IAS ಸಂದರ್ಶನದಲ್ಲಿ ಹುಡುಗಿಗೆ ಕೇಳಲಾದ ಪ್ರಶ್ನೆ: ಯಾವ ವಸ್ತುವನ್ನು ಒಳಗೆ ಹಾಕಿದ ನಂತರ ಕೆಂಪು ಬಣ್ಣ ಹೊರಗೆ ಬರುತ್ತದೆ? ಹುಡುಗಿ ಉತ್ತರ ಕೊಡುತ್ತಲೇ “ಸಿಲೆಕ್ಟ್!”

IAS ಪರೀಕ್ಷೆ ಪಾಸಾಗಬೇಕಾದರೆ ಸತತವಾದ ಪರಿಶ್ರಮ ಆವಶ್ಯಕ. ದಿನವೊಂದಕ್ಕೆ ನೀವು ಎಷ್ಟು ಗಂಟೆಗಳ ಅಭ್ಯಾಸ ಮಾಡಿದರೂ ಅದು ಕಡಿಮೆಯೇ. ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಸಫಲತೆಯನ್ನು ಪಡೆಯಲು ರಾತ್ರಿ ಹಗಲು ಒಂದು ಮಾಡುತ್ತಾರೆ. ಇಷ್ಟಾದರೂ ಯಶಸ್ಸು ಅದೆಷ್ಟೋ ಸಲ ಬರೀ ಪಾಯಿಂಟ್ ಗಳಲ್ಲಿ ನಿಲುಕದೆ ದೂರ ಉಳಿಯುತ್ತದೆ.

ಲಿಖಿತ ಪರೀಕ್ಷೆಯಂತೂ ಕಠಿಣವಿದ್ದೇ ಇರುತ್ತದೆ. ಅದರಲ್ಲಿ ಪಾಸಾದ ನಂತರ ಮೌಖಿಕ ಪರೀಕ್ಷೆಯನ್ನು ಪಾಸಾಗುವದೆಂದರೆ ತುಂಬಾ ಕಠಿಣ. ಇಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ವಿಚಾರ ಮಾಡಲು ಸಮಯವಿರುವದಿಲ್ಲ. ಇಂಟರ್ ವ್ಯೂವ್ ತೆಗೆದುಕೊಳ್ಳುವವರು ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆಂಬುದರ ಬಗ್ಗೆ ಸ್ವಲ್ಪವೂ ಜ್ಞಾನವಿರುವದಿಲ್ಲ. ಇಲ್ಲಿ ಎಲ್ಲವೂ ಆಕಸ್ಮಿಕವಾಗಿರುತ್ತದೆ. ಹೀಗಾಗಿ ಈ ಪರೀಕ್ಷೆ ಭಾರತದಲ್ಲಿಯ ಎಲ್ಲಕ್ಕೂ ಕಠಿಣ ಪರೀಕ್ಷೆಯೇ ಸರಿ.

ಇಲ್ಲಿ ಪಾಸಾಗುವ ವಿದ್ಯಾರ್ಥಿಗಳು ಉಚ್ಛ ಪದಕ್ಕೆ ಆಸೀನರಾಗುವವರಿರುತ್ತಾರೆ. ಮುಂದೆ ದೇಶದ ಮಹತ್ವದ ಪದವಿಗಳಲ್ಲಿ ಅಲಂಕೃತರಾಗಿ ತುಂಬಾ ಜವಾಬ್ದಾರಿತನದ ಕೆಲಸ ನಿಭಾಯಿಸಬೇಕಾಗುತ್ತದೆ. ಅಂದಾಗ ಅವರು ಕೊಡುವ ಸಮಯೋಚಿತ ಪ್ರಶ್ನೆ ಮತ್ತು IQ ಲೇವಲ್ ಚೆಕ್ ಮಾಡುವದಕ್ಕಾಗಿ ಸಂದರ್ಶನ ತೆಗೆದುಕೊಳ್ಳುವವರು ತುಂಬಾ ಚಿತ್ರ ವಿಚಿತ್ರವಾದ ಪ್ರಶ್ನೆಗಳನ್ನು ಕೇಳುತ್ತಾರೆ.

ಅಲ್ಲಿ ಕೇಳಲಾದ ಇಂಥದೇ ಕೆಲವು ಇಂಟರೆಸ್ಟಿಂಗ್ ಪ್ರಶ್ನೆಗಳನ್ನು ಓದುಗರಿಗಾಗಿ ಇಲ್ಲಿ ತಂದಿದ್ದೇವೆ ನೋಡಿ. (ಕೊನೆಗೆ ಉತ್ತರಗಳು ಕೊಡಲಾಗಿದೆ)

