ಕರಡಿಯ ಮರಿಗಳ ಮೇಲೆ ಅ#ಟ್ಯಾಕ್ ಮಾಡಿದ ತೋಳಗಳು! ರಕ್ಷಣೆಗೆ ಮುಂದೆ ಬಂದ ತಾಯಿ ಕರಡಿ.. ಆಗ.. ಪೂರ್ತಿ ನೋಡಿ ಈ ವಿಡಿಯೋ
ಅಮೆರಿಕೆಯ ಎಲೋಸ್ಟೋನ್ ನ್ಯಾಷನಲ್ ಪಾರ್ಕ್ ಒಂದರಲ್ಲಿ ನಡೆದ ಕರಡಿಗೆ ಸಂಬಂಧಿಸಿದ ಘಟನೆಯ ವಿಡಿಯೋ ಒಂದು ಫೇಸ್ ಬುಕ್ ನಲ್ಲಿ ತುಂಬಾ ವೈರಲ್ ಆಗುತ್ತಿದೆ.
ಟೇಲರ್ ಬ್ಲ್ಯಾಂಡ್ ಹೆಸರಿನ ಫೋಟೋಗ್ರಾಫರ್ ಒಬ್ಬರು ಈ ಅದ್ಭುತವಾದ ಶೂಟಿಂಗ್ ಮಾಡಿದ್ದಾರೆ. ಇವರು ಎಲೋಸ್ಟೋನ್ ನ್ಯಾಷನಲ್ ಪಾರ್ಕ ನಲ್ಲಿ ಸಫಾರಿ ಮಾಡುವಾಗ ಚಿತ್ರಿಸಿದ ವಿಡಿಯೋದಲ್ಲಿ ಕರಡಿ ತನ್ನ ಮರಿಗಳನ್ನು ತೋಳಗಳಿಂದ ರಕ್ಷಣೆ ಮಾಡಿದ ಅದ್ಭುತ ವಿಡಿಯೋ ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.
ಈ ನ್ಯಾಷನಲ್ ಪಾರ್ಕ ನಲ್ಲಿ ತೋಳಗಳ ಸಂಖ್ಯೆ ಸುಮಾರು 100 ರ ಮೇಲ್ಪಟ್ಟಿದೆ. ಇಂಥದ್ದರಲ್ಲಿ ನಾಲ್ಕು ತೋಳಗಳು ಎರಡು ಕರಡಿಯ ಮರಿಗಳಿಗೆ ಮುಗಿಸಲು ಅವುಗಳನ್ನು ಬೆನ್ನಟ್ಟಿವೆ. ಇದನ್ನು ನೋಡಿದ ತಾಯಿ ಕರಡಿ ತನ್ನ ಮರಿಗಳ ಮೇಲೆ ಬಂದ ಆಪತ್ತನ್ನು ಗಮನಿಸಿ ತಕ್ಷಣ ಕಾರ್ಯ ಪ್ರವೃತ್ತವಾಗಿದೆ. ತನ್ನ ಮರಿಗಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವಾಗ ಕರಡಿಯು ಅವುಗಳ ಹಿಂದೆ ವೇಗವಾಗಿ ಓಡಿ ಹೋಗಿ ತನ್ನ ಮರಿಗಳ ಜೊತೆಗೆ ನಿಂತು ಅವುಗಳನ್ನು ಸಾ ವಿನ ದವಡೆಯಿಂದ ರಕ್ಷಿಸಿದೆ. ಮರಿಗಳನ್ನು ತನ್ನ ಒಡಲಲ್ಲಿ ಹಿಡಿದುಕೊಂಡು ನಂತರ ತೋಳಗಳು ಅಲ್ಲಿಂದ ಹೋಗದೆ ಇದ್ದಾಗ ಅವುಗಳ ಮೇಲೂ ಏರಿ ಹೋಗಿದೆ. ಸ್ವಲ್ಪ ಸಮಯ ತೋಳಗಳು ಅಲ್ಲಿಯೇ ನಿಂತು ಕರಡಿಗಳ ಮೇಲೆ ಆಕ್ರಮಣ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದವು. ಆದರೆ ಅವುಗಳ ಎಲ್ಲ ಪ್ಲಾನ್ ವನ್ನು ತೋಳ ತನ್ನ ತಾಯಿಬಲದ ಸಾಮರ್ಥ್ಯದಿಂದ ಮಣ್ಣು ಮುಕ್ಕಿಸಿದೆ. ಸುದೈವದಿಂದ ಮುಂದೆ ಸ್ವಲ್ಪ ಸಮಯದ ನಂತರ ತೋಳಗಳು ತಮ್ಮ ಕಾರ್ಯ ನಿಷ್ಫಲವಾಯಿತೆಂದು ಅಲ್ಲಿಂದ ಕದಲಿ ಹೋದವು.
ಈ ವೀಡಿಯೊವನ್ನು ಆಗಸ್ಟ್ 6 ರಂದು ಶೇರ್ ಮಾಡಿದ್ದು, ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಣೆ ಮಾಡಲಾಗಿದೆ. ಸುಮಾರು ಸಾವಿರದ ಸಂಖ್ಯೆಯ ವರೆಗೆ ಶೇರ್ ಮತ್ತು ಲೈಕ್ಸಗಳು ಸಹಿತ ಬಂದಿವೆ. ಇಂದರಿಂದನೇ ಗೊತ್ತಾಗುವದು ಈ ವಿಡಿಯೋ ಎಷ್ಟೊಂದು ಜನರಿಗೆ ಇಷ್ಟವಾಗಿದೆ ಅಂತ.
ಕರಡಿ ತಾಯಿಯ ಮಮತೆ, ವಾತ್ಸಲ್ಯದ ಬಗ್ಗೆ ನೆಟ್ಟಿಗರು ತುಂಬಾ ಒಳ್ಳೊಳ್ಳೆಯ ಕಾಮೆಂಟ್ ಗಳನ್ನು ಬರೆದಿದ್ದಾರೆ.