ಎಲ್ಲರ ಎದುರೇ ದೀಪಿಕಾಳಿಗೆ ಕಿಸ್ ಮಾಡಿದ್ದರು ಸಿದ್ಧಾರ್ಥ್ ಮಲ್ಯ! ಆದರೂ ಬ್ರೇಕ್ ಅಪ್ ಆದ ಕಾರಣವೇ ಬೇರೆ!
ಬಾಲಿವುಡ್ ನಲ್ಲಿ ಸದ್ಯಕ್ಕೆ ಇಬ್ಬರೂ ಸುಂದರಿಯರ ಚರ್ಚೆ ಯಾವತ್ತೂ ನಡೆದೇ ಇರುತ್ತದೆ. ಒಬ್ಬಳು ದೀಪಿಕಾ ಇನ್ನೊಬ್ಬಳು ಪ್ರಿಯಾಂಕ ಚೋಪ್ರಾ.
ಇದರಲ್ಲಿ ದೀಪಿಕಾಳ ರಿಲೇಶನಶಿಪ್ ಬಗ್ಗೆ ಮಿಡಿಯಾದಲ್ಲಿ ಯಾವತ್ತೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಬಾಲಿವುಡ್ ನಲ್ಲಿ ದೀಪಿಕಾಳ ರಿಲೇಶನ್ ಗಳು ತುಂಬಾನೇ ಇದ್ದ ಕಾರಣ ಚರ್ಚೆಗಳು ನಡೆದೇ ಇರುತ್ತವೆ ಎಂದೆಸುವದು.
ಬಾಲಿವುಡ್ ನ ಯುವರಾಜ್ ರಣಬೀರ್ ಕಪೂರ್ ಅವರ ಜೊತೆಗಿನ ಸಂಬಂಧ 2010 ರಲ್ಲಿ ಮುರಿಯಿತು. ಇದಾದ ನಂತರ ದೀಪಿಕಾಳ ಜೀವನದಲ್ಲಿ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ಅವರ ಪ್ರವೇಶವಾಯಿತು.

ಒಮ್ಮೆ 2011 ರ IPL ಮ್ಯಾಚ್ ನಲ್ಲಿ ತುಂಬಿದ ಸ್ಟೇಡಿಯಂನಲ್ಲಿ ಸಿದ್ಧಾರ್ಥ ದೀಪಿಕಾಗೆ ಕಿಸ್ ಕೊಟ್ಟಾಗ ದೊಡ್ಡ ಸುದ್ದಿಯೇ ಆಗಿತ್ತು.
ಮುಂದೆ ಇಬ್ಬರು ಪ್ರೈವೇಟ್ ಪಾರ್ಟಿಯಿಂದ ಹಿಡಿದು ಅವರ ಇವೆಂಟ್ಸ್ ಗಳಲ್ಲಿಯೂ ಜೊತೆ ಜೊತೆಯಲ್ಲಿ ಕಾಣಿಸುತ್ತಿದ್ದರು. ಎರಡು ವರ್ಷಗಳವರೆಗೆ ಇಬ್ಬರೂ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಆಗ ಒಮ್ಮೆಲೇ ಇವರಿಬ್ಬರ ಸಂಬಂಧಗಳು ಮುರಿದು ಬಿದ್ದ ಸುದ್ದಿಗಳು ಹಬ್ಬ ತೊಡಗಿದವು. ಇವರಿಬ್ಬರ ರಿಲೇಶನ್ ಎರಡು ವರ್ಷಗಳಲ್ಲೇ ಮುರಿಯಲು ಕಾರಣವೇನಿರಬಹುದು ಅಂತೀರಾ? ಹಾಗಾದರೆ ಇಲ್ಲಿ ಓದಿ.

ಮೀಡಿಯಾ ರಿಪೋರ್ಟಗಳ ಪ್ರಕಾರ ಇದರ ಹಿಂದಿನ ಕಾರಣ ಸಿದ್ಧಾರ್ಥ ಮಲ್ಯ ಅವರ ಅಗ್ಗದ ಚಟುವಟಿಕೆಗಳೇ ಅಂತ ಹೇಳ್ತಾರೆ. ದೀಪಿಕಾಳು ತಮ್ಮ ಒಂದು ಇಂಟರ್ ವ್ಯೂವ್ ನಲ್ಲಿಯೂ ಸಿದ್ಧಾರ್ಥ ಮೇಲೆ ಮಾಡಿದ ಕೆಲವು ಆರೋಪಗಳು ಈ ಕೆಳಗಿನಂತಿವೆ.
