‘ದಾರು ಬದ್ನಾಮ್’ ಹಾಡಿಗೆ ಫುಲ್ ಎನರ್ಜಿಟಿಕ್ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಶ್ರೀ; ‘ಆಸಮ್’ ಎಂದ ಫ್ಯಾನ್ಸ್! ನೋಡಿ ವಿಡಿಯೋ!

ಟೀಂ ಇಂಡಿಯಾದ ಯುವ ಲೆಗ್ ಸ್ಪಿನ್ನರ್ ಯಜವೇಂದ್ರ ಚಹಲ್ ಅವರ ಭಾವೀ ಪತ್ನಿ ಧನಾಶ್ರೀ ವರ್ಮಾ ಇಂಟರ್ನೆಟ್ ನಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ. ಸಂಚಲನ ಎಂದರೆ ಇಲ್ಲಿ ಯಾವುದೇ ವಿವಾದಾತ್ಮಕ ಹೇಳಿಕೆಯೋ, ಅಥವಾ ಇನ್ನೇನೋ ನಡೆದಿದೆ ಎಂದಲ್ಲ. ಧನಾಶ್ರೀ ಅವರು ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ತಾನು ಡಾನ್ಸ್ ಮಾಡಿರುವ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅವರ ಭರ್ಜರಿ ಡಾನ್ಸ್ ವೀಡಿಯೋ ಈಗ ಸಖತ್ ಸದ್ದು ಮಾಡುವ ಮೂಲಕ ಅಭಿಮಾನಿಗಳನ್ನು ಕೂಡಾ ಅವರ ಜೊತೆಗೆ ಹೆಜ್ಜೆ ಹಾಕುವಂತೆ ಅವರ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಧನಾಶ್ರೀ ಅವರ ಈ ಜೋಶ್ ಫುಲ್ ಹಾಗೂ ಎನರ್ಜಿಟಿಕ್ ಡಾನ್ಸ್ ಎಂದರೆ ತಪ್ಪಾಗಲಾರದು.

ಧನಾಶ್ರೀ ಅವರು ಸೂಪರ್ ಡೂಪರ್ ಎನಿಸುವ ನೃತ್ಯ ಮಾಡಿರುವುದು ಒಂದು ಪಂಜಾಬಿ ಹಾಡಿಗೆ. ದಾರು ಬದ್ನಾಮ್ ಕರ್ದಿ ಎನ್ನುವ ಹಾಡಿಗೆ ಆಕೆ ಹಾಕಿರುವ ಸ್ಟೆಪ್ ಗಳು ಇದೀಗ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದರೆ ಹಾಗೂ ಡಾನ್ಸ್ ಪ್ರಿಯರ ಅಪಾರ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಈ ಪಂಜಾಬಿ ಹಾಡು ಪ್ರತೀಕ್ ಸ್ಟುಡಿಯೋ ದ ಸೂಪರ್ ಹಿಟ್ ಹಾಡಾಗಿದ್ದು, ಈ ಹಾಡಿನ ಸಾಹಿತ್ಯವನ್ನು ಬರೆದವರು ಗೈಗ್ ಇ ಮತ್ತು ಮಜಿಂದರ್ ಮಾನ್ ಎನ್ನುವ ಸುಪ್ರಸಿದ್ಧ ಪಂಜಾಬಿ ಗೀತರಚನೆಕಾರರು. ಹಾಡಿನಲ್ಲಿ ಜಬರ್ದಸ್ತ್ ಡಾನ್ಸ್ ಇದ್ದು, ಈಗ ಧನಾಶ್ರೀ ಕೂಡಾ ಅದ್ಭುತವಾದ ಡಾನ್ಸ್ ಸ್ಟೆಪ್ ಗಳನ್ನು ಈ ಹಾಡಿಗೆ ಹಾಕಿದ್ದಾರೆ.

ಧನಾಶ್ರೀ ವೃತ್ತಿಯಿಂದ ವೈದ್ಯರಾಗಿದ್ದು, ಆಕೆ ಬಹುಮುಖ ಪ್ರತಿಭೆಗೆ ಒಂದು ಉದಾಹರಣೆ ಕೂಡಾ ಆಗಿದ್ದಾರೆ. ಅವರು ಯೂಟ್ಯೂಬರ್ ಮತ್ತು ಕೊರಿಯೋಗ್ರಫಿ ಕೂಡಾ ಮಾಡುವುದರಲ್ಲಿ ಕೂಡಾ ನಿಪುಣೆಯಾಗಿದ್ದಾರೆ. ತನ್ನ ಈ ಡಾನ್ಸ್ ವೀಡಿಯೋವನ್ನು ಅವರು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿ, ಇದು ನನ್ನ ಪರ್ಸನಲ್ ಫೇವರಿಟ್, ಈ ಥ್ರೋ ಬ್ಯಾಕ್ ವೀಡಿಯೋವನ್ನು ಶೇರ್ ಮಾಡಿಕೊಳ್ಳಲು ಬಹಳಷ್ಟು ಕಾಯುತ್ತಿದ್ದೆ ಎಂದು ಆಕೆ ಬರೆದುಕೊಂಡಿದ್ದಾರೆ. ಆಕೆ ಶೇರ್ ಮಾಡಿದ ವೀಡಿಯೋವನ್ನು ಈಗಾಗಲೇ ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, ಸುಮಾರು 2,300 ಕ್ಕಿಂತ ಅಧಿಕ ಜನ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ನೋಡಿ….

ಕೆಲವೇ ದಿನಗಳ ಹಿಂದೆ ಕ್ರಿಕೆಟಿಗ ಯಜುವೇಂದ್ರ ಅವರು ಧನಾಶ್ರೀ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ನಿಶ್ಚಿತಾರ್ಥದ ಸುದ್ದಿ ಕೇಳಿ ಅಭಿಮಾನಿಗಳು ಕೂಡಾ ಶಾಕ್ ಆಗಿದ್ದರು. ಧನಾಶ್ರೀ ಇತ್ತೀಚೆಗೆ ಡಾನ್ಸ್ ನ ಆನ್ಲೈನ್ ತರಗತಿಗಳನ್ನು ಕೂಡಾ ನಡೆಸುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಕೂಡಾ ಆಕೆ ಸಾಕಷ್ಟು ಹೆಸರು ಮಾಡಿದ್ದು, ಆಕೆಯ ವೀಡಿಯೋಗಳು ಬಂದರೆ ಅದಕ್ಕೆ ಹತ್ತು ಲಕ್ಷಕ್ಕಿಂತ ಅಧಿಕ ವೀಕ್ಷಣೆಗಳು ಸಿಗುವುದು ಆಕೆಯ ಜನಪ್ರಿಯತೆ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ.‌