ಅಬ್ಬಾ! 51 ಲಕ್ಷಕ್ಕೆ ಮಾರಾಟವಾಯಿತು 33 ಲೀಟರ್ ಹಾಲು ಕೊಡುವ ಮುರ್ರಾ ತಳಿಯ ಎಮ್ಮೆ!

ವಿಶ್ವ ದಾಖಲೆಗೆ ಎಮ್ಮೆಯೊಂದು ಮಾರಾಟವಾಗಿದೆ. ಈ ಎಮ್ಮೆಗೆ 51 ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿಸಿದ್ದಾರೆಂದರೆ ನಂಬುತ್ತೀರಾ? ಹೌದು ನಂಬಲೇಬೇಕು. ಯಾಕೆಂದರೆ ಈ ಮಾರಾಟ ಹರಿಯಾಣಾದ ಹಿಸ್ಸಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಎಮ್ಮೆಯನ್ನು ಖರೀದಿಸಿರುವವರು ಲೂಧಿಯಾನಾದ ರೈತ ಪವಿತ್ರಸಿಂಗ್.

ಈ ಎಮ್ಮೆಯ ಹೆಸರು ಸರಸ್ವತಿ ಇದ್ದು, ಇದು ಲೂಧಿಯಾನಾದಲ್ಲಿ ನಡೆದ ಡೇರಿ ಮತ್ತು ಅಗ್ರೋ ಎಕ್ಸ್ಪೋ ನಲ್ಲಿ ಜಾಗತಿಕ ದಾಖಲೆಯನ್ನು ಮಾಡಿತ್ತು. ಅಲ್ಲಿ ಈ ಸರಸ್ವತಿ ಎಮ್ಮೆ 33.13 ಲೀಟರ್ ಹಾಲು ಕೊಟ್ಟಿತ್ತು. ಇದರಿಂದ ಈ ಎಮ್ಮೆಯ ಮಾಲೀಕನಿಗೆ 2 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಕೊಟ್ಟಿದ್ದರು.

ಈ ಎಮ್ಮೆಯ ಮಾಲೀಕರಾದ ಸುಖಬೀರ್ ಹೇಳುತ್ತಾರೆ, ಅವರಿಗೆ ಈ ಎಮ್ಮೆಯನ್ನು ಮಾರಾಟ ಮಾಡುವ ವಿಚಾರ ಇರಲಿಲ್ಲ. ಆದರೆ ಇವರಿರುವ ಪರಿಸರದಲ್ಲಿ ಎಮ್ಮೆಗಳ್ಳರು ತುಂಬಾ ಕ್ರಿಯಾಶೀಲರಾಗಿದ್ದಾರೆ ಇದೇ ಭಯದಿಂದಾಗಿ ನಾನು ಸರಸ್ವತಿಯನ್ನು ಮಾರುವ ವಿಚಾರ ಮಾಡಿದೆ.

ಇಲ್ಲಿಯವರೆಗೆ ಎಲ್ಲಕ್ಕೂ ಹೆಚ್ಚು ಹಾಲನ್ನು ಕೊಡುವ ದಾಖಲೆ ಪಾಕಿಸ್ತಾನದ ಹೆಸರಿಗಿತ್ತು. ಆ ದಾಖಲೆಯನ್ನು ಈ ಸರಸ್ವತಿ ಎಮ್ಮೆಯು ಮುರಿಯಿತು. ಅದು 32.050 ಹಾಲನ್ನು ಕೊಟ್ಟಿತ್ತು.

ಸುಖಬೀರ್ ಅವರು ಹೇಳುವ ಪ್ರಕಾರ ನಾಲ್ಕು ವರ್ಷಗಳ ಹಿಂದೆ ಖೋಕಾ ಊರಿನ ಗೋಪಿರಾಮ ಹೆಸರಿನ ರೈತರೊಬ್ಬರಿಂದ 1 ಲಕ್ಷ 30 ಸಾವಿರಕ್ಕೆ ಸರಸ್ವತಿಯನ್ನು ಖರೀದಿಸಿದ್ದರಂತೆ.

ಇನ್ನು ಒಂದು ವಿಶೇಷವೇನೆಂದರೆ, ಸರಸ್ವತಿ ಕೊಟ್ಟ ಒಂದು ಕೋಣವಿದೆ, ಅದರ ಹೆಸರು ನವಾಬ್ ಇದ್ದು ಅದರ ವೀರ್ಯವನ್ನು ಮಾರಿ ವರ್ಷಕ್ಕೆ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಾರಂತೆ ಸುಖಬೀರ್. ಪ್ರಾಣಿ ಶಾಸ್ತ್ರಜ್ಞರು ಸರಸ್ವತಿಯಿಂದ ಕ್ಲೋನ್ ತಯಾರಿಸುವ ವಿಚಾರದಲ್ಲಿದ್ದಾರಂತೆ.
ಈ ಸರಸ್ವತಿಯಿಂದ ಹುಟ್ಟಿದ ಕೋಣದ ಬೆಲೆ 4 ಲಕ್ಷಗಳವರೆಗೆ ಇದೆ.

ಹೀಗೆ ವ್ಯವಸಾಯಗಳು ಯಾವುದು ದೊಡ್ಡದು ಮತ್ತು ಸಣ್ಣದಿಲ್ಲ. ಮಾಡುವ ಕೆಲಸ ಮನಸ್ಸಿನಿಂದ ಮಾಡಿದರೆ ಅದರಲ್ಲಿ ಯಶಸ್ಸು ಲಭಿಸುವದು ಗ್ಯಾರಂಟಿ. ಈ ರೀತಿಯ ಬೇಸಾಯದ ಜೊತೆಗೆ ಮಾಡುವ ವಿವಿಧ