ಭಾರತ ಭೇಟಿಯ ಸಮಯದಲ್ಲಿ ಸಿಕ್ಕ ಒಂದೇ ಒಂದು ಸಾಮಾನ್ಯ ಐಡಿಯಾದಿಂದ ಅಮೆರಿಕಕ್ಕೆ ಹೋಗಿ 228 ಕೋಟಿ ರೂಪಾಯಿ ಸಂಪಾದನೆ ಮಾಡಿದ ಮಹಿಳೆ!
‘ಚಹಾ’ ಈ ಶಬ್ದವೇ ಹಾಗಿದೆ, ಬೇಕಾ? ಅಂತ ಯಾರಾದ್ರೂ ಕೇಳಿದಾಗ, ಬೇಡ ಅಂತ ಬಾಯಿಗೆ ಬರೋಲ್ಲವೇ. ಭಾರತೀಯರ ಅಂದರೆ ನಮ್ಮ ಮುಂಜಾನೆ, ಚಹಾದ ಹೊರತಾಗಿ ಇಲ್ಲವೇ ಇಲ್ಲ. ಇಲ್ಲಿ ದೊಡ್ಡ ದೊಡ್ಡ ಡೀಲ್ ಗಳು ಬರೀ ಒಂದು ಕಪ್ ಚಹಾದ ಮೇಲೆಯೇ ಆಗುತ್ತವೆ, ಇದು ಎಲ್ಲರಿಗೂ ತಿಳಿದ ವಿಷಯವೇ. ಚಹಾದ ಸುಗಂಧ ಪರಿಮಳ ಮೂಗಿಗೆ ತಾಗುತ್ತಿದ್ದಂತೆಯೇ ಕೆಲವರಿಗೆ ಕುಡಿಯದೆ ತಡೆದುಕೊಳ್ಳಲು ಸಾಧ್ಯವಾಗುವದಿಲ್ಲ. ಮಿತ್ರರಿಂದ ಹಿಡಿದು ರಾಜಕೀಯದವರೆಗೆ ಎಲ್ಲ ವಿಷಯಗಳ ಬಗ್ಗೆ ‘ಚಾಯ್ ಪೆ ಚರ್ಚಾ’ ಆಗುತ್ತಲೇ ಇರುತ್ತೆ. ಆದರೀಗ ಈ ಚಹಾಕ್ಕೆ ಅಮೆರಿಕೆಯೂ ಮಾರು ಹೋಗಿದೆ ಎಂದರೆ ತಪ್ಪಿಲ್ಲ ಹೇಗೆ ಅಂತ ನೋಡೋಣವಾ?
ಅಮೆರಿಕಾದಿಂದ ಭಾರತಕ್ಕೆ ಪ್ರವಾಸಕ್ಕಾಗಿ ಬಂದು ಇಲ್ಲಿಯ ಚಹಾ ಸವಿದು ಇದರ ರುಚಿಗೆ ಮಾರು ಹೋಗಿ ಇದೇ ಐಡಿಯಾವನ್ನು ಅಮೆರಿಕೆಗೆ ತೆಗೆದುಕೊಂಡು ಹೋಗಿ ಅಲ್ಲಿ ‘ಭಕ್ತಿ ಚಹಾ’ ಹೆಸರಿನಿಂದ ಟೀ ಸ್ಟಾಲ್ ಓಪನ್ ಮಾಡಿ 228 ಕೋಟಿ ರೂಪಾಯಿಗಳ ಸಿರಿವಂತಿಕೆ ಮಾಡಿಕೊಂಡ ‘ಬ್ರುಕ್ ಎಡಿ’ಯ ಸಫಲತೆಯ ಕಥೆ ಇದಾಗಿದೆ.

