ಜೀವನದಲ್ಲಿ ಮೊದಲನೇ ಸಲ ಹಾಲು ಕುಡಿಯುತ್ತಿರುವ ಕಾಡು ಪ್ರಾಣಿ! ಹಾಲು ಕುಡಿಯುವ ರೀತಿ ತುಂಬಾ ಫನ್ನಿಯಾಗಿದೆ! ಒಮ್ಮೆ ನೋಡಿ ಈ Video!

ಪ್ರಕೃತಿ ಎಂದರೆ ಸಾಕು ಮನಸ್ಸಿನಲ್ಲೊಂದು ಅಂದವಾದ ಚಿತ್ರ ಮೂಡುತ್ತದೆ. ಹಸಿರು ವನ, ಹರಿಯುವ ಜಲಧಾರೆ, ಬೀಸುವ ತಂಗಾಳಿ, ಸುಮಗಳ ಸುವಾಸನೆ ಹೀಗೆಲ್ಲಾ ಮನಸ್ಸು ನಮಗೊಂದು ಅಂದವಾದ, ಸುಂದರವಾದ, ಮನಮೋಹಕ ಹಾಗೂ ರಮಣೀಯ ದೃಶ್ಯವನ್ನೇ ತೋರಿಸಿಬಿಡುತ್ತದೆ. ಆದರೆ ನಾಗರಿಕತೆ ಬೆಳೆದಂತೆ ನಾವು ಪ್ರಕೃತಿಯಿಂದ ಬಹಳ ದೂರ ಉಳಿದಿದ್ದೇವೆ‌. ಇಂದು ಹರಿವ ಜಲಧಾರೆ, ಹಚ್ಚ ಹಸಿರಿನ ಕಾಡು, ವನ್ಯ ಮೃಗಗಳ ಸದ್ದು ಇವೆಲ್ಲವನ್ನೂ ನಾವು ಸಿನಿಮಾಗಳಲ್ಲೋ, ವೀಡಿಯೋಗಳಲ್ಲೋ ಅಥವಾ ಫೋಟೋಗ್ರಫಿಯಲ್ಲೋ ನೋಡಿ ಆನಂದಿಸುವಂತಹ ಪರಿಸ್ಥಿತಿ ಇದೆ. ನಮ್ಮ ಪ್ರಕೃತಿ ಒಂದು ರೀತಿಯಲ್ಲಿ ವಿಸ್ಮಯದ ಆಗರವೇ ಸರಿ.

ಈ ಪ್ರಕೃತಿಯ ಪ್ರತಿ ಜೀವಿಗೂ ತನ್ನದೇ ಆದಂತಹ ವಿಶೇಷತೆ ಇದೆ. ಆದರೆ ಅದೆಲ್ಲಾ ನಮಗೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ವಿಡಿಯೋ ಗಳ ಮೂಲಕವಷ್ಟೇ ತಿಳಿದು ಬರುತ್ತದೆ‌. ಕಾಡು ಪ್ರಾಣಿಗಳ ಚಟುವಟಿಕೆಗಳು ನಮಗೆ ಒಂದು ನೂತನ ಅನುಭವವನ್ನು ಹಾಗೂ ರೋಮಾಂಚನದ ಅನುಭೂತಿಯನ್ನು‌ ನೀಡುವುದರಿಂದಲೇ ಅಂತಹ ವೀಡಿಯೋಗಳು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಬಿಡುತ್ತವೆ. ಅಪರೂಪಕ್ಕೆ ಕಾಣುವ ಈ ವಿಶೇಷ ಹಾಗೂ ವಿಶಿಷ್ಟವಾದ ಪ್ರಾಣಿಗಳ ಚಲನ ವಲನವು ತೀವ್ರವಾದ ಕುತೂಹಲದ ಜೊತೆ ಜೊತೆಗೆ, ನಗುವನ್ನು ಕೂಡಾ ತಂದು ಕೊಡುತ್ತದೆ.

