₹1,300 ಗಳಲ್ಲಿ ಖರೀದಿಸಿದ ಸೋಫಾ ಮೇಲೆ ಕುಳಿತಾಗ ಏನೋ ತಾಗಿದ ಹಾಗಾಯಿತು, ಏನಿರಬಹುದೆಂದು ತೆಗೆದು ನೋಡಿದಾಗ ಫುಲ್ ಶಾಕ್!
ಹಳೆಯ ವಸ್ತುಗಳನ್ನು ಮಾರಾಟ ಮಾಡುವುದು ಕೂಡಾ ಇತ್ತೀಚಿನ ದಿನಗಳಲ್ಲಿ ಬಹಳ ಜೋರಾಗಿ ನಡೆಯುತ್ತಿದೆ. ಆನ್ಲೈನ್ ನಲ್ಲಿ ಕೂಡಾ ಸೆಕೆಂಡ್ ಹ್ಯಾಂಡ್ ವಸ್ತುಗಳು ದೊರೆಯುತ್ತದೆ. ಹೀಗೆ ಅಗತ್ಯವೆಂದು ಅಮೆರಿಕಾದಲ್ಲಿ ವಾಸಿಸುತ್ತಿರುವ ಮೂವರು ವಿದ್ಯಾರ್ಥಿಗಳು ಅಗತ್ಯವಿದೆಯೆಂದು ತಮಗಾಗಿ 1300 ರೂಪಾಯಿಗಳನ್ನು ನೀಡಿ ಒಂದು ಹಳೆಯ ಸೋಫಾವನ್ನು ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ಮೇಲೆ ನಡೆದದ್ದು ಮಾತ್ರ ಯಾರೂ ಊಹಿಸದ್ದು. ಏಕೆಂದರೆ ಆ ಹಳೆಯ ಸೋಫಾದಲ್ಲಿ ಈ ಮೂರು ಜನ ವಿದ್ಯಾರ್ಥಿಗಳಿಗೆ ದೊರೆತಿದ್ದು ಲಕ್ಷಗಳ ಮೊತ್ತದ ಹಣ. ಏನು ಹಳೆಯ ಸೋಫಾದಿಂದ ಲಕ್ಷ ಲಕ್ಷ ಹಣವೇ? ಏನಿದು ತಮಾಷೆ ಎನ್ನುವರಾ? ಇದು ತಮಾಷೆಯಲ್ಲ. ನಿಜವಾಗಿ ನಡೆದಿರುವ ಒಂದು ವಿಚಿತ್ರವಾದ ಘಟನೆ.
ಪಾಲ್ಟೂಜ್ ನಲ್ಲಿ ನೆಲೆಸಿರುವ ಮೂರು ಜನ ವಿದ್ಯಾರ್ಥಿಗಳು ಹಣವನ್ನು ಕೂಡಿಸಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಆ ಮನೆಯನ್ನು ಅಲಂಕರಿಸಲು ಅವರಿಗೆ ಕೆಲವು ವಸ್ತುಗಳು ಬೇಕಿದ್ದರಿಂದ ಅವುಗಳನ್ನು ಕೂಡಾ ಖರೀದಿ ಮಾಡಲು ಹಳೆಯ ವಸ್ತುಗಳು ಮೊರೆ ಹೋಗಿದ್ದಾರೆ. ಹಾಗೆ ಹಳೆಯ ವಸ್ತುಗಳನ್ನು ಖರೀದಿ ಮಾಡುವಾಗಲೇ ಅವರು 1300 ರೂಪಾಯಿಗೆ ಒಂದು ಸೋಫಾ ಖರೀದಿ ಮಾಡಿದ್ದಾರೆ. ಸ್ಟೇಟ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ ರೀಸೋ ವರ್ಖೋವ್, ಕ್ಯಾಲ್ಲಿ ಗಸ್ಟಿ ಮತ್ತು ಲಾರಾ ರುಸ್ಸೊ ತಮ್ಮ ಬಾಡಿಗೆ ಮನೆಗಾಗಿ ಸೋಪಾ ಖರೀದಿ ಮಾಡಿದ ಮೂರು ಜನ ವಿದ್ಯಾರ್ಥಿನಿಯರು.

