟ ಮೊದಲ ಬಾರಿಗೆ ಕಿಸ್ ಕೊಡುವಾಗ ಸನ್ನಿಯ ತಂದೆ ಸನ್ನಿಗೆ ರೆಡ್ ಹ್ಯಾಂಡಾಗಿ ಹಿಡಿದಿದ್ದರಂತೆ. ಆ ಸಮಯದಲ್ಲಿ ಸನ್ನಿಯು ತುಂಬಾ ಮುಜುಗರಕ್ಕೀಡಾಗಿದ್ದರಂತೆ. ಅವರು ಹೇಳುವ ಪ್ರಕಾರ ಆ ಹುಡುಗ ಬಾಸ್ಕೆಟ್ ಬಾಲ್ ಆಟಗಾರನಾಗಿದ್ದು ತುಂಬಾ ಹ್ಯಾಂಡ್ ಸಮ್ ಬೇರೆ ಇದ್ದನಂತೆ.

ಈ ಕಾರಣದಿಂದಾಗಿ ಸನ್ನಿಯ ಕುಟುಂಬ ಮುಂದೆ ಆತನನ್ನು ತುಂಬಾ ದ್ವೇಷಿಸಲು ಪ್ರಾರಂಭಿಸಿದರು. ಅದಾದ ನಂತರ ಯಾವುದೋ ಕಾರಣಕ್ಕಾಗಿ ಸನ್ನಿ ಲಿಯೋನಿಯ ಫ್ಯಾಮಿಲಿ ಕ್ಯಾಲಿಫೋರ್ನಿಯಾದಿಂದ ಮಿಷಿಗನ್ ಗೆ ತೆರಳಿದಾಗ ಸನ್ನಿಗೆ ಆ ಬಾಯ್ ಫ್ರೆಂಡ್ ನ ತುಂಬಾ ನೆನಪು ಬರುತ್ತಿತ್ತಂತೆ. ಎಷ್ಟೋ ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದುದರ ಬಗ್ಗೆಯೂ ತಮ್ಮ ಇಂಟರ್ ವ್ಯೂವ್ ನಲ್ಲಿ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಸನ್ನಿಯು ತನ್ನದೇ ಆದ ಬಾಯೊಪಿಕ್ ನಲ್ಲಿ ತನ್ನ ಜೀವನಚರಿತ್ರೆಯ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಪ್ರಯುಕ್ತ ಅವರ ಜೀವನದಲ್ಲಿ ಆದ ಒಂದು ರೋಚಕ ಪ್ರಸಂಗ ತಮ್ಮ ಇಂಟರ್ ವ್ಯೂವ್ ಮೂಲಕ ಹೇಳಿದ್ದಾರೆ.

ಸನ್ನಿ ಲಿಯೋನಿ ಈಗ ಅಮೆರಿಕೆಯ ಡ್ಯಾನಿಯಲ್ ವೇಬೇರ್ ಹೆಸರಿನ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಂಡು ಸುಖದ ಜೀವನ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಒಂದೂ ಮಗುವನ್ನು ತಮ್ಮ ಹೊಟ್ಟೆಯಿಂದ ಹೆತ್ತಿಲ್ಲ, ಆದರೆ ಹೊರಗಿನ ಮೂವರು ಮಕ್ಕಳನ್ನು ದತ್ತು ತೆಗೆದುಕೊಂಡು ಆ ಮಕ್ಕಳಿಗೆ ಚೆನ್ನಾಗಿ ಪಾಲನೆ ಪೋಷಣೆ ಮಾಡುತ್ತಿದ್ದಾರೆ.