ಭಾರತದಲ್ಲಿ ಚಹಾ ಕುಡಿಯುವವರ ಸಂಖ್ಯೆ ಕಡಿಮೆ ಏನಿಲ್ಲ. ಇಲ್ಲಿ ಸುಮಾರು 75 ರಿಂದ 80 ಪ್ರತಿಶತ ಜನರು ಚಹಾ ಕುಡಿಯುತ್ತಾರೆ. ಹೀಗಾಗಿ ಭಾರತದಲ್ಲಿ ಎಲ್ಲೆಂದರಲ್ಲಿ ಚಹಾ ಕ್ಯಾಂಟೀನ್ ಗಳು ಕಂಡು ಬರುತ್ತವೆ.
ಭಾರತದ ಪ್ರವಾಸಕ್ಕೆ ಬಂದ ಬ್ರುಕ್ ಎಡಿ ಮರಳಿ ಅಮೆರಿಕೆಗೆ ಹೋದ ನಂತರ ಅಲ್ಲಿಯ ಲೋಕಲ್ ಕೆಫೆಗಳಲ್ಲಿ ಎಷ್ಟು ಸಲ ಚಹಾ ಕುಡಿದರೂ ಭಾರತದಲ್ಲಿ ಕುಡಿದ ಚಹಾದ ಸ್ವಾದ ಎಲ್ಲಿಯೂ ಬರಲಿಲ್ಲ, ಮನವೂ ತಣಿಯಲಿಲ್ಲ. ಅದಕ್ಕೆ ಕಾರಣವೂ ಇದೆ, ಬ್ರುಕ್ ಳು ಭಾರತ ಭ್ರಮಣದಲ್ಲಿದ್ದಾಗ ಇಲ್ಲಿ ಸೇವಿಸಿದ ಚಹಾದ ರುಚಿ, ಮರಳಿ ತನ್ನ ನಾಡಾದ ಅಮೆರಿಕೆಗೆ ಹೋದರೂ ಮರೆತಿರಲಿಲ್ಲ.

ಈ ಮೇಲಿನ ಒಂದು ಕಾರಣ ಬ್ರುಕ್ ಳಿಗೆ ಏನೋ ಒಂದು ಬೇರೆ ಮಾಡಲು ಪ್ರೇರಣೆ ಕೊಡುತ್ತಿತ್ತು. ಹೀಗಾಗಿ 2007 ರಲ್ಲಿ ಬ್ರುಕ್ ಳು ಭಾರತದ ಟೆಸ್ಟ್ ಕೊಡುವ ಟೀ ಸ್ಟಾಲ್ ಓಪನ್ ಮಾಡಿಯೇ ಬಿಟ್ಟಳು. ಬ್ರುಕ್ ಹೇಳುವ ಹಾಗೆ ಮೊದಮೊದಲು ಈ ರೀತಿಯ ಚಹಾ ಮಾಡಲು ಸ್ವಲ್ಪ ಕಷ್ಟವಾಯಿತು ಆಮೇಲೆ ನಂತರ ಎಲ್ಲವೂ ಸರಿಹೋಯಿತು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಭಾರತದ ಪ್ರವಾಸದಲ್ಲಿದ್ದಾಗ ‘ಎಡಿ’ ತುಂಬಾ ಸಲ ಚಹಾ ಕುಡಿದು ಕುಡಿದು ಚಹಾದ ವ್ಯಸನಿಯಾಗಿ ಬಿಟ್ಟರು. ಅವರು ಆ ವ್ಯಸನದಲ್ಲಿ ಎಷ್ಟೊಂದು ನಿಪುಣರಾದರೆಂದರೆ, ಯಾವ ಚಹಾದಲ್ಲಿ ಯಾವ ಕಂಟೆಂಟ್ (ಶುಂಠಿ, ಯಾಲಕ್ಕಿ, ಇನ್ನಿತರ ಮಸಾಲೆ ಪದಾರ್ಥಗಳು) ಹಾಕಲಾಗಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಕಂಡು ಹಿಡಿಯಲು ಶುರು ಮಾಡಿದಳು. ಯಾಕೆಂದರೆ ಬ್ರುಕ್ ಳು ಅನೇಕ ಸ್ಥಳದಲ್ಲಿ ಚಹಾ ಸೇವನೆ ಮಾಡುತ್ತಿದ್ದಳು. ಎಲ್ಲ ಕಡೆಗೆ ಅದರ ಪರಿಮಳ, ಗಂಧ, ಹಾಗೂ ಸ್ವಾದದಲ್ಲಿ ಬದಲಾವಣೆ ಇರುತ್ತಿತ್ತು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು.

