IAS ಇಂಟರ್ವ್ಯೂನ ಈ ಪ್ರಶ್ನೆಗಳನ್ನು ಕೇಳಿದರೆ ತಲೆ ಸುತ್ತುತ್ತೆ! ‘ಈ’ 8 ಪ್ರಶ್ನೆಗಳಿಗೆ ನಿಮಗೆ ಉತ್ತರಿಸಲು ಸಾಧ್ಯವೇ ಒಮ್ಮೆ ನೋಡಿ!
ಇತ್ತೀಚಿನ ವರ್ಷಗಳಲ್ಲಿ ದೇಶದ ಯುವಜನರಲ್ಲಿ ಅನೇಕರು ತಾವು ಚೆನ್ನಾಗಿ ಓದಿ, ಒಳ್ಳೆಯ ವಿದ್ಯಾಭ್ಯಾಸ ಪಡೆದು ಐಎಎಸ್ ಅಧಿಕಾರಿಗಳಾಗಬೇಕೆಂಬ ಕನಸನ್ನು ಹೊಂದಿರುತ್ತಾರೆ. ಅದಕ್ಕಾಗಿ ಅವರು ಪಡುವ ಶ್ರಮ ಕೂಡಾ ಕಡಿಮೆಯೇನಿಲ್ಲ. ಐಎಎಸ್ ಅಧಿಕಾರಿಯಾಗುವುದು ಸುಲಭದ ಮಾತಂತೂ ಅಲ್ಲ. ಕಠಿಣ ಶ್ರಮ ಪಡದೇ ಉಡಾಫೆಯಾಗಿ ಐಎಎಸ್ ಮಾಡುವೆ ಎನ್ನುವುದಾದರೆ ಅದು ಖಂಡಿತ ಅಸಾಧ್ಯ. ಐಎಎಸ್ ಅಧಿಕಾರಿಯಾಗಲು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿರುತ್ತದೆ. ದೇಶದ ಅತಿ ಕಠಿಣವಾದ ಪರೀಕ್ಷೆ ಎಂದರೆ ಅದು ಯು ಪಿ ಎಸ್ ಸಿ ಎಂದು ಕೂಡಾ ಹೇಳಲಾಗುತ್ತದೆ.
ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಪಾಸಾಗುವುದು ಎಷ್ಟು ಕಠಿಣವೋ, ಅನಂತರ ನಡೆಯುವ ಸಂದರ್ಶನವು ಅದಕ್ಕಿಂತ ಕಠಿಣ ಎನ್ನಲಾಗುತ್ತದೆ. ಐಎಎಸ್ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳನ್ನು ಕೇಳುತ್ತಾ ಬೆವರಿಳಿಯಲು ಆರಂಭವಾಗುತ್ತೆ ಅಂದರೆ ನಂಬಿ. ಏಕೆಂದರೆ ಪ್ರಶ್ನೆಗಳು ಆ ಮಟ್ಟಕ್ಕೆ ಕಠಿಣವಾಗಿರುತ್ತದೆ. ಕೆಲವು ಬಾರಿಯಂತೂ ಸಂದರ್ಶನ ದಲ್ಲಿ ಕೇಳುವ ಪ್ರಶ್ನೆಗಳ ಉತ್ತರವೇನೋ ಸುಲಭ ಎನಿಸುತ್ತದೆ, ಆದರೆ ಅಭ್ಯರ್ಥಿಗಳು ಅದಕ್ಕೆ ಉತ್ತರ ಹೇಳಲಾಗದೆ ತಮ್ಮ ಮುಖ ಮುಚ್ಚಿಕೊಂಡು ಬಿಡುತ್ತಾರೆ. ಏಕೆಂದರೆ ಈ ಪ್ರಶ್ನೆಗಳು ಬುದ್ಧಿ ಮತ್ತೆಗೆ ಸಾಣೆ ಹಿಡಿಯುವಂತೆ ಇದ್ದು ತಲೆ ಕೂಡಾ ಸುತ್ತುವಂತೆ ಮಾಡಿಬಿಡುತ್ತದೆ. ಆದರೆ ಬುದ್ಧಿವಂತರು ಮಾತ್ರ ಆಟದಂತೆ ಸ್ವೀಕರಿಸಿ ಉತ್ತರಿಸುವುದೂ ಹೌದು. ಹಾಗಾದರೆ ಬನ್ನಿ ನಾವಿಂದು ಅಂತಹ ಕೆಲವು ಪ್ರಶ್ನೆಗಳ ಬಗ್ಗೆ ತಿಳಿಯೋಣ.

