ಇದರಲ್ಲಿ ಒಂದು ಗರಿಯನ್ನು ಆಯ್ಕೆ ಮಾಡಿ, ತಿಳಿದುಕೊಳ್ಳಿ ನಿಮ್ಮ ಜೀವನದ ರೋಚಕ ರಹಸ್ಯವನ್ನ!

ಹಕ್ಕಿಯ ಗರಿಗಳು ಅವುಗಳ ಹಾರಾಟಕ್ಕೆ ಬಹಳ ಅವಶ್ಯಕ. ಪಕ್ಷಿಗಳಿಗೆ ಇದು ಜೀವನವಾದರೆ, ಮನುಷ್ಯನ ಆಲೋಚನೆಗೆ ಇವು ಒಂದು ಹೊಸ ಆಯಾಮವನ್ನು ನೀಡುತ್ತದೆ. ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಕಾರಣದಿಂದ, ಮನೋವಿಜ್ಞಾನದ ಪ್ರಕಾರ, ವ್ಯಕ್ತಿಯೊಬ್ಬನು ಆರಿಸುವ ಹಕ್ಕಿಯ ಗರಿಗಳ ಆಕಾರವನ್ನು ಆಧರಿಸಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು. ಇಂದು ನಾವು ನಿಮಗೆ ಅಂತಹುದೇ ಒಂದು ಪ್ರಯೋಜನಕಾರಿಯಾದ ಅವಕಾಶವನ್ನು ನಿಮ್ಮ ಮುಂದೆ ಇಡುತ್ತಿದ್ದು, ಇಲ್ಲಿ ನೀವು ನಿಮಗೆ ಇಷ್ಟವಾದ ಆಕೃತಿಯ ಗರಿಯನ್ನು ಆರಿಸಿಕೊಳ್ಳಬಹುದು. ಅನಂತರ ಅದರ ಸಹಾಯದಿಂದ ನೀವು ನಿಮ್ಮ ವ್ಯಕ್ತಿತ್ವದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಂಡು, ಅದೆ ಮೂಲಕ ನಿಮ್ಮ ಜೀವನದ ಹಾದಿಯನ್ನು ಕೂಡಾ ಬದಲಾಯಿಸಬಹುದು.

೧. ನಿಮ್ಮ ಆಯ್ಕೆ ಮೊದಲನೆಯ ಗರಿ ಆಗಿದ್ದರೆ, ನೀವು ಬಹಳ ಶಾಂತ ಸ್ವಭಾವದ ದಯಾವಂತನಾಗಿರುವ ವ್ಯಕ್ತಿತ್ವವನ್ನು ಹೊಂದಿರುವಿರಿ. ನೀವು ಜನರನ್ನು ನಿಮ್ಮೊಟ್ಟಿಗೆ ಮುನ್ನಡೆಸಲು ಬಯಸುವಿರಿ. ಎಷ್ಟೇ ಉಗ್ರವಾದ ವಿಷಯವಾದರೂ ಕೂಡಾ ನೀವು ಅದನ್ನು ಜನರ ಹಿತಕ್ಕಾಗಿ, ಶಾಂತಿಯುತವಾಗಿ ಪರಿಹರಿಸಲು ಬಯಸುವಿರಿ. ನೀವು ಕೆಲವು ಸಮಯದಲ್ಲಿ ಅಂತರ್ಮುಖಿ ಎನಿಸಿದರೂ ಕೂಡಾ ಸದಾ ನಿಮ್ಮವರ ಬಗ್ಗೆ ಚಿಂತಿಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿ ಅವರ ನೆರವಿಗೆ ಧಾವಿಸಿ, ಜನರೊಟ್ಟಿಗೆ ಇರುವುದು ಸಹಜ. ನಿಮ್ಮ ಗುಣ ಕೆಲವು ಜನರಿಗೆ ಕೆಲವೊಮ್ಮೆ ಹಿಡಿಸದೇ ಹೋದರೂ ಕೂಡಾ ನಿಮ್ಮ ಹೃದಯ ವೈಶಾಲ್ಯತೆ ದೊಡ್ಡದು.

೨. ನಿಮ್ಮ ಆಯ್ಕೆ ಎರಡನೇ ಗರಿಯಾಗಿದ್ದರೆ, ನೀವು ವಿಷಯಗಳನ್ನು ಬೇಗ ಗ್ರಹಿಸುವ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವಿರಿ. ಹೊಸ ವಿಷಯ ಅಥವಾ ಹೊಸ ಕೆಲಸವೇ ಆಗಿರಲಿ ನಿಮಗೆ ಅದು ಕಠಿಣ ಎನಿಸುವುದಿಲ್ಲ. ಬುದ್ಧಿವಂತಿಕೆ ನಿಮ್ಮಲ್ಲಿ ಇದ್ದರೂ ಕೆಲವೊಂದು ತಪ್ಪುಗಳನ್ನು ಮಾಡುವಿರಿ. ನಿಮ್ಮ ವೈಯಕ್ತಿಕ ಜೀವನವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ಸ್ನೇಹಿತರ ಜೊತೆ ಸಮಯ ಕಳೆಯುವುದು ನಿಮಗೆ ಇಷ್ಟವಾದ ಹವ್ಯಾಸ. ಜನರು ನಿಮ್ಮ ಕಡೆ ಹೆಚ್ಚು ಗಮನ ನೀಡಬೇಕೆಂದು ಬಯಸುವ ನೀವು, ಅವರು ನಿಮಗೆ ಗಮನ ನೀಡುತ್ತಿಲ್ಲವೆಂದರೆ ನೀವು ಅವರಿಂದ ದೂರಾಗಲು ಆರಂಭಿಸುವಿರಿ.

