ENG vs PAK: ಸ್ಟುಅರ್ಟ್ ಬ್ರಾಡ್ ಕ್ಯಾಚ್ ಬಿಟ್ಟರೂ ಔಟಾದ ಪಾಕಿಸ್ತಾನದ ಬ್ಯಾಟ್ಸ್ಮನ್! ದಂಗಾದ ಪಾಕಿಸ್ತಾನಿ ನಾಯಕ! Viral Video

ಕೊರೋನಾದ ಹಾವಳಿಯಲ್ಲಿ ಸ್ತಬ್ಧವಾದ ಜಗತ್ತು ನಿಧಾನವಾಗಿ ಮತ್ತೆ ಪೂರ್ವಪಥದ ಮೇಲೆ ಬರುತ್ತಿದೆ. ಈ ವಿಷಾಣುವಿಗೆ ಹೆದರಿ ಜಗತ್ತಿನ ಎಲ್ಲಾ ಆಟಗಳು ಸಹಿತ ನಿಂತು ಹೋಗಿದ್ದವು. ಈಗ ಮತ್ತೆ ಅಂತರಾಷ್ಟ್ರೀಯ ಆಟಗಳು ಪ್ರಾರಂಭವಾಗಿವೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಮಧ್ಯದಲ್ಲಿ ಇಂಗ್ಲೆಂಡಿನ ಸೌತಂಪ್ಟನ್ ನಲ್ಲಿ ಮೂರನೆಯ ಹಾಗೂ ಕೊನೆಯ ಟೆಸ್ಟ್ ಪಂದ್ಯ ನಡೆದಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸನಲ್ಲಿ ಬ್ಯಾಟ್ ಮಾಡಿ 583 ರನ್ ಗಳ ವಿಶಾಲ ಮೊತ್ತವನ್ನು ಶೇಖರಿಸಿದೆ. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡವು ಮೊದಲ ಇನಿಂಗ್ಸನಲ್ಲಿ 273 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಜೇಮ್ಸ್ ಎಂಡರ್ಸನ್ ಅವರು ಈ ಇನಿಂಗ್ಸನಲ್ಲಿ 5 ವಿಕೆಟ್ಗಳನ್ನು ಕಬಳಿಸಿದರು.

ಪಂದ್ಯದ ಮೂರನೇ ದಿನದಲ್ಲಿ ಒಂದು ವಿಶೇಷವಾದ ಘಟನೆ ನಡೆಯಿತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಇಂಗ್ಲೆಂಡ್ ಆಟಗಾರರಾದ ಸ್ಟುವರ್ಟ್ ಬ್ರಾಡ್ ಅವರು ಪಾಕಿಸ್ತಾನದ ನಾಯಕ ಬ್ಯಾಟ್ಸ್ಮನ್ ಅಜರ್ ಅಲಿ ಅವರ ಕ್ಯಾಚ್ ಹಿಡಿಯದೆ ಕೈಚೆಲ್ಲಿದರು. ಆದರೂ ಸ್ಟುವರ್ಟ್ ಬ್ರಾಡ್ ಅವರು ಮಾಡಿದ ಉತ್ತಮ ಫೀಲ್ಡಿಂಗ್ ಮೂಲಕ ನಾನ್ ಸ್ಟ್ರೈಕರ್ ನಲ್ಲಿದ್ದ ಬ್ಯಾಟ್ಸ್ಮನ್ ಮೊಹಮ್ಮದ್ ಅಬ್ಬಾಸ್ ಅವರಿಗೆ ರನೌಟ್ ಮಾಡುವಲ್ಲಿ ಯಶಸ್ವಿಯಾದರು

