ಡಾಲ್ಫಿನ್ ಮಾಡಿದ ತುಂಟಾಟಕ್ಕೆ ಮನಸೋತ ನೆಟ್ಟಿಗರು! ಅಷ್ಟಕ್ಕೂ ಅಲ್ಲಿರುವ ಹುಡುಗಿಯರೊಂದಿಗೆ ಡಾಲ್ಫಿನ್ ಮಾಡಿದ್ದೇನು..? ನೋಡಿ ಈ ವೈರಲ್ ವಿಡಿಯೋ!
ಪ್ರಕೃತಿಯಲ್ಲಿನ ಅನೇಕ ಜೀವಿಗಳಲ್ಲಿ ಡಾಲ್ಪಿನ್ ಗಳು ಬಹಳ ಮುದ್ದಾದ ಜೀವಿಗಳು. ಇವು ಗಳನ್ನು ನೋಡಿದಾಗ ಎಷ್ಟು ಮುದ್ದಾದ ಮೀನುಗಳು ಇವು ಎನಿಸದೇ ಇರಲಾರದು. ಡಾಲ್ಫಿನ್ ಗಳನ್ನು ಮೆಚ್ಚದೇ ಇರುವವರು ಬಹಳ ವಿರಳ ಎಂದೇ ನಾವು ಹೇಳಬಹುದು. ಮೀನಿನ ಜಾತಿಯಲ್ಲಿ ಮಾನವರೊಟ್ಟಿಗೆ ಬೆರೆಯುವ, ಅವರು ಹೇಳಿದಂತೆ ನಡೆದುಕೊಳ್ಳುವ ಜೀವಿಗಳಲ್ಲಿ ಡಾಲ್ಫಿನ್ ಗಳು ಕೂಡಾ ಇವೆ ಎಂದರೆ ನಂಬಲೇಬೇಕು. ಈ ಮುದ್ಧಾದ ಮುಗ್ಧ ಜೀವಿಗಳು ಮನುಷ್ಯನ ಒಡನಾಟವನ್ನು ಬಹಳ ಇಷ್ಟಪಡುತ್ತವೆ ಹಾಗೂ ಅವನೊಟ್ಟಿಗೆ ಅವು ಆಡಿ ನಲಿಯುತ್ತವೆ ಕೂಡಾ ಎಂಬುದಕ್ಕೆ ಈಗಾಗಲೇ ಹಲವು ವೀಡಿಯೋಗಳು ಲಭ್ಯ ಇವೆ.
ವಿದೇಶಗಳಲ್ಲಿ ಸಮುದ್ರದ ತೀರಗಳಲ್ಲಿ, ಇಲ್ಲವೇ ಕೃತಕವಾಗಿ ಸೃಷ್ಟಿಸಿದ ಅಮ್ಯೂಸ್ಮೆಂಟ್ ಪಾರ್ಕ್ ಗಳಲ್ಲಿ ಡಾಲ್ಫಿನ್ ಗಳನ್ನು ಪಳಗಿಸಿ, ಅವುಗಳಿಂದ ವಿವಿಧ ರೀತಿಯ ಸ್ಟಂಟ್ ಗಳನ್ನು ನೀರಿನಲ್ಲಿ ಮಾಡಿಸಲಾಗುತ್ತದೆ. ಇದನ್ನು ನೋಡುವಾಗ ಜನ ಸಹಜವಾಗಿಯೇ ಮೈಮರೆಯುತ್ತಾರೆ. ಅಲ್ಲದೇ ಡಾಲ್ಪಿನ್ ಗಳು ಎಂತಹ ಅದ್ಭುತ ಜೀವಿಗಳು, ಮಾನವನೊಡನೆ ಎಂತಹ ಒಡನಾಟ ಅವುಗಳದ್ದು ಎಂಬುದು ಕಣ್ಮುಂದೆ ಬಂದಾಗ ಒಂದು ಕ್ಷಣ ನಾವು ವಿಸ್ಮಯ ಲೋಕದಲ್ಲಿ ಇದ್ದೇವೇನೋ ಎನಿಸಿದರೂ ಅದು ಸುಳ್ಳಲ್ಲ.
ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ವೈರಲ್ ಆಗುತ್ತಿದ್ದು, ಮುದ್ದಾದ ಡಾಲ್ಫಿನ್ ಆಡುವ ಮುದ್ದಾಟ ಆಟವನ್ನು ನೋಡಿದಾಗ, ಒಂದು ಪುಟ್ಟ ಮುದ್ದು ಕಂದನನ್ನು ನೋಡಿದ ಅನುಭವ ನಮ್ಮದಾಗುತ್ತದೆ. ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರಂತೂ ಡಾಲ್ಫಿನ್ ನ ಆಟವನ್ನು ನೋಡಿ ಫಿದಾ ಆಗಿದ್ದಾರೆ. ಅದರ ಆ ಮುದ್ದಾದ ಆಟಕ್ಕೆ ಮನಸೋತು ಮೆಚ್ಚುಗೆಯ ಪ್ರತಿಕ್ರಿಯೆಗಳ ಹೊಳೆಯನ್ನೇ ಜನರು ಹರಿಸುತ್ತಿದ್ದಾರೆ. ಹಾಗಾದರೆ ಇಷ್ಟಕ್ಕೂ ಆ ವೀಡಿಯೋದಲ್ಲಿ ಡಾಲ್ಫಿನ್ ಅಂತಹುದೇನು ಮಾಡಿದೆ ಎಂಬ ವಿಷಯವನ್ನು ನಾವು ಹೇಳುತ್ತೇವೆ, ಕೇಳಿದ ಮೇಲೆ ನೀವು ಕೂಡಾ ವಾವ್ ಎನ್ನದೇ ಇರಲಾರಿರಿ.
ಡಾಲ್ಫಿನ್ ಶೋ ಗಳ ನಡೆಸುವ ಸ್ಥಳವೊಂದರಲ್ಲಿ ಅವುಗಳ ಜೊತೆ ಬೆರೆತು ಸಾಹಸಗಳನ್ನು ಮಾಡುವ ಇಬ್ಬರು ಯುವತಿಯರು, ಹಾಗೂ ಒಂದು ಮುದ್ದಾದ ಡಾಲ್ಫಿನ್ ಜೊತೆ ನೀರಿನ ಆಕರದ ಪಕ್ಕದಲ್ಲಿ ತುಂಟಾಟ ಆಡಿದ್ದಾರೆ. ಇಬ್ಬರು ಯುವತಿಯರು ಡಾಲ್ಫಿನ್ ಗೆ ಒಬ್ಬರ ನಂತರ ಮತ್ತೊಬ್ಬರು ಮುತ್ತುಗಳನ್ನು ನೀಡುತ್ತಿದ್ದರೆ ಡಾಲ್ಫಿನ್ ತಾನು ಕೂಡಾ ಖುಷಿಯಿಂದ ಅದನ್ನು ಎಂಜಾಯ್ ಮಾಡುತ್ತಾ, ತಾನು ಕೂಡಾ ಅವರಿಗೆ ಮುತ್ತನ್ನು ನೀಡಿದೆ. ಮಧ್ಯೆ ಮಧ್ಯೆ ಅದು ಖುಷಿಯಿಂದ ಮಾಡುವ ಸದ್ದು ನೋಡಿದಾಗ ಅದರ ಮುಗ್ಧ ಮನಸ್ಸಿನ ಮಾತು ಕೇಳಿದಂತೆ ಎನಿಸುತ್ತದೆ.
ಡಾಲ್ಫಿನ್ ನ ಈ ವೀಡಿಯೋ ನೋಡಿದಾಗ ನಿಜಕ್ಕೂ ಅದರ ಒಡನಾಟ ಮನುಷ್ಯರೊಂದಿಗೆ ಎಷ್ಟು ಆಪ್ಯಾಯಮಾನವಾಗಿದೆ, ಆ ಡಾಲ್ಫಿನ್ ಮತ್ತು ಯುವತಿಯರ ನಡುವೆ ಎಂತಹ ಸ್ನೇಹವಿದೆ ಎನಿಸದೇ ಇರಲಾರದು.