ಡ್ರೋನ್ ಮೇಲೆ ಹಲ್ಲೆ ಮಾಡಿದ ಹದ್ದು; 74,000 ರೂಪಾಯಿ ಮೌಲ್ಯದ ಡ್ರೋನ್ ಮಟ್ಯಾಷ್!
ಕಾಲ ಬದಲಾದಂತೆ, ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ಜನ ಜೀವನವು ಮೊದಲಿಗಿಂತ ಆಕರ್ಷಣೀಯ ಎನಿಸಿದೆ. ಜನರ ರುಚಿ ಅಭಿರುಚಿಯಲ್ಲಿ ಕೂಡಾ ಅನೇಕಾನೇಕ ಬದಲಾವಣೆಗಳು ನಮಗೆ ಗೋಚರಿಸುತ್ತಿವೆ. ಆಧುನಿಕತೆ ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಕೂಡಾ ಹಾಸುಹೊಕ್ಕಾಗುತ್ತಿದೆ. ಅಂತಹುದರಲ್ಲಿ ಒಂದು ಕ್ರೇಜ್ ಎಂದರೆ ಡ್ರೋಣ್ ವೀಡಿಯೋಗಳು. ಇತ್ತೀಚಿನ ದಿನಗಳಲ್ಲಿ ಡ್ರೋಣ್ ಗಳ ಸಹಾಯದಿಂದ ಚಿತ್ರೀಕರಣ ಮಾಡಲಾಗುವ ವೀಡಿಯೋ ತುಣುಕುಗಳನ್ನು ವೀಕ್ಷಣೆ ಮಾಡುವುದು ಕೂಡಾ ಒಂದು ವ್ಯಾಮೋಹವೇ ಆಗಿ ಹೋಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಇಂತಹ ವೀಡಿಯೋಗಳು ಭರ್ಜರಿ ವೈರಲ್ ಆಗಿ, ನೆಟ್ಟಿಗರ ಮನಸ್ಸಿಗೆ ಮುದವನ್ನು ನೀಡುತ್ತಿವೆ.

ಯೂಟ್ಯೂಬರ್ಗಳು ಕೂಡಾ ಡ್ರೋನ್ಗಳನ್ನು ಬಳಸಿ ತಮ್ಮ ವೀಡಿಯೋ ಗಳಿಗೆ ಮತ್ತಷ್ಟು ಆಕರ್ಷಣೆಯನ್ನು ಸೇರಿಸುತ್ತಿದ್ದಾರೆ. ಡ್ರೋಣ್ ಮೂಲಕ ಆಕಾಶದಿಂದ ವೀಡಿಯೋ ಮಾಡಿರುವ ದೃಶ್ಯಗಳು ಅದ್ಭುತವಾದ ಅನುಭವವನ್ನು ನೀಡುತ್ತದೆ. ಹೀಗೆ ಒಂದು ವಿಡಿಯೋವನ್ನು ಮಾಡುವ ಸಲುವಾಗಿ, ಆಗಸಕ್ಕೆ ಡ್ರೋಣ್ ಒಂದನ್ನು ಹಾರಿಸಿದ್ದಾರೆ. ಆಗ ಅನಿರೀಕ್ಷಿತ ಎಂಬಂತೆ, ಆಗಸದಲ್ಲಿ ಹಾರಿ ಬಂದ ಬಾಲ್ಡ್ ಈಗಲ್ ಹದ್ದಿನ ಜಾತಿಯ ಹಕ್ಕಿಯೊಂದು ಡ್ರೋಣ್ ಮೇಲೆ ಧಾಳಿಯನ್ನು ಮಾಡಿದೆ. ಈ ಘಟನೆ ಯುಎಸ್ಎ ನಲ್ಲಿ ನಡೆದಿದ್ದು, ಬಾಲ್ಡ್ ಈಗಲ್ ಅಲ್ಲಿನ ರಾಷ್ಟ್ರೀಯ ಪಕ್ಷಿ ಎಂಬುದು ಕೂಡಾ ವಿಶೇಷ.

ಹದ್ದು ಹಾಳು ಮಾಡಿದ ಡ್ರೋನ್ ಸರ್ಕಾರದ್ದು ಎನ್ನಲಾಗಿದ್ದು, ಡ್ರೋನ್ ಪೈಲಟ್ ಹಂಟರ್ ಕಿಂಗ್ ಡ್ರೋನ್ ಅನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಆ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರ ಗುಣಮಟ್ಟವನ್ನು ಪರಿಶೀಲಿಸುವ ಸಲುವಾಗಿ ಡ್ರೋಣ್ ಅನ್ನು ಹಾರಿ ಬಿಡಲಾಗಿತ್ತು. ಡ್ರೋನ್ ಆಕಾಶದಲ್ಲಿ 162 ಅಡಿ ಮೇಲೆ ಹಾರುತ್ತಿತ್ತು. ಹೀಗೆ ಹಾರುತ್ತಿದ್ದ ಡ್ರೋಣ್ ಮೇಲೆ ಹಾರುತ್ತಿದ್ದ ಹದ್ದು ಒಂದು ಅದರ ಮೇಲೆ ಹಲ್ಲೆ ನಡೆಸಿದೆ. ಸರ್ಕಾರಿ ಡ್ರೋಣ್ ಆದ ಇದು ಬಹಳ ದುಬಾರಿ ಬೆಲೆಯ ಡ್ರೋಣ್ ಎನ್ನಲಾಗಿದೆ. ಹದ್ದಿನ ಧಾಳಿಯನ್ನು ಯಾರೊಬ್ಬರೂ ಕೂಡಾ ಊಹೆ ಮಾಡಿರಲಿಲ್ಲ.
ವಿಡಿಯೋ ನೋಡಿ….
Drone attacked by eagle pic.twitter.com/fzwCJc0d1L
— Crazy Panda (@CrazyPa50956318) August 22, 2020
ಈ ದುಬಾರಿ ಡ್ರೋಣ್ ನ ಬೆಲೆ ಸುಮಾರು 995 ಡಾಲರ್ ಗಳು, ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ 74,000 ರೂಪಾಯಿಗಳು ಎನ್ನಲಾಗಿದೆ. ಕಿಂಗ್ ಡ್ರೋನ್ ಹಾರಿದ ಏಳು ನಿಮಿಷಗಳ ನಂತರ ಹದ್ದಿನ ಧಾಳಿ ನಡೆದಿದೆ. ಹದ್ದು ಮಾಡಿದ ತೀವ್ರವಾದ ಧಾಳಿಗೆ ಡ್ರೋನ್ ಹಾಳಾಗಿ ನಿಯಂತ್ರಣ ತಪ್ಪಿ, ಸುಮಾರು 3.5 ಸೆಕೆಂಡುಗಳಲ್ಲಿ ನೀರಿನಲ್ಲಿ ಬಿದ್ದಿದೆ. ಈ ಹದ್ದು ಬಹುಶಃ ಡ್ರೋನ್ ಅನ್ನು ತನ್ನ ಬೇಟೆಯೆಂದು ತಿಳಿದು ಅದನ್ನು ಹಿಡಿಯಲು ಅದರ ಮೇಲೆ ಧಾಳಿ ನಡೆಸಿರಬಹುದು ಎನ್ನಲಾಗಿದೆ. ಆ ಪರಿಸರದಲ್ಲಿ ನೆರೆದಿದ್ದ ಜನರು ಹದ್ದು ಡ್ರೋನ್ ಮೇಲೆ ನಡೆಸಿದ ಧಾಳಿಯನ್ನು ನೋಡಿದ್ದಾರೆ.