ತಮ್ಮ ಮೊದಲ ಮೊಟ್ಟೆಯನ್ನು ನೋಡಿ ವಿಶೇಷವಾಗಿ ಸಂಭ್ರಮಿಸಿದ ಕೊಕ್ಕರೆ ಜೋಡಿ! 2.4 ಮಿಲಿಯನ್ ಜನ ನೋಡಿದ ಅಪರೂಪದ Viral Video!
ಸಂಭ್ರಮಾಚರಣೆ ಬರೀ ಮನುಷ್ಯನೇ ಮಾಡುತ್ತಾನಾ? ಉತ್ತರ…. ಇಲ್ಲ. ಯಾಕೆಂದರೆ ಮನುಷ್ಯನು ಬುದ್ಧಿವಂತ ಪ್ರಾಣಿ, ಮನುಷ್ಯನಷ್ಟೇ ತನಗಾದ ಖುಷಿಯನ್ನು ಆನಂದವನನ್ನು ಸಂಭ್ರಮಿಸುವನು ಅಂತ ಇಲ್ಲ. ಮನುಷ್ಯ ತನಗಾದ ಯಾವುದೇ ಖುಷಿಯನ್ನು ಸೆಲಿಬ್ರೆಟ್ ಮಾಡುತ್ತಾನೆ. ಅಥವಾ ಅದನ್ನು ತನ್ನ ಪರಿವಾರದೊಂದಿಗೆ ಇಲ್ಲವೇ ಮಿತ್ರರ ಜೊತೆಗೆ ಖುಷಿ ಖುಷಿಯಾಗಿ ಹಂಚಿಕೊಳ್ಳುತ್ತಾನೆ. ಪ್ರಾಣಿಗಳು ಸಹಿತ ತಮಗಾದ ಖುಷಿಯನ್ನು ತಮ್ಮ ಪ್ರಕಾರ ವಿಜ್ರಂಭಣೆಯಿಂದ ಸಂಭ್ರಮದಿಂದ ಆಚರಿಸುತ್ತವೆ ಎಂಬುದಕ್ಕೆ ಇಲ್ಲಿದೆ ಸುಂದರ ಸಾಕ್ಷಿ.
ನಾವಿಲ್ಲಿ ತಂದಿರುವ ವಿಡಿಯೋ ಒಂದು ನಿಜವಾಗಿಯೂ ಅದ್ಭುತವಾಗಿ ಸೆರೆಹಿಡಿದ ವಿಡಿಯೋ ಆಗಿದೆ. ಈ ವಿಡಿಯೋವನ್ನು ರಾತ್ರಿಯಲ್ಲಿ ಚಿತ್ರೀಕರಿಸಲಾಗಿದೆ. ಫೋಟೋಗ್ರಾಫರ್ ನ ಸಹನೆ ಮತ್ತು ಸಂಯಮವನ್ನು ಮುಕ್ತವಾಗಿ ಹೋಗಳಲೇಬೇಕು. ಏಕೆಂದರೆ, ಈ ಸೀನ್ ಅನ್ನು ಸೆರೆ ಹಿಡಿಯಲು ಎಷ್ಟೊಂದು ಸಮಯ ಕಾದಿರಬೇಕು ಅನಿಸುತ್ತೆ. ಈ ವೀಡಿಯೊವನ್ನು ನೋಡುವಾಗ ಸೌಂಡ್ ಆನ್ ಮಾಡಿ ಕೇಳಿದರೆ ಮತ್ತಷ್ಟು ಸೂಪರ್ ಎನ್ನುವಿರಿ.
ವಿಡಿಯೋ ನೋಡಿ…..
Stork couple celebrates their first egg..
— Buitengebieden (@buitengebieden_) July 31, 2020
Sound on! pic.twitter.com/x75ZKM9c3a
ವಿಡಿಯೋದಲ್ಲಿ ಜೋಡಿ ಕೊಕ್ಕರೆಗಳು ತಮ್ಮ ಮೊದಲ ಮೊಟ್ಟೆಯನ್ನು ನೋಡಿ ಚುಂಚಿನಿಂದ ಶಬ್ದ ಮಾಡುತ್ತ ಏಕಕಾಲಕ್ಕೆ ಎರಡು ಆಕಾಶದ ಕಡೆಗೆ ನೋಡುತ್ತವೆ. ಖುಷಿಯಾಗಿ ತಮ್ಮ ಆನಂದವನ್ನು ಈ ರೀತಿಯಾಗಿ ಹೊರ ಹಾಕಿವೆ. ಅವು ತಮ್ಮ ಆನಂದೋತ್ಸವ ಅಥವಾ ವಿಜೃಂಭಿಸಿದ ಬಗೆ ತುಂಬಾ ಅದ್ಭುತವಾಗಿದೆ ಅಲ್ವಾ?
ಈ ವೀಡಿಯೊವನ್ನು @buitengebieden ಹೆಸರಿನಿಂದ ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ 2.4 ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಎರಡು ಸಾವಿರದ ಎಂಟನೂರರವರೆಗೆ ಲೈಕ್ಸ್ ಗಳು ಬಂದಿದ್ದು 8 ನೂರರವರೆಗೆ ಕಮೆಂಟ್ಸ್ ಗಳು ಬಂದಿವೆ.
ವಿಶೇಷವೆಂದರೆ ಈ ವೀಡಿಯೋಗೆ ಎಲ್ಲರೂ ತುಂಬಾ ತುಂಬಾ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದ್ದಾರೆ.
So cool❤️
— Newer life *cue 101 (@connieb93413316) August 2, 2020
I LOVE this!!!!!
— Laurie Mai (@mothermaii) August 1, 2020