ಮುಂದೆ ತನ್ನ ದೇಶದ ಕೊಲೊರ್ಯಡೋ ಪ್ರಾಂತದಲ್ಲಿ ಹೋಗಿ ತನ್ನ ಕಾರಿನ ಹಿಂಬದಿಯಲ್ಲಿ ಮೆಸಾನ್ ಜಾರ್ ನ್ನಿಟ್ಟು ಚಹಾದ ಮಾರಾಟ ಶುರು ಮಾಡಿದಳು. ಇದು ಅಲ್ಲಿಯ ಜನರಿಗೆ ಇಷ್ಟವಾಯಿತು. ಹೀಗಾಗಿ ಮೊದಮೊದಲು ಲಾಭ ಗಳಿಕೆಗೆ ವಿಚಾರ ಮಾಡದೆ ತನ್ನ ಬಿಜಿನೆಸ್ ನ್ನು ಯಾವ ಪ್ರಕಾರ ಬೆಳೆಸಬೇಕು ಎನ್ನುವದರ ಕಡೆಗೆ ಗಮನ ಹರಿಸಿದಳು. ಇದು ನಿಜವಾದ ಬಿಜಿನೆಸ್ ಮಂತ್ರವೂ ಅನ್ನಬಹುದು.
ಈ ಬಿಜಿನೆಸ್ ಸಲುವಾಗಿ ಒಂದೆರಡು ಒಳ್ಳೆಯ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಅದರಿಂದ ಒಂದು ಕೋಟಿ ಡಾಲರ್ ಗಳವರೆಗೆ ಹಣ ಕೂಡಿಸಿದಳು. ತಾನು ತಯಾರಿಸುವ ಚಹಾಕ್ಕೆ ಹಶಿ ಶುಂಠಿಯನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಲಾರಂಭಿಸಿದಳು. ಇದರಲ್ಲಿ ಮುಖ್ಯವಾಗಿ 3 ಲಕ್ಷ ಪೌಂಡ್ ಸಾವಯವ ಶುಂಠಿ ಪೆರುವಿನಿಂದ ಬರುತ್ತಿತ್ತು.

ಈ ತನ್ನ ಬಿಜಿನೆಸ್ ನಲ್ಲಿ ಭಕ್ತಿಯ ಸಮಾಗಮವನ್ನು ಸರಿಯಾಗಿ ಮಾಡಿದಳು. ಭಕ್ತಿ ಚಹಾ 2015 ರಲ್ಲಿ ಗೀತಾ ಹೆಸರಿನಲ್ಲಿ ಸಾಮಾಜಿಕ ಬದಲಾವಣೆಯ ಹೊಣೆಯನ್ನು ಹೊತ್ತಿತು. ಇದರ ಅಡಿಯಲ್ಲಿ ನಿರ್ವಾಸಿತರಿಗೆ ಆಹಾರ ಮತ್ತು ಶುದ್ಧ ನೀರಿನ ವ್ಯವಸ್ಥೆಯನ್ನು ಮಾಡಲು ಬ್ರುಕ್ ಳ ಸಂಸ್ಥೆ ಧನಸಹಾಯ ಮಾಡುತ್ತದೆ.
ಭಕ್ತಿ ಚಹಾ ಅಮೆರಿಕೆಯಲ್ಲಿ ತುಂಬಾ ಫೇಮಸ್ ಆಗಿದೆ. ಬರೀ ಚಹಾದ ಉದ್ಯೋಗದಿಂದಲೇ 11 ವರ್ಷಗಳಲ್ಲಿ ಬ್ರುಕ್ ಳು 228 ಕೋಟಿ ರೂಪಾಯಿಗಳ ಗಳಿಕೆಯನ್ನು ಮಾಡಿದ್ದಾಳೆ. ಈ ವರ್ಷ ಆಕೆಯ ಗಳಿಕೆ 40 ಕೋಟಿಗೂ ಮೀರಿದೆ. ಸದ್ಯಕ್ಕೆ ಅವಳ ಭಕ್ತಿ ಚಹಾ ಕಂಪನಿಯಲ್ಲಿ ಸುಮಾರು 30 ಜನರು ಕೆಲಸ ಮಾಡುವವರಿದ್ದಾರೆ.
