ಫನ್ನಿ ಜೋಕ್ಸ್: ಗುಂಡ- ನಿನ್ನೆ ರಾತ್ರಿ ನಾನು ಮನೆಗೆ ಹೋದಾಗ ನನ್ನ ಹೆಂಡ್ತೀಗೆ ಯಾರೋ ಒಬ್ಬ ಕಿಸ್ ಮಾಡ್ತಾ ಇದ್ದ. ಪುಂಡ- ಹೌದಾ? ನೀನು ಏನ್ಮಾಡ್ದೆ ಆಗ…
ನಗು ಜೀವನಕ್ಕೊಂದು ಉತ್ಸಾಹವನ್ನು ನೀಡುತ್ತದೆ. ನಗುವೇ ಇಲ್ಲದ ಜೀವನ ನೀರಿಲ್ಲದ ಬಾವಿಯಂತೆ. ದಿನಕ್ಕೊಂದು ಬಾರಿ ಮನಃಪೂರ್ವಕವಾಗಿ ನಕ್ಕರೆ ಅದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಆದ್ದರಿಂದಲೇ ಅಂತಹ ನಗುವೊಂದನ್ನು ನಿಮಗೆ ನೀಡಲು ಈ ನಗೆ ಹನಿಗಳು.
ಜೋಕ್ : ೧
ಅಂಕಲ್ (ಪೊಲೀಸರಿಗೆ) – ಸರ್ ನನಗೆ ಫೋನ್ನಲ್ಲಿ ಬೆದರಿಕೆಗಳನ್ನು ಹಾಕ್ತಾ ಇದ್ದಾರೆ.
ಪೊಲೀಸ್ (ಅಂಕಲ್ ಗೆ) – ಯಾರು ನಿಮಗೆ ಬೆದರಿಕೆ ಹಾಕುತ್ತಿದ್ದಾರೆ?
ಅಂಕಲ್ (ಪೊಲೀಸರಿಗೆ) – ಟೆಲಿಫೋನ್ ಅವರು ನನಗೆ, ಬಿಲ್ ಪೇ ಮಾಡಿ, ಇಲ್ದೇ ಇದ್ರೆ ಕಟ್ ಮಾಡ್ತೀವಿ ಅಂತ ಬೆದರಿಕೆ ಹಾಕ್ತಾ ಇದ್ದಾರೆ.
ಜೋಕ್: ೨
ಕುಡುಕನೊಬ್ಬನನ್ನು ಅವನ ಸ್ನೇಹಿತ ಕೇಳಿದ
ಸ್ನೇಹಿತ- ರಾತ್ರಿ ವೇಳೆ ನಿನಗೆ ಸೊಳ್ಳೆಗಳು ತೊಂದರೆ ಕೊಡೋದಿಲ್ವಾ?
ಕುಡುಕ: ಇಲ್ಲ, ಕೊಡೋಲ್ಲ..
ಸ್ನೇಹಿತ- ಹೌದಾ!!! ಅದು ಹೇಗೆ?
ಕುಡುಕ – ನಾನು ರಾತ್ರಿ ಕುಡಿದು ಮನೆಗೆ ಹೋಗ್ತೀನಿ, ಆಗ ಸೊಳ್ಳೆಗಳು ನನ್ನ ದೇಹದ ಮೇಲೆ ಕುಳಿತು ಮದ್ಯಪಾನ ಮಾಡೋದಕ್ಕೆ ಪ್ರಾರಂಭ ಮಾಡುತ್ತೆ.
ನಾನು ಎಚ್ಚರ ಆಗೋ ಹೊತ್ತಿಗೆ ಸೊಳ್ಳೆಗಳು ಕುಡಿದು ಜಾಸ್ತಿ ಆಗಿ ಪ್ರಜ್ಞೆ ಕಳ್ಕೊಂಡು ಇರ್ತಾವೆ.
ಜೋಕ್:೩

ಜೋಕ್: ೪
ಗುಂಡ ನಿದ್ದೆ ಮಾಡುವಾಗ ಅವನಿಗೆ ಒಂದು ಸೊಳ್ಳೆ ಕಚ್ಚಿ ಎಚ್ಚರವಾಗಿ ಹೋಯ್ತು..
ಅವನು ಕೋಪದಿಂದ ಚಪ್ಪಲಿ ಎತ್ತಿಕೊಂಡು ಇಡೀ ರಾತ್ರಿ ಸೊಳ್ಳೆಯನ್ನು ಹೊಡೆಯಲು ಅದರ ಹಿಂದೆ ಬಿದ್ದ.