ಪ್ರಶ್ನೆ: ನಿಮಗೆ ಇಂಗ್ಲೀಷ್ ಬರದೇ ಹೋದರೆ ಹೇಗೆ ಆಡಳಿತವನ್ನು ನಿಭಾಗಿಸುವಿರಿ? ಈ ಪ್ರಶ್ನೆ ಕೇಳಿದ ಉದ್ದೇಶ ಅಭ್ಯರ್ಥಿಯ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವುದಾಗಿತ್ತು. ಪ್ರಶ್ನೆ ಕೇಳಿದ ನಂತರ ಸಂದರ್ಶಕರು ಅಭ್ಯರ್ಥಿಗೆ ನೀರು ಕುಡಿಯಲು ಹೇಳಿದ್ದಾರೆ. ಆಗ ಅಭ್ಯರ್ಥಿ ಬೇಡ ನಾನು ಸ್ಟೀಲ್ ಗ್ಲಾಸ್ ನಲ್ಲಿ ನೀರು ಕುಡಿಯುತ್ತೇನೆ, ಇಲ್ಲಿರುವುದು ಗಾಜಿನ ಲೋಟ ನನಗೆ ಬೇಡ ಎಂದಿದ್ದಾರೆ. ಆಗ ಸಂದರ್ಶಕ ನಿಮಗೆ ಏನು ಮೂರ್ಖನಂತೆ ಮಾತಾಡ್ತಾ ಇದ್ದೀರಿ ಎಂದಾಗ, ಅಭ್ಯರ್ಥಿ ಇಲ್ಲ ಸರ್ ನಾನು ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟೆ. ಇಲ್ಲಿ ನೀರು ಮುಖ್ಯವೇ ಹೊರತು ಕುಡಿಯುವ ಗ್ಲಾಸ್ ಅಲ್ಲ. ಅದರಂತೆ ವ್ಯಕ್ತಿಗೆ ಕೆಲಸ ಮಾಡಲು ಕೌಶಲ್ಯ ಇರಬೇಕೇ ಹೊರತು ಇಂಗ್ಲೀಷ್ ಜ್ಞಾನವಲ್ಲ ಎಂದರಂತೆ.
ಪ್ರಶ್ನೆ: ಹುಡುಗಿಯರ ಅಂಗಿಯಲ್ಲಿ ಜೇಬು ಏಕೆ ಇರುವುದಿಲ್ಲ? ಇದಕ್ಕೆ ಉತ್ತರ ನಮ್ಮಲ್ಲೇ ಅನೇಕರಿಗೆ ಗೊತ್ತಿಲ್ಲ. ಇದಕ್ಕೆ ಸರಿಯಾದ ಉತ್ತರ ಹುಡುಗಿಯರ ಅಂಗಿಗೆ ಜೇಬು ಇಟ್ಟರೆ ಅಂಗಿಯ ಅಂದ ಕೆಡುತ್ತದೆ ಎಂಬ ಕಾರಣಕ್ಕೆ ಅದಕ್ಕೆ ಜೇಬನ್ನು ಇಡಲಾಗುವುದಿಲ್ಲ ಎಂಬುದು.