  1. 11+11=4
    12+12=9
    13+13=?
  2. ಅದು ಯಾವ ವಸ್ತು ಸತತವಾಗಿ ಬೀಳುತ್ತಿರುತ್ತದೆ, ಆದರೆ ಯಾವತ್ತೂ ಮುರಿಯುವದಿಲ್ಲ.
  3. ನೀಲಿ ಸಮುದ್ರದಲ್ಲಿ ಕೆಂಪು ಬಣ್ಣದ ಕಲ್ಲನ್ನು ಎಸೆಯಲಾಗಿ ಏನಾಗುವದು?
  4. ರಾಮ ಮತ್ತು ಶಾಮ ಇಬ್ಬರೂ ಅವಳಿ ಸಹೋದರರಾಗಿದ್ದಾರೆ. ಇಬ್ಬರ ಜನ್ಮ ಮೇ ನಲ್ಲಿ ಆಗಿದೆ, ಆದರೆ ಅವರ ಹುಟ್ಟುಹಬ್ಬ ಜೂನ್ ನಲ್ಲಿ ಬರುತ್ತೆ ಯಾಕೆ?
  5. ಹುಡುಗಿಯೊಬ್ಬಳಿಗೆ ಕೇಳಲಾದ ಪ್ರಶ್ನೆ, ಒಂದು ಮುಂಜಾನೆ ಆಕಸ್ಮಿಕವಾಗಿ ನಿನಗೆ ಗೊತ್ತಾಯಿತು, ನೀನು ಗರ್ಭವತಿಯಾಗಿರುವೆ ಅಂತ ಆಗ ನೀನು ಏನು ಮಾಡುವೆ?
  6. ಒಬ್ಬ ವ್ಯಕ್ತಿ ಎಂಟು ದಿವಸಗಳ ವರೆಗೆ ಮಲಗದೆ ಹೇಗೆ ಜೀವಂತವಿರಬಹುದು?
  7. ಯಾವ ವಸ್ತುವನ್ನು ಒಳಗೆ ಹಾಕಲಾಗಿ ಕೆಂಪು ಬಣ್ಣ ಹೊರಗೆ ಬರುವದು?
  8. ಒಬ್ಬ ಮನುಷ್ಯ 12 ಕಿಲೋಮೀಟರ್ ಉತ್ತರದ ಕಡೆಗೆ, ಆಮೇಲೆ 15 ಕಿಲೋಮೀಟರ್ ಪೂರ್ವದ ಕಡೆಗೆ, ಮತ್ತೆ 19 ಕಿಲೋಮೀಟರ್ ಪಶ್ಚಿಮದ ಕಡೆಗೆ, ಅನಂತರ 15 ಕಿಲೋಮೀಟರ್ ದಕ್ಷಿಣದ ಕಡೆಗೆ ಸಂಚರಿಸಿದಾಗ, ಆತ ತನ್ನ ಪ್ರಾರಂಭಿಕ ಸ್ಥಳದಿಂದ ಎಷ್ಟು ಕಿಲೋಮೀಟರ್ ದೂರವಿರುತ್ತಾನೆ?

ಉತ್ತರಗಳು….

  1. 11 ರಲ್ಲಿ 1 ಮತ್ತು 1 ಈ ಸಂಖ್ಯೆಗಳನ್ನು ಕೂಡಿಸಲಾಗಿ 2 ಬರುವದು. ಈ 2 ರ ವರ್ಗಮೂಲ 4 ಬರುವದು, ಆದ್ದರಿಂದ 11+11=4. ಇನ್ನು ಎರಡನೆಯದು ಸಹಿತ ಹಾಗೆಯೇ ಮಾಡಲಾಗಿದೆ. 12 ರಲ್ಲಿ 1 ಮತ್ತು 2 ರ ಬೇರಿಜು 3 ಬರುವದು. ಈ 3 ರ ವರ್ಗಮೂಲ 9 ಆಗುತ್ತದೆ, ಆದ್ದರಿಂದ 12+12=6. ಇನ್ನು ಮೂರನೇಯದರಲ್ಲಿಯೂ ಇದೇ ತರ ವಿಚಾರ ಮಾಡಲಾಗಿ, 1 ಮತ್ತು 3 ನ್ನು ಕೂಡಿಸಲಾಗಿ 4 ಬರುತ್ತದೆ. ಈ ನಾಲ್ಕರ ವರ್ಗಮೂಲ 16 ಬರುತ್ತದೆ ಅಂದಾಗ ಉತ್ತರ 13+13=16 ಬರುವದು.
  2. ಮಳೆ.
  3. ಕಲ್ಲು ಒದ್ದೆಯಾಗುವದು.
  4. ಮೇ ಇದು ಜನ್ಮಸ್ಥಳವಾಗಿದ್ದು, ಜೂನ್ ತಿಂಗಳಲ್ಲಿ ಅವರು ಹುಟ್ಟಿದ್ದಾರೆ ಆದ್ದರಿಂದ.
  5. ಹುಡುಗಿಯು ಕೂಲಾಗಿ ಕೊಟ್ಟ ಉತ್ತರ ನೋಡಿ, ‘ನಾನು ಖುಷಿಯಿಂದ ಈ ಸುದ್ದಿಯನ್ನು ನನ್ನ ಗಂಡನಿಗೆ ಹೇಳುವೆ’.
  6. ರಾತ್ರಿ ಹೊತ್ತು ಮಲಗಿ!
  7. ವೀಳ್ಯದೆಲೆ ಬಾಯೊಳಗೆ ಹಾಕಿದ ನಂತರ ಕೆಂಪು ಬಣ್ಣ ಹೊರಗೆ ಬರುತ್ತದೆ!
  8. 5 ಕಿಲೋಮೀಟರ್.