2 ಸೆಕೆಂಡಿನಲ್ಲಿ ಈ ಮರದಲ್ಲಿ ಅಡಗಿರುವ ಚಿರತೆಯನ್ನು ಹುಡುಕುವಿರಾ..? ಸರಿಯಾಗಿ ನೋಡಿ ಟ್ರೈ ಮಾಡಿ!
ಎಲ್ಲರ ದೃಷ್ಟಿಯೂ ಸಮಾನವಾಗಿರುವದಿಲ್ಲ. ಕಣ್ಣುಗಳು ಎಲ್ಲರಿಗೂ ಇದ್ದರೂ ತೀಕ್ಷ್ಣವಾದ ದೃಷ್ಟಿ ಉಳ್ಳವರೂ ಮಾತ್ರ ಕೆಲವರಷ್ಟೇ ಇರುತ್ತಾರೆ.
ಸದ್ಯಕ್ಕೆ ಒಂದು ಚಿತ್ರ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದನ್ನು IFS ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವೀಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಅವರು ಶೇರ್ ಮಾಡಿದ ತಕ್ಷಣ ಈ ಫೋಟೋ ತುಂಬಾ ವೈರಲ್ ಆಗಿದೆ. ಸುಶಾಂತ್ ಅವರು ಅದಕ್ಕೊಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ‘ಈ ಫೋಟೋಗಿಂತಲೂ ಸುಂದರವಾದದ್ದು ಬೇರೊಂದು ಇರಲಿಕ್ಕೆ ಸಾಧ್ಯವೇ ಇಲ್ಲ’.
ಹಾಗಾದರೆ ಈ ಫೋಟೋದಲ್ಲಿ ವಿಶೇಷವೆನಿದೆ ಅಂತೀರಾ? ಕೇಳಿ, ಈ ಫೋಟೋದಲ್ಲಿ ಚಿರತೆಯೊಂದು ಅಡಗಿದೆ. ಅದು ಸಹಜವಾಗಿ ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಅದನ್ನು ನೀವು ಶೋಧಿಸಬಲ್ಲಿರಾ.
ಹಾಗಾದರೆ ಶೋಧಿಸಿ…

ಫ್ರೆಂಡ್ಸ್ ಫೋಟೋದಲ್ಲಿ ಅಡಗಿದ ಚಿರತೆ ನಿಮ್ಮ ದೃಷ್ಟಿಗೆ ಕಂಡು ಬಂತಾ? ಒಂದು ವೇಳೆ ಎಲ್ಲಿದೆ ಅಂತ ಗೊತ್ತಾಗದಿದ್ದರೆ ನಾವೇ ಹೇಳುತ್ತೇವೆ.
ಚಿತ್ರದಲ್ಲಿ ಒಂದು ಸುಂದರವಾದ ಮರವಿದೆ. ಅಲ್ಲಿ ಬರೀ ಮರವಷ್ಟೇ ಅಲ್ಲ, ಆ ಮರದ ಪೊಟರೆಯಲ್ಲಿ ಚಿರತೆಯೊಂದು ಹೊರಗೆ ನೋಡುತ್ತಿರುವ ದೃಶ್ಯವಿದೆ. ನೋಡುಗರಲ್ಲಿ ಕೆಲವರಿಗೆ ಇದು ನಿಜವಾದ ಚಿರತೆ ಇಲ್ಲ ಎಂಬ ಭ್ರಮೆ ಕಾಡಿದೆ. ಮರದಲ್ಲಿ ನೈಸರ್ಗಿಕವಾಗಿಯೇ ಮರದ ಕಾಂಡದಲ್ಲಿ ಚಿರತೆ ನಿಂತ ಹಾಗೆ ಕಲಾಕೃತಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ. ಏನೇ ಆಗಲಿ ಮರದ ಪೊಟರೆಯಲ್ಲಿ ಮಾತ್ರ ಚಿರತೆ ಇದ್ದದ್ದು ನಿಜ. ಹಾಗೂ ಅದನ್ನು ಸರಿಯಾಗಿ ತೀಕ್ಷ್ಣವಾದ ದೃಷ್ಟಿಯಿಂದ ನೋಡಿದಾಗಲೇ ಕಾಣಿಸುವದು.

ಒಬ್ಬನಂತೂ ಹೀಗೆ ಕಾಮೆಂಟ್ ಮಾಡಿದ್ದಾನೆ. ‘ನನಗೆ ಈ ಚಿತ್ರದಲ್ಲಿ ಕಾಣುವ ಚಿರತೆಯನ್ನು ಶೋಧಿಸಲು ಅರ್ಧ ಗಂಟೆ ಬೇಕಾಯಿತು’.