೩. ನಿಮ್ಮ ಆಯ್ಕೆ ಮೂರನೇ ಗರಿಯಾಗಿದ್ದಲ್ಲಿ, ನೀವು ಬಹಳ ಸ್ವಾವಲಂಬಿ ವ್ಯಕ್ತಿ. ಸಣ್ಣ ಸಣ್ಣ ಅಗತ್ಯಗಳಿಗಾಗಿ ಕೂಡಾ ನೀವು ಯಾರನ್ನೂ ಅವಲಂಬಿಸುವುದಿಲ್ಲ. ಜೀವನದಲ್ಲಿ ಸೋಲು ಒಪ್ಪುವ ಗುಣ ನಿಮ್ಮದಲ್ಲ. ಸೋಲಿನಿಂದ ನೀವು ನಿರಾಶರಾಗುವುದೂ ಇಲ್ಲ. ಬದಲಾಗಿ ಸೋಲು ಮನಸ್ಸನ್ನು ಇನ್ನಷ್ಟು ಸದೃಢ ಮತ್ತು ಇನ್ನಷ್ಟು ಬುದ್ಧಿವಂತನನ್ನಾಗಿ ಮಾಡುತ್ತದೆ ಎಂದು ನಂಬುವ ನೀವು ಉತ್ತಮ ನಾಯಕನಾಗುವ ಗುಣವನ್ನು ಹೊಂದಿರುವಿರಿ.

೪. ನಾಲ್ಕನೇ ಗರಿ ನಿಮ್ಮನ್ನು ಆಕರ್ಷಿಸಿದರೆ, ನೀವೊಬ್ಬ ಉಚ್ಚ ವಿಚಾರಗಳ ಆದರೆ ರಹಸ್ಯಮಯ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯಾಗಿರುವಿರಿ. ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಮಿಸ್ಟರ್ ಪರ್ಫೆಕ್ಟ್ ಎನ್ನುವ ಗುಣದವರು. ನಿಮ್ಮ ವ್ಯಕ್ತಿತ್ವ ಎಷ್ಟು ಶೋಭಾಯಮಾನ ಎಂದರೆ ಜನರು ನಿಮ್ಮನ್ನು ಗಮನಿಸದೇ ಇರಲು ಸಾಧ್ಯವೇ ಇಲ್ಲ. ಆದರೆ ಇದೇ ಗುಣ ಅಂದರೆ ಎಲ್ಲಾ ಕೂಡಾ ಸರಿಯಾಗಿ ಇರಬೇಕೆಂದು ಬಯಸುವ ಗುಣವೇ ನಿಮಗೆ ಕೆಲವು ಸಲ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನಿಮ್ಮ ವ್ಯಕ್ತಿತ್ವ ನಿಮಗೆ ಕೆಲವೊಮ್ಮೆ ನೆಗೆಟಿವ್ ಆಗುವುದು ಸಹಜ.

೫. ನಿಮ್ಮ ಆಯ್ಕೆ ಐದನೇ ಗರಿಯಾದರೆ, ನೀವೊಬ್ಬ ಬಹಳ ಸೃಜನಶೀಲ ವ್ಯಕ್ತಿಯಾಗಿರುವಿರಿ. ನಿಮ್ಮ ಸೃಜನಶೀಲತೆ ಮತ್ತು ಕಲ್ಪನೆಯ ಶಕ್ತಿಯು ನಿಮ್ಮ ದೌರ್ಬಲ್ಯ ಕೂಡಾ ಆಗಿದೆ. ಅಲ್ಲದೇ ನಿಮಗೆ ನಿಮ್ಮ ಸಾಮರ್ಥ್ಯಗಳ ಮೇಲೆ ಸ್ವಯಂ ನಂಬಿಕೆಯಿಲ್ಲ.‌ ಆದ್ದರಿಂದಲೇ ನೀವು ಸಾಕಷ್ಟು ಬುದ್ಧಿವಂತರೂ ಹಾಗೂ ಪ್ರತಿಭಾನ್ವಿತರಾಗಿದ್ದರೂ ಕೂಡಾ, ಸಾಲು ಸಾಲು ವೈಫಲ್ಯವನ್ನು ಕಾಣುತ್ತಿರುವಿರಿ.