ನರ್ಸ್ ಉಡುಗೆಯಲ್ಲಿ ‘ಯೇ ಲಡಕಿ ಪಾಗಲ್ ಹೈ’ ಹಾಡಿಗೆ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಶ್ರೀ! Video ನೋಡಿ!

ಭಾರತೀಯ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ಅವರು ಕೆಲವೇ ದಿನಗಳ ಹಿಂದೆ ಜನಪ್ರಿಯ ಯೂಟ್ಯೂಬರ್ ಮತ್ತು ಡಾನ್ಸರ್ ಕೂಡಾ ಆಗಿರುವ ಧನಾಶ್ರೀ ವರ್ಮ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಾಶ್ರೀ ವರ್ಮಾ ವೃತ್ತಿಪರವಾಗಿ ಡಾಕ್ಟರ್ ಆಗಿದ್ದರೂ ಕೂಡಾ ಡಾನ್ಸರ್ ಆಗಿ ಅವರು ತನ್ನದೇ ಆದ ಹೆಸರನ್ನು ಮಾಡಿರುವುದೇ ಅಲ್ಲದೇ ಸಾಕಷ್ಟು ಜನಪ್ರಿಯತೆಯನ್ನು ಕೂಡಾ ಪಡೆದುಕೊಂಡಿದ್ದಾರೆ. ಧನಾಶ್ರೀ ಮತ್ತು ಯಜುವೇಂದ್ರ ಅವರ ನಿಶ್ಚಿತಾರ್ಥದ ನಂತರ ಅವರ ಫೋಟೋ ವೈರಲ್ ಆದ ಮೇಲಂತೂ, ಪ್ರತಿದಿನ ಧನಾಶ್ರೀ ಅವರ ಒಂದಲ್ಲಾ ಒಂದು ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇವೆ.

ಕಳೆದ ಕೆಲವು ದಿನಗಳಿಂದ ಧನಾಶ್ರೀ ಅವರ ಒಂದು ವಿಡಿಯೋ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಸಂಚಲವನ್ನು ಮೂಡಿಸುತ್ತಿದೆ. ಈ ವೀಡಿಯೊದಲ್ಲಿ, ಧನಾಶ್ರೀ ರಾಪರ್ ಬಾದ್‌ಶಾ ಅವರ ಹಾಡಾದ ‘ಯೆ ಗರ್ಲ್ ಪಾಗಲ್ ಹೈ’ ಹಾಡಿನಲ್ಲಿ ಅದ್ಭುತವಾದ ಸ್ಟೆಪ್ ಗಳನ್ನು ಹಾಕಿರುವುದನ್ನು ನಾವು ನೋಡಬಹುದು. ವೈರಲ್ ಆಗಿರುವ ಈ ವೀಡಿಯೋದ ವಿಶೇಷತೆ ಏನೆಂದರೆ ಧನಾಶ್ರೀ ಅವರ ಲುಕ್ಸ್, ಧನಾಶ್ರೀ ಈ ಹಾಡಿನಲ್ಲಿ ನರ್ಸ್ ಉಡುಗೆಯಲ್ಲಿ ಡಾನ್ಸ್ ಮಾಡುವುದನ್ನು ನಾವು ನೀಡಬಹುದು. ಏ ಲಡಕೀ ಪಾಗಲ್ ಹೈ ಹಾಡಿಗೆ ತಕ್ಕಂತೆ ಧನಾಶ್ರೀ ಡಾನ್ಸ್ ಮಾಡಿ ನೋಡುಗನ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.‌

ವಿಡಿಯೋ ನೋಡಿ

ಯಜುವೇಂದ್ರ ಚಾಹಲ್ ಅವರ ಭಾವೀ ಪತ್ನಿ ತನ್ನ ಇತಹ ಅತ್ಯುತ್ತಮ ನೃತ್ಯ ಸಂಯೋಜನೆ ಮತ್ತು ಸೂಪರ್ ಕೊರಿಯೋಗ್ರಫಿ ಇಂದಾಗಿಯೇ ಇತ್ತೀಚಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎಂಬುದಕ್ಕೆ ವೀಡಿಯೋಗಳಿಗೆ ಸಿಗುತ್ತಿರುವ ಭರ್ಜರಿ ವೀವ್ಸ್ ಮತ್ತು ಕಾಮೆಂಟ್ ಗಳೇ ಸಾಕ್ಷಿಯಾಗಿವೆ. ಈ ವೀಡಿಯೋವನ್ನು ಹಂಚಿಕೊಂಡಿರುವ ಧನಾಶ್ರೀ ಅವರು ಅದರ ಜೊತೆಗೆ ಕೆಲವು ಸಾಲುಗಳನ್ನು ಕೂಡಾ ಬರೆದುಕೊಂಡಿದ್ದಾರೆ. ಆಕೆ ಈ ವೀಡಿಯೊವನ್ನು ಕುರಿತಾಗಿ, “ನಿಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ ಮತ್ತು ನೀವು ಈ ನೃತ್ಯ ಸಂಯೋಜನೆಯನ್ನು ಹೇಗೆ ಇಷ್ಟಪಟ್ಟಿದ್ದೀರಿ ಎಂದು ನಮಗೆ ತಿಳಿಸಿ” ಎಂದು ವೀಕ್ಷಕರನ್ನು ಕೇಳಿದ್ದಾರೆ.

ಅಲ್ಲದೇ ಆಕೆ ಈಗ ಶೇರ್ ಮಾಡಿರುವ ಈ ವೀಡಿಯೊ ಹಳೆಯದು ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಆದರೆ ಈ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಮತ್ತು ಜನರು ಸಹ ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಧನಾಶ್ರೀ ಶೇರ್ ಮಾಡಿರುವ ಈ ವೀಡಿಯೊವನ್ನು ಇದುವರೆಗೆ 1 ಲಕ್ಷ 69 ಸಾವಿರಕ್ಕೂ ಹೆಚ್ಚು ವೀವ್ಸ್ ಗಳು ದಕ್ಕಿವೆ‌ ಮತ್ತು ಅದರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಮತ್ತು ಅದೇ ಮಟ್ಟದಲ್ಲಿ ಲೈಕ್‌ಗಳನ್ನು ಕೂಡಾ ಪಡೆಯುತ್ತಿದೆ.‌