ಬ್ರುಕ್ ಳು ಭಾರತದ ಬಗ್ಗೆ ತುಂಬಾ ಅಭಿಮಾನದಿಂದ ಮಾತಾಡುತ್ತಾಳೆ. ಭಾರತ ಇದು ವಿವಿಧತೆಯಿಂದ ಕೂಡಿದ ಸುಂದರ ದೇಶವಾಗಿದೆ. ಈ ದೇಶದ ಬಗ್ಗೆ ನನ್ನ ಮನದಲ್ಲಿ ಯಾವತ್ತೂ ಪ್ರೀತಿ ಇದೆ. ನಾನು ಎಷ್ಟು ಸಲ ಭಾರತಕ್ಕೆ ಹೋಗುತ್ತೆನೆ ಅಷ್ಟೊಂದು ಬಾರಿ ಅಲ್ಲಿ ಏನಾದರೂ ಹೊಸದನ್ನೇ ಕಾಣಲು ಸಿಗುತ್ತದೆ ಎಂದು, ಇಷ್ಟೊಂದು ಹಣ ಗಳಿಸಿದ ಬ್ರುಕ್ ಳು ಭಾರತವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾಳೆ.

ಐಡಿಯಾಗಳು ತಲೆಯಲ್ಲಿ ತುಂಬಾ ಇರುತ್ತವೆ, ಆದರೆ ಆ ಐಡಿಯಾಗಳನ್ನು ನಾನು ವರ್ಕೌಟ್ ಮಾಡಿದರೆ ಅದರಲ್ಲಿ ನನಗೆ ಯಶಸ್ಸು ಲಭಿಸುವದೋ ಇಲ್ಲವೋ ಎಂದು ಹೆದರಿ ಎಷ್ಟೋ ಜನರು ತಮ್ಮ ಅವಕಾಶಗಳ ಮೇಲೆ ನೀರು ಚೆಲ್ಲಿ ಕುಳಿತವರನ್ನು ಕೇಳಿದ್ದೇವೆ. ಆಮೇಲೆ ಪಶ್ಚಾತ್ತಾಪ ಪಡುವವರು ಇರುತ್ತಾರೆ. 3 ಇಡಿಯಟ್ಸ್ ಚಲನಚಿತ್ರದಲ್ಲಿ ಕೊಟ್ಟ ಮೆಸೇಜ್ ತರ ಹವ್ಯಾಸದ ಕೆಲಸದ ಕಡೆಗೆ ಗಮನಕೊಡಬೇಕು, ಅದನ್ನೇ ಗುರಿಯಾಗಿಡಬೇಕು, ಸಫಲತೆ ಸಿಗುವವರೆಗೂ ವಿಶ್ರಾಂತಿ ಬೇಡ, ಒಂದಿಲ್ಲ ಒಂದು ದಿವಸ ತಕ್ಕ ಪ್ರತಿಫಲ ಸಿಕ್ಕೇ ಸಿಗುವದು. ಬ್ರುಕ್ ಳು ಕಂಡು ಹಿಡಿದ ಈ ಐಡಿಯಾ ಭಾರತದಲ್ಲಿ ಸಾಮಾನ್ಯವಾಗಿದೆ. ಇದೇ ಸಾಮಾನ್ಯವಾದ ಐಡಿಯಾದಿಂದ ಕೋಟ್ಯಾಧೀಶ್ವರಿಯಾದ ಬ್ರುಕ್ ಳ ಈ ಐಡಿಯಾ ನಿಜ್ಜಕ್ಕೂ ಮೆಚ್ಚುವಂಥದ್ದೇ!