ಹೀಗೆ ಖರೀದಿ ಮಾಡಿ ತಂದ ಸೋಫಾದ ಮೇಲೆ ಕುಳಿತಿರುವಾಗ ಅವರಿಗೆ, ಸೋಫಾದ ಅಂಚುಗಳಲ್ಲಿ ಏನೋ ಚುಚ್ಚುತ್ತಿರುವಂತೆ ಭಾಸವಾಗತೊಡಗಿತು. ಹಾಗೆ ಚುಚ್ಚಿದ ಅನುಭವವಾದ ನಂತರ ಅವರು ಆ ಭಾಗದಲ್ಲಿ ಸೋಫಾ ಮೇಲಿನ ಹಾಸಿಗೆಯಂತಹ ಮೇಲ್ಭಾಗವನ್ನು ತೆಗೆದು ಚುಚ್ಚುತ್ತಿರುವುದು ಏನೆಂದು ನೋಡಲು ಮುಂದಾಗಿದ್ದಾರೆ. ಹಾಗೆ ಹಾಸಿಗೆ ತೆಗೆದಾಗ ಅವರಿಗೆ ಅಲ್ಲಿ ಒಂದು ಕವರ್ ಸಿಕ್ಕಿದೆ. ಅದನ್ನು ತೆರೆದು ನೋಡಲು ಅದರೊಳಗೆ 70,000 ರೂಪಾಯಿಗಳು ಇದ್ದವು. ಇದನ್ನು ನೋಡಿ ಅವರಿಗೆ ಅನುಮಾನವಾಗಿ ಸೋಫಾದ ಇತರೆ ಭಾಗದಲ್ಲಿ ಕೂಡಾ ಹಾಸಿಗೆಯಂತಹ ಮೃದು ಭಾಗವನ್ನು ಪಕ್ಕಕ್ಕೆ ತೆಗೆದು ಇರಿಸಿದಾಗ ನಿಜಕ್ಕೂ ಶಾಕ್ ಆಗಿದ್ದಾರೆ. ಕಾರಣ ಮೊದಲು ಸಿಕ್ಕಿದಂತಹ ಹಣದ ಕವರ್ ಗಳು ಸಿಕ್ಕಿವೆ.

ಮೂವರು ಕೂಡಾ ಕುಳಿತು ಎಲ್ಲಾ ಹಣವನ್ನು ಲೆಕ್ಕ ಹಾಕಿದಾಗ ಒಟ್ಟು 40 ಲಕ್ಷ ರೂಪಾಯಿಗಳಷ್ಟು ಇದ್ದುದ್ದನ್ನು ನೋಡಿ ಅವರು ಆಶ್ಚರ್ಯ ಪಟ್ಟಿದ್ದಾರೆ. ಅನಂತರ ಮೂವರೂ ಹಣದ ಜೊತೆ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಹೀಗೆ ಹಣ ಲೆಕ್ಕಾಚಾರ ಮಾಡುವಾಗ ಅವರಿಗೆ ಅದರ ಜೊತೆಗೊಂದು ಬ್ಯಾಂಕ್ ನ ಡೆಪಾಸಿಟ್ ಸ್ಲಿಪ್ ಕೂಡಾ ದೊರೆತಿದೆ. ಆಗ ಇವರಿಗೆ ಬಹುಶಃ ಇದು ಯಾರೋ ಬ್ಯಾಂಕಿನಲ್ಲಿ ಹಣ ಜಮಾ ಮಾಡಲು ಇಟ್ಟ ಹಣ, ಆದರೆ ಕಾರಣಾಂತರದಿಂದ ಅದು ಸಾಧ್ಯವಾಗಿಲ್ಲವೆಂದು ಅವರು ತಿಳಿದು ಬಂದಿದೆ. ಅನಂತರ ಮೂವರು ಸ್ಲಿಪ್ ಸಹಾಯದಿಂದ ಆ ಹಣದ ಮಾಲಿಕರನ್ನು ಹುಡುಕುವ ಕೆಲಸಕ್ಕೆ ಕೈ ಹಾಕಿದರು.

ಹೀಗೆ ಹುಡುಕುತ್ತಾ ಹೊರಟ ಅವರಿಗೆ ಒಂದು ಮನೆಯಲ್ಲಿ ಒಂಟಿಯಾಗಿ ಜೀವನ ಮಾಡುತ್ತಿರುವ ಒಬ್ಬ ವಯಸ್ಸಾದ ಮಹಿಳೆಯ ಪತಿಯ ರಿಟೈರ್ಮೆಂಟ್ ಹಣ ಅದು, ಆತ ಅದನ್ನು ಬ್ಯಾಂಕಿನಲ್ಲಿ ಜಮೆ ಮಾಡಿರಲಿಲ್ಲವೆಂದೂ ಆತ ತೀರಿಕೊಂಡ ನಂತರ ಆತನ ಮಕ್ಕಳು ಸೋಫಾವನ್ನು ಸರಿಯಾಗಿ ಗಮನಿಸಿದೇ,ಅದರಲ್ಲಿ ಹಣ ಇರುವುದು ತಿಳಿಯದೇ ಮಾರಿದ್ದಾರೆ ಎಂದ ಆಕೆ ಹೇಳಿದ್ದಾರೆ. ಆಕೆಯ ಕಥೆಯನ್ನು ಕೇಳಿ, ಪರಿಸ್ಥಿತಿಯನ್ನು ನೋಡಿದ ಮೂವರು ವಿದ್ಯಾರ್ಥಿಗಳು ಕೂಡಾ ಸೋಫಾ ದಲ್ಲಿ ತಮಗೆ ದೊರೆತ ಅಷ್ಟೂ ಹಣವನ್ನು ಆ ಮಹಿಳೆಗೆ ನೀಡಿ ಬಂದಿದ್ದಾರೆ.
