ಯುವತಿಯು ಬಲವಂತವಾಗಿ Kiss ಮಾಡಿದ್ದಕ್ಕೆ ಮಗು ಹೇಗೆ ಸೇ’ಡು ತೀರಿಸಿಕೊಂಡಿತು ನೋಡಿ ಈ ವಿಡಿಯೋ! 9 ಲಕ್ಷಕ್ಕೂ ಹೆಚ್ಚು ಜನರು ನೋಡಿದ ವಿಡಿಯೋ!
ಪುಟಾಣಿಗಳ ತುಂಟಾಟಗಳಿಂದ ಕೂಡಿದ ವೀಡಿಯೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗ ವೈರಲ್ ಆಗುತ್ತವೆ. ಇದಕ್ಕೆ ಕಾರಣ ಆ ಮಕ್ಕಳು ಮುದ್ದು ಮುಖ, ಅವು ಆಡುವ ಯಾವುದೇ ಆಟಗಳು, ಪುಟ್ಟ ಮಕ್ಕಳ ಕ್ಯೂಟ್ ನೋಟ, ಅಂದವಾದ ನಗು, ಮುದ್ದು ಮುದ್ದು ಮುಖ, ಅಂಬೆಗಾಲಿಟ್ಟು ನಡೆಯುವ ಅವುಗಳ ನಡಿಗೆ ಹೀಗೆ ಹೇಳುತ್ತಾ ಹೋದರೆ ಪದಗಳಿಗೆ ಕೊರತೆಯಾಗಬಹುದು. ಇಂತಹ ಮುದ್ದು ಮಕ್ಕಳನ್ನು ನೋಡಿದಾಗ ಪ್ರತಿಯೊಬ್ಬರಿಗೂ ಕೂಡಾ ಅವುಗಳನ್ನು ಎತ್ತಿ ಮುದ್ದಾಡಬೇಕು, ಅವುಗಳಿಗೆ ಮುತ್ತು ನೀಡಬೇಕೆಂದು ಅನಿಸುವುದು ಕೂಡಾ ಸಾಮಾನ್ಯ. ಪುಟ್ಟ ಮಕ್ಕಳನ್ನು ಇಷ್ಟ ಪಡದವರು ಯಾರಿರುತ್ತಾರೆ ಹೇಳಿ?
ಈಗ ಅಂತಹುದೇ ಒಂದು ಮುದ್ದು ಮಗುವಿನ ಅಂದವಾದ ಒಂದು ವೀಡಿಯೋ ಇನ್ಸ್ಟಾಗ್ರಾಂ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ವೀಡಿಯೋದಲ್ಲಿ ಒಬ್ಬ ಯುವತಿ ಒಂದು ಮುದ್ದಾದ ಮಗುವನ್ನು ಎತ್ತಿಕೊಂಡು, ಅದಕ್ಕೆ ಬಲವಂತವಾಗಿ ಕಿಸ್ ಮಾಡಿದ್ದಾಳೆ. ಮುದ್ದಾದ ಆ ಮಗುವನ್ನು ನೋಡುವ ಯಾರಿಗೇ ಆಗಲಿ ಅದನ್ನು ಮುದ್ದಾಡಬೇಕು ಅನಿಸುವಂತ ಕ್ಯೂಟ್ ಕ್ಯೂಟ್ ಬೇಬಿ ಅದು. ಆದ್ದರಿಂದಲೇ ಈ ಯುವತಿ ಕೂಡಾ ಆ ಮುದ್ದುವನ್ನು ಮುದ್ದಾಡುತ್ತಾ ಅದಕ್ಕೆ ಕಿಸ್ ಮಾಡಿದ್ದಾಳೆ. ಆಕೆ ಮಗುವಿಗೆ ಮುತ್ತು ಕೊಟ್ಟ ನಂತರ ಏನು ನಡೆಯಿತು ಅದು ಈಗ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ.
ಆ ಮಗುವಿನ ಅದೇ ಕ್ಯೂಟ್ ನಡವಳಿಗೆ ಈಗ ಎಲ್ಲರ ಗಮನ ಸೆಳೆದಿದೆ. ಆ ಪುಟ್ಟ ಕಂದ ಯುವತಿ ತನಗೆ ಬಲವಂತವಾಗಿ ಕಿಸ್ ಮಾಡಿದ ನಂತರ ತಾನೂ ಕೂಡಾ ಅವಳಿಗೆ ಕಿಸ್ ನೀಡಲು ಮುಂದಾಗಿದೆ. ಅದು ಯಾವ ರೀತಿ ಕಂಡಿದೆ ಎಂದರೆ ತನಗೆ ಕಿಸ್ ಮಾಡಿದ ಅವಳ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆ ಕಂದನು ಆ ಯುವತಿಗೆ ಕಿಸ್ ಮಾಡಲು ಮುನ್ನುಗ್ಗುತ್ತಿರುವಂತೆ ಕಂಡು ಬಂದಿದೆ. ಇದನ್ನು ನೋಡಿದ ನೆಟ್ಟಿಗರು ಕೂಡಾ ಮಗುವಿನ ತುಂಟಾಟಕ್ಕೆ ಫಿದಾ ಆಗಿದ್ದಾರೆ. ಈ ವೀಡಿಯೋ ವನ್ನು ಬಿಗ್ ಬಾಲಿವುಡ್ ಪೇಜ್ ಎನ್ನುವ ಇನ್ಸ್ಟಾಗ್ರಾಂ ಯೂಸರ್ ಶೇರ್ ಮಾಡಿದ್ದು, ಆಗಸ್ಟ್ 4 ರಂದು ಈ ವೀಡಿಯೋ ಶೇರ್ ಮಾಡಿದ್ದಾರೆ.
ವಿಡಿಯೋ ನೋಡಿ
ಈ ವೀಡಿಯೋವನ್ನು ಈಗಾಗಲೇ 9 ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, 23 ಸಾವಿರಕ್ಕಿಂತ ಅಧಿಕ ಲೈಕ್ಸ್ ಕೂಡಾ ದಕ್ಕಿದೆ. ಒಬ್ಬ ಇನ್ಸ್ಟಾಗ್ರಾಂ ಯೂಸರ್ ಎಂತಹ ಮುದ್ದಾದ ಮಗು, ಕ್ಯೂಟ್ ನೆಸ್ ಓವರ್ ಲೋಡೆಡ್ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಪ್ರೀತಿ ಸಿಕ್ಕಾಗ ಸರಿಯಾಗಿ ಈ ಮಗುವಿನ ರೀತಿಯಲ್ಲೇ ಅದನ್ನು ಹಿಂತಿರುಗಿಸಬೇಕು ಎಂದು ಮತ್ತೊಬ್ಬ ಯೂಸರ್ ಪ್ರತಿಕ್ರಿಯೆ ನೀಡಿದ್ದಾರೆ. ವೀಡಿಯೋ ಸಖರ್ ಫನ್ನಿ ಮತ್ತು ಕ್ಯೂಟ್ ಆಗಿದೆ ಎಂದು ಅನೇಕರು ಕಾಮೆಂಟ್ ಮಾಡಿರುವುದು ವಿಶೇಷ.