Video: ನೀರುಕುದುರೆಯ ಬೇಟೆಯಾಡಲು ಹೋಗಿ ಫಜೀತಿ ಮಾಡಿಕೊಂಡ ಸಿಂಹ! ಜೀವನದಲ್ಲಿ ಇನ್ನೆಂದೂ ನೀರುಕುದುರೆಯ ತಂಟೆಗೆ ಹೋಗುವುದಿಲ್ಲ ‘ಈ’ ಸಿಂಹ!
ಶಕ್ತಿ ಇದೆಯೆಂದು ಗೋಡೆಗೆ ತಲೆ ಚಚ್ಚಿಕೊಳ್ಳುವದು ಸರಿಯಲ್ಲ. ಈ ಗಾದೆ ಮಾತನ್ನು ನಾವೆಲ್ಲರು ಕೇಳಿಯೇ ಇದ್ದೇವೆ. ಈ ಗಾದೆಗೆ ಒಪ್ಪುವ ಹಾಗೆ ಕಾಡಿನಲ್ಲಿ ಕಾಡಿನ ರಾಜನೇ ಫಜೀತಿಯಾದ ಘಟನೆಯ ವಿಡಿಯೋ ಒಂದು ತುಂಬಾ ವೈರಲ್ ಆಗಿದೆ.
ಒಟ್ಟಿನಲ್ಲಿ ಆದದ್ದೇನೆಂದರೆ, ಕಾಡಿನಲ್ಲಿ ಹಸಿದ ಸಿಂಹವು ಶಿ ಕಾ ರಿಗಾಗಿ ಮಲಗಿದ ನೀರ್ಗುದುರೆಯೊಂದನ್ನು ಬೇ ಟೆಯಾಡಲು ಪ್ರಯತ್ನಿಸಿದೆ. ಆಗ ನೀರ್ಗುದುರೆ ತನ್ನ ಜೀವ ಭ ಯದಿಂದ ಅಥವಾ ಸಿಂಹದಿಂದ ಬಚಾವಾಗಲು ಓಡುತ್ತಿದೆ. ಸಿಂಹ ಮಾತ್ರ ಅದನ್ನು ಬಿಡಲೇಬಾರದು ಎಂಬ ಹೆಬ್ಬಯಕೆಯಿಂದ ಓಡುತ್ತ ಬೆನ್ನಟ್ಟುತ್ತ ಅದರ ಮಗ್ಗುಲಿನಿಂದ ಹಾಯ್ದು ಮುಂದೆ ಬಂದಿದೆ. ಸಿಂಹವು ತಪ್ಪಿದ್ದು ಅಲ್ಲಿಯೇ. ಯಾವ ಕ್ಷಣದಲ್ಲಿ ಸಿಂಹ ಅದರ ಮುಂದೆ ಬಂದಿದೆಯೋ ಆಗ ನೀರ್ಗುದುರೆ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೆ ತನ್ನ ದೈತ್ಯಾಕಾರದ ದವಡೆಯ ಬಾಯಿಯಲ್ಲಿ ಸಿಂಹದ ರುಂ ಡ ವನ್ನು ಗಟ್ಟಿಯಾಗಿ ಹಿಡಿದು ಮೊದಲು ಹಾರಿಸಿ ಆನಂತರ ಮತ್ತೆ ಜೋರಾಗಿ ನೆಲಕ್ಕಪ್ಪಳಿಸಿದೆ.
ನೀರ್ಗುದುರೆ ಮಾಡಿದ ಹಠಾತ್ ಆಕ್ರಮಣದಿಂದ ಸಿಂಹವು ಸಾ ವು ಎಂದರೆ ಎಷ್ಟೊಂದು ಭ ಯಾ ನಕವಾಗಿರುತ್ತೆ ಎಂಬುದನ್ನು ಒಂದೇ ಕ್ಷಣದಲ್ಲಿ ಅರ್ಥ ಮಾಡಿಕೊಂಡಿದೆ. ಈ ವೀಡಿಯೊವನ್ನು ಸರಿಯಾಗಿ ಗಮನಕೊಟ್ಟು ನೋಡಿದಾಗ, ಸಿಂಹದ ಮೇಲೆ ಎಂಥ ಅಸಹಾಯಕ ಪರಿಸ್ಥಿತಿ ಬಂದೆರಗಿದೆ ಎಂಬುದರ ಅರಿವು ನಮಗಾಗುತ್ತದೆ. ನೀರ್ಗುದುರೆ ಸಿಂಹದ ತಲೆಯನ್ನು ತನ್ನ ಬಲಿಷ್ಠವಾದ ದವಡೆಯಲ್ಲಿ ಹಿಡಿದು ನೆಲಕ್ಕೆ ಅಪ್ಪಳಿಸುವ ಮೊದಲು ಸಿಂಹ ತನ್ನ ಕೈಗಳನ್ನು ಜೋಡಿಸಿ ದೈನ್ಯತೆಯಲ್ಲಿ ನನ್ನನ್ನು ಇದೊಂದು ಸಲ ಬಿಟ್ಟುಬಿಡು ಇನ್ನೊಮ್ಮೆ ನಿನ್ನ ದಾರಿಗೆ ಎಂದಿಗೂ ಅಡ್ಡ ಬರುವದಿಲ್ಲ ಎನ್ನುವ ಹಾಗಿದೆ ಚಿತ್ರ.
ವೀಡಿಯೊ ನೋಡಿ…
HIPPO VS. LION pic.twitter.com/BAcXF9bQSn
— (1st) Best Fights 🎬🍿 (@30SecFight) February 12, 2020
ನೀರ್ಗುದುರೆಯು ಸಿಂಹಕ್ಕೆ ಸರಿಯಾಗಿ ನೆಲಕ್ಕಪ್ಪಳಿಸಿ ಬಿಟ್ಟಾಗ ಕಾಡಿನ ರಾಜ ಅಲ್ಲಿಂದ ಸ ತ್ತೇನೋ ಇದ್ದೆನೋ ಎಂದು ಸ್ವಲ್ಪವೂ ವಿಚಾರ ಮಾಡದೆ ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಅಲ್ಲಿಂದ ಪರಾರಿಯಾಗಿದೆ.
ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ @30SecFight ಹೆಸರಿನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ 2 ಲಕ್ಷ 17 ಸಾವಿರ ಜನ ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ‘ನೀರ್ಗುದುರೆಗೆ ಯಾವತ್ತೂ ಕಡಿಮೆ ಎಂದಿಗೂ ತಿಳಿಯಬೇಡಿ’ ಎಂದು ಸ್ಪೆಷಲ್ ಸಿಂಹಕ್ಕೆ ಹೇಳಿದ ಹಾಗಿದೆ.