ನಿಜ ಜೀವನದಲ್ಲೂ ನಿಜವಾಯಿತು ನಾವು ಬಾಲ್ಯದಲ್ಲಿ ಕೇಳಿದ ‘ಆಮೆ ಮತ್ತು ಮೊಲದ ಕಥೆ!’ IPS ಶೇರ್ ಮಾಡಿದ Viral Video

ನಾವು ನಮ್ಮ ಬಾಲ್ಯದಿಂದಲೂ ಕೇಳುತ್ತಾ ಬರುತ್ತಿರುವ ಒಂದು ಸುಪ್ರಸಿದ್ಧ ಕಥೆ ಎಂದರೆ ಅದು ಆಮೆ ಮತ್ತು ಮೊಲದ ನಡುವಿನ ಓಟದ ಸ್ಪರ್ಧೆಯ ಕಥೆ. ಒಂದು ಸಲ ಆಮೆ ಮತ್ತು ಮೊಲ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದಾಗ, ವೇಗವಾಗಿ ಓಡುತ್ತಿದ್ದ ಮೊಲ, ಮಂದಗತಿಯಲ್ಲಿ ಬರುತ್ತಿದ್ದ ಆಮೆಯನ್ನು ನೋಡಿ, ಹೇಗೂ ಗೆಲ್ಲುವುದು ನಾನೇ ಎಂಬ ಗರ್ವದಿಂದ ವಿಶ್ರಾಂತಿ ಪಡೆದು ಓಡೋಣ ಎಂದು ಮಲಗಿತು. ಆದರೆ ಅದು ಗಾಢ ನಿದ್ರೆಗೆ ಜಾರಿತು. ಆದರೆ ಆಮೆ ಮಾತ್ರ ಎಲ್ಲೂ ನಿಲ್ಲದೇ ನಿಧಾನವಾಗಿಯೇ ನಡೆದು ಗುರಿಯನ್ನು ಮುಟ್ಟಿ ಓಟದ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅತೀವವಾದ ಆತ್ಮವಿಶ್ವಾಸ ಕೂಡಾ ಒಳ್ಳೆಯದಲ್ಲ ಎಂಬ ನೀತಿ ಪಾಠವನ್ನು ಮೊಲಕ್ಕೆ ನೀಡಿತ್ತು. ಈಗ ಈ ಕಥೆ ಏಕೆ? ಎನ್ನುವುದಾದರೆ ಕಾರಣ ಖಂಡಿತವಾಗಿಯೂ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ಭರ್ಜರಿ ವೈರಲ್ ಆಗುತ್ತಿದ್ದು, ಈ ವೀಡಿಯೋ ಮೊಲ ಮತ್ತು ಆಮೆಯ ಕಥೆಯಲ್ಲಿ ಹೇಳಿದ್ದ ವಿಷಯವು ನಿಜ ಜೀವನದಲ್ಲಿಯೂ ಕೂಡಾ ಯಥಾವತ್ತಾಗಿ ಅದೇ ರೀತಿಯಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಏಕೆಂದರೆ ಆಮೆ ಮತ್ತು ಮೊಲದ ನಡುವೆ ನಡೆದ ಓಟದ ಸ್ಪರ್ಧೆಯಲ್ಲಿ ಅಲ್ಲಿ ಮೊಲ ಸೋತು ಆಮೆ ಗೆಲ್ಲುವ ಮೂಲಕ ನಾವು ಕೇಳಿರುವ ಕಥೆಯ ಸಾರವು ನಿಜವೆಂದು ಸಾಬೀತಾಗಿದೆ. ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಎನ್ನುವವರು ಇಂತಹ ಒಂದು ವಿಶೇಷವಾದ ಈ ಮೊಲ ಮತ್ತು ಆಮೆಯ ನಡುವಿನ ಓಟದ ಸ್ಪರ್ಧೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ವಾಸ್ತವವಾಗಿ ಈ ವೀಡಿಯೋ ಹೊಸತೇನಲ್ಲ. ಆದರೆ ಯಾವಾಗ ಅರುಣ್ ಬೋತ್ರಾ ಅವರು ವೀಡಿಯೋ ಶೇರ್ ಮಾಡಿದರೋ ಅದಾದ ನಂತರ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ವೀಡಿಯೋದಲ್ಲಿ ಮೊಲ ಮೊದಲಿಗೆ ಬೇಗ ಬೇಗ ಹೋಗಿ ಮಧ್ಯೆದಲ್ಲಿ ನಿಂತು ಬಿಡುತ್ತದೆ. ಆದರೆ ಆಮೆ ಮಾತ್ರ ನಿಧಾನವಾಗಿಯೇ ನಡೆದು ಬಂದ ತನ್ನ ಗುರಿಯನ್ನು ತಲುಪಿ ಸ್ಪರ್ಧೆ ಪೂರ್ತಿ ಮಾಡುತ್ತದೆ. ಇದನ್ನು ನೋಡಿದವರಿಗೆಲ್ಲಾ ತಮ್ಮ ಬಾಲ್ಯದಲ್ಲಿ ಕೇಳಿದ್ದ ಕಥೆಯ ನೆನಪು ಮತ್ತೊಮ್ಮೆ ಆಗುತ್ತಿದೆ ಮತ್ತು ಕಥೆಯೊಳಗಿನ ವಿಚಾರ ವಾಸ್ತವವಾಗಿ ನಡೆದಿರುವುದು ಕಾಕತಾಳೀಯವೋ ಅಲ್ಲವೋ ಆದರೆ ಮನಸ್ಸನ್ನು ಮಾತ್ರ ಗೆದ್ದಿದೆ.

ವಿಡಿಯೋ ನೋಡಿ..

ಅರುಣ್ ಬೋತ್ರಾ ಅವರು ವೀಡಿಯೋ ಶೇರ್ ಮಾಡುತ್ತಾ ಹಾಸ್ಯದೊಳು ಮಾರ್ಮಿಕವಾಗಿ ವ್ಯಕ್ತಿಗತ ಪ್ರತಿಷ್ಠೆಗಿಂತ ಕುಟುಂಬದ ಸಂಪ್ರದಾಯಕ್ಕೆ ಮೊದಲ ಆದ್ಯತೆ ಎಂದಿದ್ದಾರೆ. ಅದರರ್ಥ ಆಮೆ ತನ್ನ ಪೂರ್ವಜರ ಸಂಪ್ರದಾಯದಂತೆ ಸೋಲನ್ನು ಅನುಭವಿಸಿದೆ ಎಂಬುದು.‌ ಈಗಾಗಲೇ ಈ ವೀಡಿಯೋವನ್ನು 71 ಸಾವಿರ ಜನ ವೀಕ್ಷಣೆ ಮಾಡಿದ್ದು ಅನೇಕರು ಪತ್ರಿಕೆಯ ನೀಡಿದ್ದಾರೆ, ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಗಮನ ಹಾಗೂ ಲಕ್ಷ್ಯ ಯಶಸ್ಸಿನ ಮಂತ್ರವೆಂದು, ನಿಧಾನವಾಗಿ ಲಕ್ಷ್ಯದ ಕಡೆ ಗುರಿ ಇರಿಸಿದರೆ ಸಫಲತೆ ಎಂದು, ಕೊನೆಗೂ ಕೇಳಿದ್ದ ಕಥೆ ನಿಜವಾಯಿತೆಂದು ತಮ್ಮದೇ ಆದ ಕಾಮೆಂಟ್ ಗಳನ್ನು ನೀಡುತ್ತಾ ಸಾಗಿದ್ದಾರೆ.