ಈಗ ನಾವು ಹೇಳಲಿರುವುದು ಕೂಡಾ ಅಂತಹುದೇ ಒಂದು ಅದ್ಭುತ ವೀಡಿಯೋ ಬಗ್ಗೆ. ವೈರಲ್ ಆಗಿ ಸಾಕಷ್ಟು ಸದ್ದು ಮಾಡುತ್ತಿರುವ ಈ ವೀಡಿಯೋದಲ್ಲಿ ಮುಗ್ಧ ಜೀವಿಯೊಂದು ಮಾಡುತ್ತಿರುವ ಕೆಲಸ ಅದರ ಮುಗ್ಧತೆಗೆ ಸಾಕ್ಷಿಯಾಗಿದೆ. ನೋಡುಗನಿಗೆ ನಗು ಬಂದರೂ, ಮತ್ತೊಂದು ಕ್ಷಣದಲ್ಲಿ ಅಯ್ಯೋ ಪಾಪ ಎಷ್ಟು ಅಮಾಯಕ ಪ್ರಾಣಿ ಇದು ಎಂದು ಕೂಡಾ ಅನಿಸದೇ ಇರಲಾರದು. ಹಾಗಾದರೆ ಯಾವುದು ಆ ಪ್ರಾಣಿ, ಇಷ್ಟಕ್ಕೂ ಅದು ಮಾಡಿದ್ದಾದರೂ ಏನು ಎನ್ನುವುದಾದರೆ ಅದಕ್ಕೆ ಉತ್ತರವನ್ನು ನೀಡುತ್ತೇವೆ ಬನ್ನಿ. ಓದಿದ ಮೇಲೆ ನಿಮ್ಮ ಕಣ್ಣಿಗೂ ಆ ಪ್ರಾಣಿ ಮುಗ್ಧ ಅಥವಾ ಅಮಾಯಕ ಎನಿಸದೇ ಇರಲಾರದು.

ವಿಡಿಯೋ ನೋಡಿ…..

ನೇಚರ್ ಅಂಡ್ ಅನಿಮಲ್ಸ್ ಎನ್ನುವ ಟ್ವಿಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಒಂದು ವೀಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಬೆಕ್ಕಿನ ಜಾತಿಗೆ ಸೇರಿದ ಸಿವೆಟ್ ಕ್ಯಾಟ್ ಒಂದು ಬಟ್ಟಲಿನಲ್ಲಿ ಇಟ್ಟಿರುವ ಹಾಲನ್ನು ಕುಡಿಯುವ ಪ್ರಯತ್ನವನ್ನು ಮಾಡುತ್ತಿದೆ. ಈ ಸಿವೆಟ್ ಗೆ ಹಾಲನ್ನು ಕುಡಿಯುವುದು ಹೇಗೆ? ಎಂಬುದು ಕೂಡಾ ಗೊತ್ತಿಲ್ಲ, ಪಾಪಾ ಅದು ಸಾಮಾನ್ಯವಾಗಿ ಆಹಾರವನ್ನು ತಿನ್ನುವ ರೀತಿಯಲ್ಲೇ ಹಾಲನ್ನು ಕೂಡಾ ಸೇವನೆ ಮಾಡುವ ಪ್ರಯತ್ನ ಮಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ‌. ಸರಿಯಾಗಿ ಕುಡಿಯಲು ಬಾರದೆ ಎಲ್ಲಾ ಚೆಲ್ಲಿ ಹಾಲು ಕುಡಿಯುವ ಈ ಪ್ರಾಣಿಯನ್ನು ನೋಡಿದಾಗ ಈಗೀಗ ತಿನ್ನಲು ಕಲಿತ ಮಕ್ಕಳ ಹಾಗೆ ಕಾಣುತ್ತಿದೆ.

ಆಗಸ್ಟ್ 20 ರಂದು ಶೇರ್ ಆಗಿರುವ ಈ ವೀಡಿಯೊವನ್ನು ಈಗಾಗಲೇ 1 ಲಕ್ಷ 60 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 1300 ಕ್ಕಿಂತ ಅಧಿಕ ರೀಟ್ವೀಟ್ ಗಳು, 4 ಸಾವಿರಕ್ಕಿಂತ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರು ಕೂಡಾ ಇದನ್ನು ಸುಂದರವಾದ ವೀಡಿಯೋ, ನೋಡಲು ಅದ್ಭುತವಾಗಿದೆ ಎಂದೆಲ್ಲಾ ಹೇಳಿದ್ದರೆ, ಒಂದಿಬ್ಬರು ವೀಡಿಯೋ ಗಾಗಿ ಪ್ರಾಣಿಗಳ ಮೇಲೆ ಮಾಡುವ ಹಿಂಸೆ ಇದು ಎಂದು ತಮ್ಮ ಅಸಮಾಧಾನವನ್ನು ಕೂಡಾ ಹೊರ ಹಾಕಿದ್ದಾರೆ.