ರಾತ್ರಿ ಕಳೆದು ಹಗಲು ಆಗೋಯ್ತು. ಆಗ ಗುಂಡ ಕೊನೆಗೂ ಆ ಸೊಳ್ಳೇನಾ ಕೊಲ್ಲೋಕೆ ಆಗಲಿಲ್ಲ, ಬಟ್ ಇಡೀ ರಾತ್ರಿ ನಾನು ಅದನ್ನು ನಿದ್ದೆ ಮಾಡೋಕೆ ಬಿಡಲಿಲ್ಲ ಅನ್ನೋದೆ ಸಮಾಧಾನ ಅನ್ಕೊಂಡು ಖುಷಿ ಪಟ್ಟ.
ಜೋಕ್: ೫
ಹೆಂಡತಿ(ತನ್ನ ಗೆಳತಿಗೆ): ನನಗ್ಯಾಕೋ ನನ್ನ ಗಂಡ ಬೇರೆ ಹೆಂಗಸಿನ ಜೊತೆ ಸಂಬಂಧ ಇಟ್ಕೊಂಡಿದ್ದಾರೆ ಅಂತ ಅನಿಸ್ತಾ ಇದೆ.
ಗೆಳತಿ: ಈಗ ಏನು ಮಾಡ್ತೀಯಾ ನೀನು?
ಹೆಂಡತಿ: ಏನಿಲ್ಲಾ, ತುಂಬಾ ಸುಲಭ, ನನ್ನ ಬಾಯ್ ಫ್ರೆಂಡ್ ನ ನನ್ನ ಗಂಡನ ಬಗ್ಗೆ ತಿಳ್ಕೋಳ್ಳಕ್ಕೆ ಅವನ ಹಿಂದೆ ಕಳಿಸ್ತೀನಿ.
ಜೋಕ್ : ೬
ಗಂಡ ಮನೆಗೆ ತಲುಪಿದ ಕೂಡಲೇ ಹೆಂಡತಿ ಅವನನ್ನು ಹೊಡೆಯಲು, ಒದೆಯಲು ಆರಂಭಿಸಿದಳು. ಅವಳಿಂದ ಅಷ್ಟು ಕೆಟ್ಟದಾಗಿ ಏಟು ಗಳನ್ನು ತಿಂದ ಗಂಡ ಅವಳನ್ನು ಕಾರಣ ಕೇಳಿದ.
ಆಗ ಪತ್ನಿ, ನಮ್ಮ ಪಕ್ಕದ ಮನೆಯ ಶರ್ಮಾ ಅವರು ಇಲ್ಲೇ ಪಕ್ಕದಲ್ಲೇ ಇರೋ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದಾರಂತೆ..
ಗಂಡ: ಅವರು ಯಾರ ಜೊತೇನೋ ಸಂಬಂಧ ಇಟ್ಕೊಂಡ್ರೆ ನೀನು ನನಗೆ ಯಾಕೆ ಹೊಡೀತಿದ್ಯಾ??
ಪತ್ನಿ: ಶರ್ಮಾ ಅವರಿಗೆ ನನ್ನ ಕಂಡ್ರೆ ಸ್ವಲ್ಪ ಭಯ ಇರ್ಲಿ ಅಂತ..
ಜೋಕ್ :೭
ಒಂದು ಸಲ ಹೆಂಡತಿ ತನ್ನ ಗಂಡನಿಗೆ ಹೇಳ್ತಾಳೆ,
ಹೆಂಡತಿ- ನಾನು ನಿಮ್ಮನ್ನು ಯಾಕೆ ಮದುವೆಯಾದೆ ಅಂತ ನಿಮಗೆ ಗೊತ್ತಾ?
ಗಂಡ- ಯಾಕೆ?
ಹೆಂಡತಿ- ನೀವು ಎಷ್ಟು ದಡ್ಡರು ಎಂದು ನನಗೆ ತಿಳಿಯೋದಿಕ್ಕೆ?
ಗಂಡ – ಅದಕ್ಕೆ ನನ್ನ ಮದುವೆ ಆಗೋ ಅವಶ್ಯಕತೆ ಏನಿತ್ತು? ನಾನು ನಿನ್ನ ಮದ್ವೆ ಆಗ್ತೀನಿ ಅಂದಾಗ್ಲೇ ನಿನಗೆ ಗೊತ್ತಾಗ್ಲಿಲ್ವ..
ಜೋಕ್ : 8

ಜೋಕ್: ೯
