OMG! ಈ ಶೂಜ್ ಮಾರಾಟವಾಗಿದ್ದು ಬರೋಬ್ಬರಿ 6 ಕೋಟಿ 80 ಲಕ್ಷ ರೂಪಾಯಿಗೆ! ಏನಿದರ ವಿಶೇಷತೆ ಅಂತೀರಾ? ಹಾಗಾದರೆ ಇದನ್ನೊಮ್ಮೆ ಓದಿ
ವ್ಯಕ್ತಿ ಸೆಲಿಬ್ರಿಟಿಯಾದರೆ ಮುಗೀತು. ಅವರು ಮುಟ್ಟಿದ್ದೆಲ್ಲ ಚಿನ್ನವೇ. ಯಾಕೆಂದರೆ ಅವರ ಫ್ಯಾನ್ಸ್ ಫಾಲೋಯಿಂಗ್ ಹಾಗೆ ಇರುತ್ತದೆ. ಇದರಿಂದ ಅವರು ಮುಟ್ಟಿದ್ದ ವಸ್ತುಗಳು, ಅವರು ತೊಟ್ಟ ವಸ್ತುಗಳು, ಅವರು ಉಪಯೋಗಿಸಿದ ವಸ್ತುಗಳು ಹರಾಜು ಮಾಡಿದರೆ ಆ ವಸ್ತುಗಳು ಬಾನೆತ್ತರದ ಬೆಲೆಗೆ ಮಾರಾಟವಾಗುತ್ತವೆ.
ಈಗ ನಿಮ್ಮ ಮುಂದೆ ಇಂಥದ್ದೇ ಒಂದು ಉದಾಹರಣೆಯನ್ನು ಹೇಳಲಿದ್ದೇವೆ. ಅದನ್ನು ಕೇಳಿ ನಿಜಕ್ಕೂ ಬೆಚ್ಚಿ ಬೀಳುವಂತಾಗಿದೆ. ಯಾಕೆಂದರೆ, ಇಲ್ಲಿ ಹಳೆಯ ಬೂಟುಗಳು ಲಕ್ಷದಲ್ಲಿ ಅಲ್ಲ ಕೋಟಿಯಲ್ಲಿ ಮಾರಾಟವಾಗಿವೆ ಎಂದರೆ ಯಾರಿಗೂ ವಿಶ್ವಾಸವೇ ಕೂಡುತ್ತಿಲ್ಲ, ಅಲ್ವಾ?
ಹೌದು ಇದು ನಿಜ, ಮೈಕಲ್ ಜಾರ್ಡನ್ ಬಾಸ್ಕೆಟ್ ಬಾಲ್ ಆಟದಲ್ಲಿಯ ಮಹಾನ್ ಆಟಗಾರ. ಈ ಸ್ನೀಕರ್ಸ್ ಗಳು ಅಮೆರಿಕೆಯ ಡ್ರೀಮ್ ಟೀಮಿನ ಭಾಗವಾದ ಮೈಕಲ್ ಜಾರ್ಡನ್ ಅವರದು. ಹೀಗಾಗಿ ಮೈಕಲ್ ಜಾರ್ಡನ್ ಅವರ ಈ ಸ್ನೀಕರ್ಸ್ ಗಳು 6 ಲಕ್ಷ 15 ಸಾವಿರ ಡಾಲರ್ ದ ದಾಖಲೆಯ ಮೊತ್ತಕ್ಕೆ ಹರಾಜಾಗಿವೆ. ಕ್ರಿಸ್ಟಿ ಆಕ್ಷನ್ ಪ್ರಕಾರ ಈ ಹಳೆಯ ಶೂಜ್ ಗಳ ಹರಾಜಿನಿಂದ ಸುಮಾರು 4 ಕೋಟಿ 60 ಲಕ್ಷ ರೂಪಾಯಿಗಳು ಜಮೆಯಾಗಿವೆಯಂತೆ.
A pair of worn Michael Jordan sneakers sold for $615,000 USD. pic.twitter.com/WT6NoEAhuR
— 6ixBuzzTV (@6ixbuzztv) August 14, 2020
ಈ ಶೂಜ್ ಗಳ ಇನ್ನೊಂದು ವಿಶೇಷತೆ ಏನೆಂದರೆ, ಇವು ಕೆಲವೇ ದಿನಗಳ ಹಿಂದೆ ದಾಖಲೆಯ ಮೊತ್ತಕ್ಕೆ ಮಾರಲ್ಪಟ್ಟಿದ್ದವು. ಈಗ ಮತ್ತೆ ಅದೇ ಶೂಜ್ ಗಳು ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಿ ತನ್ನದೇ ದಾಖಲೆಯನ್ನು ಮುರಿದಿವೆ. NBA ಸ್ಟಾರ್ ಮೈಕಲ್ ಅವರು ಈ ಸ್ನಿಕರ್ಸ್ ಶೂಜ್ ಗಳನ್ನು 1985 ರಲ್ಲಿ ನಡೆದ ಒಂದು ಪ್ರದರ್ಶನ ಪಂದ್ಯದಲ್ಲಿ ತೊಟ್ಟಿದ್ದರು. ಮೈಕಲ್ ಅವರ ಅಂತಾರಾಷ್ಟ್ರೀಯ ಕರಿಯರ್ ಒಟ್ಟು 14 ವರ್ಷಗಳದ್ದು. ಅವರ ತೊಟ್ಟ ಇನ್ನು 9 ಜೋಡಿ ಶೂಜ್ ಗಳು ಸಹಿತ ಕೋಟಿ ಕೋಟಿಗಳಲ್ಲಿ ಮಾರಾಟವಾಗಿವೆ.
ಜಾರ್ಡನ್ ಅವರು ಒಮ್ಮೆ ಪಂದ್ಯವನ್ನು ಆಡುತ್ತಿರುವಾಗ ಬಾಲ್ ನ್ನು ಜೋರಾಗಿ ಅಪ್ಪಳಿದಾಗ ಬ್ಯಾಕ್ ಬೋರ್ಡ್ ಗಾಜು ಪೀಸ್ ಪೀಸ್ ಮಾಡಿದ್ದರು.