- ಹೋಟಲೊಂದಕ್ಕೆ ಹೋಗಲು ಸಿದ್ಧಾರ್ಥ ಒಮ್ಮೆ ದೀಪಿಕಾಳನ್ನು ಆಟೋದಲ್ಲಿ ನಡೆಯಲು ಒತ್ತಾಯಿಸಿದ್ದು.
- ಡ್ರೆಸ್ ಖರೀದಿಯ ಸಲುವಾಗಿ ದೀಪಿಕಾಳು ಡಿಮಾಂಡ್ ಮಾಡಿದಾಗ ಸಿದ್ಧಾರ್ಥ ಲೋಕಲ್ ಮಾರ್ಕ್ಕೆಟ್ಟಿಗೆ ಕರೆದೊಯ್ದದ್ದು. ಆಮೇಲೆ ಡ್ರೆಸ್ ಇಷ್ಟ ಆದ ನಂತರ ಖರೀದಿಸುವಾಗ ಸಿದ್ಧಾರ್ಥ ಬಾರ್ಗೆನಿಂಗ್ ಮಾಡಲು ಶುರು ಮಾಡಿದರು. ಇದೆಲ್ಲ ನೋಡಿ ನನಗೆ ತುಂಬಾ ಅಸಹ್ಯವಾಯಿತು ಎಂದು ದೀಪಿಕಾ ಹೇಳಿದ್ದಾರೆ.
- ಬೆಂಗಳೂರಿನ ತಾಜ್ ಹೊಟೇಲ್ ಗೆ ಹೋದಾಗ ಅಲ್ಲಿ ಆದ ಎಲ್ಲ ಹೋಟೆಲ್ ಬಿಲ್ ತುಂಬಲು ಸಿದ್ಧಾರ್ಥ ದೀಪಿಕಾಳಿಗೆ ಹೇಳಿದಾಗ ದೀಪಿಕಾ ತನ್ನ ಡಾಯೆಟ್ ಕೋಕ್ ಸಿದ್ಧಾರ್ಥರ ಗ್ಲಾಸ್ ನಲ್ಲಿ ಹಾಕಿ ಅಲ್ಲಿಂದ ಸಿಟ್ಟಾಗಿ ಹೊರಹೋಗಿದ್ದರಂತೆ.
ಸಿದ್ಧಾರ್ಥ ಅವರ ಇಂಥ ಚೀಪಾದ ವರ್ತನೆಗಳಿಂದ ಬೇಸತ್ತು ಅವರಿಂದ ದೂರಾಗದ ಹೊರತು ನನ್ನ ಹತ್ತಿರ ಬೇರೆ ದಾರಿಯೇ ಇರಲಿಲ್ಲವೆಂದು ದೀಪಿಕಾ ಹೇಳಿದ್ದರು.
ಇದಕ್ಕೆ ಉತ್ತರವಾಗಿ ಸಿದ್ಧಾರ್ಥ ಸಹಿತ ದೀಪಿಕಾಳ ಮೇಲೆ ಪ್ರತ್ಯಾರೋಪ ಮಾಡಿದ್ದರು. ತಮ್ಮ ಹೇಳಿಕೆಯಲ್ಲಿ ದೀಪಿಕಾಳ ಬಗ್ಗೆ ಹೀಗೆ ಹೇಳಿದ್ದರು, ದೀಪಿಕಾ ಒಂದು ಕ್ರೇಜಿ ಮಹಿಳೆಯಾಗಿದ್ದಾಳೆ. ನಾನು ದೀಪಿಕಾಗೆ ಹೇಳಿದ್ದೆ, ನನ್ನ ತಂದೆಯ ಸಾಲ ತೀರಿಹೋಗುವ ದಾರಿ ಕಾಯುತ್ತಿರುವೆ. ನನ್ನ ತಂದೆ ಇದರಿಂದ ಒಮ್ಮೆ ಮುಕ್ತರಾದರೋ ಆಗ ನಿನ್ನ ಎಲ್ಲ ಹಣವನ್ನು ತೀರಿಸುತ್ತೇನೆಂದರೂ ಕೇಳಲಿಲ್ಲ ಎಂದು ಸಿದ್ಧಾರ್ಥ ದೀಪಿಕಾಳ ಬಗ್ಗೆ ಉಸುರಿದ್ದರು.