ಪ್ರಶ್ನೆ: ಯಾವ ವಸ್ತುವನ್ನು ಧರಿಸುವ ವ್ಯಕ್ತಿ ಕೊಳ್ಳುವುದಿಲ್ಲ, ಹಾಗೂ ಅದನ್ನು ತನಗಾಗಿ ಖರೀದಿಸಲಾಗುವುದಿಲ್ಲ? ಈ ಪ್ರಶ್ನೆ ಕೇಳಿದಾಗ ಮನಸ್ಸಲ್ಲಿ ನೂರಾರು ಆಲೋಚನೆಗಳು ಬರುತ್ತವೆ. ಆದರೆ ಸಾವಧಾನವಾಗಿ ಯೋಚಿಸಿದರೆ ಅದು ತಿಳಿಯುತ್ತದೆ. ಈ ಪ್ರಶ್ನೆಗೆ ಉತ್ತರ ಶವದ ಮೇಲೆ ಮುಚ್ಚುವ ವಸ್ತ್ರ.

ಪ್ರಶ್ನೆ: ಯಾವುದು ಒಂದು ತಿಂಗಳಿನಲ್ಲಿ ಒಂದು ಸಲ ಮಾತ್ರ ಬರುತ್ತದೆ, 24 ಗಂಟೆಗಳ ಕಾಲ ನಮ್ಮ ಜೊತೆಯಲ್ಲೇ ಇರುತ್ತದೆ. ಅನಂತರ ನಮ್ಮಿಂದ ದೂರಾಗುತ್ತದೆ? ಈ ಪ್ರಶ್ನೆಯ ಉತ್ತರ ದಿನಾಂಕ. ಇಂದಿನ ದಿನಾಂಕ ನಾಳೆಗೆ ಬದಲಾಗಿರುತ್ತದೆ.
ಪ್ರಶ್ನೆ: ಅರ್ಧ ಸೇಬಿನಂತೆ ಕಾಣುವ ಇನ್ನೊಂದು ವಸ್ತು ಯಾವುದು? ಇತ್ತೀಚಿನ ದಿನಗಳಲ್ಲಿ ಈ ಪ್ರಶ್ನೆ ಸಾಕಷ್ಟು ಜನಪ್ರಿಯವಾಗಿದೆ. ಮೊದಲಾದರೆ ತಟ್ಟನೆ ಹೊಳೆಯುತ್ತಿರಲಿಲ್ಲ. ಆದರೆ ಇದರ ಉತ್ತರ ಬಹಳ ಸುಲಭ, ಅರ್ಧ ಸೇಬಿನ ಹಾಗೆ ಕಾಣುವುದು ಇನ್ನರ್ಧ ಸೇಬು.
ಪ್ರಶ್ನೆ: ಒಬ್ಬ ಹುಡುಗ, ಒಬ್ಬ ಹುಡುಗಿಗೆ ಪ್ರಪೋಜ್ ಮಾಡುವುದು ಅಪರಾಧವೇ?
ಉತ್ತರ: ಐಪಿಸಿಯ ಯಾವುದೇ ವಿಭಾಗದಲ್ಲಿ ಕೂಡಾ ಇದನ್ನು ಅಪರಾಧ ಎಂದು ವರ್ಗೀಕರಿಸಲಾಗಿಲ್ಲ, ಆದ್ದರಿಂದ ಹುಡುಗ ಹುಡುಗಿಗೆ ಪ್ರಸ್ತಾಪಿಸಿದರೆ ಅದು ಅಪರಾಧವಲ್ಲ.
ಪ್ರಶ್ನೆ: ಬಿಸಿ ಮಾಡಿದರೆ ಗಟ್ಟಿಯಾಗುವ ವಸ್ತು ಯಾವುದು?
ಉತ್ತರ: ಮೊಟ್ಟೆ.
ಪ್ರಶ್ನೆ: ಸಿಗರೇಟನ್ನು ಹಿಂದಿಯಲ್ಲಿ ಏನೆಂದು ಕರೆಯುವರು?
ಉತ್ತರ: ಧೂಮ್ರಪಾನ ದಂಡಿಕಾ.