ಇದ್ದಕಿದ್ದಂತೆ ಶಾಲೆಯಲ್ಲಿ ಪ್ರತ್ಯಕ್ಷವಾದ ಮೊಸಳೆ! ಹೆದರಿದ ಮಕ್ಕಳ ಸ್ಥಿತಿ ನೋಡಿ ಮುಂದೆ ಬಂದ ಯುವಕ.. ಮತ್ತೆ.. ನೋಡಿ ಈ ವಿಡಿಯೋ

ಅಮೆರಿಕೆಯ ಫ್ಲೋರಿಡಾದಲ್ಲಿ ಮೊಸಳೆಗಳು ಜನವಸತಿಯಲ್ಲಿ ಸೇರುವದು ಸರ್ವೇ ಸಾಮಾನ್ಯ. ಅಲ್ಲಿ ಕೆಲವೊಮ್ಮೆ ಮನೆಯ ಮುಂದೆ ಇನ್ನು ಕೆಲವೊಮ್ಮೆ ಸ್ವಿಮಿಂಗ್ ಪೂಲ್ ನಲ್ಲಿ ಎಂಟ್ರಿ ಮಾಡುತ್ತವೆ. ಆದರೆ ಮಕ್ಕಳಿಂದ ತುಂಬಿದ ಶಾಲೆಯಲ್ಲಿ ಮೊಸಳೆ ಸೇರಿದರೆ ಹೇಗಾಗುವದು ಎಂಬ ಯೋಚನೆ ಮಾಡಿದರೂ ಮೈಮೇಲಿನ ಕೂದಲೂಗಳು ಎದ್ದು ನಿಲ್ಲುತ್ತವೆ.

ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಾ ಇದೆ. ಈ ವಿಡಿಯೋದಲ್ಲಿ ಮೊಸಳೆ ಶಾಲೆಯಲ್ಲಿ ಬಂದಿದೆ. ಇದನ್ನು ನೋಡಿದ ಮಕ್ಕಳು ಒಂದೇ ಸಮನೆ ಗದ್ದಲವನ್ನು ಮಾಡುತ್ತಿವೆ. ಆ ಮಕ್ಕಳು ಮಾಡುವ ಶಬ್ದವು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳುತ್ತಿದೆ.

ವಿಡಿಯೋ ನೋಡಿ…..

ಈ ವೀಡಿಯೊವನ್ನು ಟ್ವಿಟರ್ ನಲ್ಲಿ ಟೋರಿ ಹೆಸರಿನಿಂದ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಯುವಕನೊಬ್ಬ ಮೊಸಳೆಯನ್ನು ಹಿಡಿದು ಎಳೆಯುತ್ತ ತೆಗೆದುಕೊಂಡು ಹೋಗುತ್ತಿದ್ದಾನೆ. ಮೊಸಳೆಯ ಬಾಲವನ್ನು ಹಿಡಿದು ನಿರಾಯಾಸವಾಗಿ ಅದನ್ನು ಎಳೆದೊಯ್ಯುತ್ತಿದ್ದಾನೆ. ಆಗ ಶಾಲೆಯಲ್ಲಿಯ ಮಕ್ಕಳು ಕಿರುಚಾಡುವ ಶಬ್ದವು ಕೇಳಿ ಬರುತ್ತಿದೆ. ದಿಟ್ಟಿಸಿ ನೋಡಿದಾಗ ಮೊಸಳೆಯ ಕಣ್ಣುಗಳು ಮತ್ತು ಬಾಲ ಟೇಪ್ ನಿಂದ ಸುತ್ತಿರುವದು ಕಂಡು ಬರುತ್ತದೆ.

ಬರೀ 7 ಸೆಕೆಂಡಿನ ಈ ವೀಡಿಯೊವನ್ನು ಇಲ್ಲಿಯವರೆಗೆ 25 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಗೆಯೇ ಸಾಕಷ್ಟು ಕಾಮೆಂಟ್ ಮತ್ತು ಲೈಕ್ಸ್ ಗಳು ಹರಿದು ಬರುತ್ತಿವೆ.