ವಿಡಿಯೋ ನೋಡಿ…

ಅಲ್ಲಿ ನಿಜಕ್ಕೂ ನಡೆದದ್ದೇನೆಂದರೆ, ಪಾಕ್ ಬ್ಯಾಟ್ಸ್ಮನ್ ಅಝರ್ ಅಲಿ 129 ರ ನ್ ಬಾರಿಸಿ ಆಡುತ್ತಿದ್ದರು. ಆಗ ಆಂಡರ್ಸನ್ ಅವರ ಬಾಲ್ ನಲ್ಲಿ ಅಜರ್ ಅವರು ಹವೆಯಲ್ಲಿ ಶಾಟ್ ಬಾರಿಸಿದಾಗ ಅದು ನೇರವಾಗಿ ಸ್ಟುವರ್ಟ್ ಬ್ರಾಡ್ ಅವರ ಕಡೆಗೆ ಹೋಯಿತು. ತುಂಬಾ ಈಜಿ ಆದ ಕ್ಯಾಚ್ ಸ್ಟುವರ್ಟ್ ಬ್ರಾಡ್ ಅವರು ಇನ್ನೇನು ಹಿಡಿದೆ ಬಿಡುತ್ತಾರೆ ಎನ್ನುವಷ್ಟರಲ್ಲಿ ಆ ಕ್ಯಾಚ್ ಕೈಚೆಲ್ಲಿ ಬಿಟ್ಟರು. ಅದೇ ಸಮಯಕ್ಕೆ ಇಬ್ಬರೂ ಬ್ಯಾಟ್ಸ್ಮನ್ಗಳು ರನ್ ಗಾಗಿ ಓಡುತ್ತಿರುವಾಗ ಸ್ಟುವರ್ಟ್ ಬ್ರಾಡ್ ಅವರು ಬೇಗನೆ ಬಾಲನ್ನು ಎತ್ತಿ ವಿಕೆಟ್ ಕೀಪರ್ ಸೈಡಿನಲ್ಲಿ ಇದ್ದ ಸ್ಟಂಪ್ಸ್ ಗಳ ಕಡೆಗೆ ಥ್ರೋ ಬಿಸಾಕಿದರು. ಅವರು ಬಿಸಾಕಿದ ಥ್ರೋ ಡೈರೆಕ್ಟ್ ಸ್ಟಂಪಿಗೆ ಪಡೆದಿದೆ. ಆಗ ಮೊಹಮ್ಮದ ಅಬ್ಬಾಸ್ ಅವರು ಇನ್ನು ಕ್ರೀಜಿಗೆ ತಲುಪಿರಲಿಲ್ಲ. ವಿಚಿತ್ರ ರೀತಿಯಲ್ಲಿ ತಾನು ಔಟ್ ಆದದ್ದು ತಿಳಿದು ಸ್ವತಃ ಅವರೇ ನಗುತ್ತಿದ್ದರು.

ಈ ಪಂದ್ಯದಲ್ಲಿ ನಾಯಕ ಅಜರ್ ಅಲಿ ಅವರು ಔಟಾಗದೆ 141 ರನ್ಗಳನ್ನು ಬಾರಿಸಿದ್ದಾರೆ. ಇವರ ಹೊರತಾಗಿ ಪಾಕಿಸ್ತಾನದ ಯಾವುದೇ ಆಟಗಾರ ಒಳ್ಳೆಯ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದರು.

ಇಂಗ್ಲೆಂಡ್ ಗಳಿಸಿದ 583 ರನ್ ಗಳಲ್ಲಿ ಜಾಕ್ ಕ್ರಾಲಿ ಅವರು 267 ರನ್ ಗಳ ಉತ್ತಮ ಮೊತ್ತವನ್ನು ಕೂಡಿಹಾಕಿದರು. ಅವರ ಜೊತೆಗೆ ಜಾಸ್ ಬಟ್ಲರ್ ಸಹಿತ 152 ರನ್ ಗಳನ್ನು ಕಲೆ ಹಾಕಿದರು.

ಸದ್ಯ ಫಾಲೋಆನ್ ಹೇರಿಕೊಂಡ ಪಾಕಿಸ್ತಾನ ಎರಡನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 100 ರನ್ ಗಳನ್ನು ಗಳಿಸಿ ಸಂಕಷ್ಟದಲ್ಲಿ ಸಿಲುಕಿದೆ.