ಜಗದ್ವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ಅವರ ಮೆದುಳು ಇನ್ನೂವರೆಗೂ ಸುರಕ್ಷಿತವಾಗಿ ‘ಕಾಯ್ದಿರಿಸಲು’ ಕಾರಣವೇನು? ಅಚ್ಚರಿ ಮೂಡಿಸುವ ಮಾಹಿತಿ!
ಮನುಷ್ಯನ ಮೆದುಳಿನಲ್ಲಿ ಸೆರೆಬ್ರಲ್ ಕಾರ್ಟಿಕ್ ಅಥವಾ ಸರೆಬ್ರಲ್ ಕಾರ್ಟೆಕ್ಸ್ ಎನ್ನುವ ಒಂದು ಮಹತ್ವದ ಭಾಗವಿದೆ. ಇದು ಮನುಷ್ಯನ ಮೆದುಳಿನಲ್ಲಿ ಎಲ್ಲಕ್ಕೂ ಜಟಿಲವಾದ ಕಾರ್ಯತಂತ್ರಕ್ಕೆ ಜವಾಬ್ದಾರಿಯಾಗಿರುತ್ತದೆ. ಗಮನದಲ್ಲಿಟ್ಟುಕೊಳ್ಳುವುದು, ಕಾರ್ಯತಂತ್ರವನ್ನು ರೂಪಿಸುವುದು, ಚಿಂತೆ ಮಾಡುವುದು, ಭವಿಷ್ಯದ ಬಗ್ಗೆ ಯೋಚಿಸುವುದು, ಕಲ್ಪನೆಯನ್ನು ಮಾಡುವುದು, ಇವೆಲ್ಲಕ್ಕೂ ಮೆದುಳಿನ ಈ ಭಾಗ ಜವಾಬ್ದಾರಿಯಾಗಿದೆ.
ಜರ್ಮನ್ ವಂಶದವರಾದ ಅಮೆರಿಕೆಯ ವೈಜ್ಞಾನಿಕ ಅಲ್ಬರ್ಟ್ ಐನ್ಸ್ಟೈನ್ ಅವರಲ್ಲಿ ಅಲೌಕಿಕವಾದ ಬುದ್ಧಿ ಚಾತುರ್ಯ ಇತ್ತು. ಯಾವಾಗ 1955 ರಲ್ಲಿ ಇವರ ನಿಧನವಾಯಿತು ಆಗಿನಿಂದ ವೈಜ್ಞಾನಿಕ ರಲ್ಲಿ ಅವರ ಮೆದುಳಿನ ಬಗ್ಗೆ ಸಂಶೋಧನೆ ಮಾಡುವುದು ಒಂದು ದೊಡ್ಡ ವಿಷಯವೇ ಆಗಿದೆ. ಐನ್ಸ್ಟೈನ್ ಅವರು ಯಾವ ಕಾರಣಗಳಿಂದ ಭೌತಶಾಸ್ತ್ರದಲ್ಲಿ ವಿಲಕ್ಷಣವಾದ ಶೋಧಗಳನ್ನು ಹಚ್ಚಲು ಕಾರಣವಾಯಿತು ಎಂಬುವುದನ್ನು ನೋಡುವುದೇ ಶಾಸ್ತ್ರಜ್ಞರ ಮುಖ್ಯ ಅಭ್ಯಾಸವಾಗಿದೆ. ಐನ್ಸ್ಟೈನ್ ಅವರ ಮೆದುಳಿನಲ್ಲಿ ಸರೆಬ್ರಲ್ ಕಾರ್ಟಿಕ್ಸ್ ಇದು ಸಾಮಾನ್ಯ ಮನುಷ್ಯನಿಗಿಂತ ಆಶ್ಚರ್ಯಕರವಾದ ರೀತಿಯಲ್ಲಿ ಬೇರೆ ಆಗಿದೆ ಎಂಬ ತರ್ಕವಿದೆ.

ಮೆದುಳಿನ ಪೃಷ್ಠ ಭಾಗದ ಮೇಲಿರುವ ನ್ಯೂರಾನ್ಸಗಳು ಅದರ ಸಂಯೋಜನೆಯನ್ನು ಮಾಡುತ್ತವೆ. ಈ ಮೆದುಳಿನ ಸಂಶೋಧನೆಯನ್ನು ಮಾಡುವ ವೈಜ್ಞಾನಿಕರಿಗೆ ಕಂಡುಬಂದ ವಿಷಯವೇನೆಂದರೆ ಸಂಯೋಜನೆಯ ಸಂದರ್ಭದಲ್ಲಿ ಐನ್ಸ್ಟೈನ್ ಅವರ ಮೆದುಳು ತುಂಬಾ ಜಟಿಲವಾಗಿತ್ತಂತೆ.
ಸದ್ಯಕ್ಕೆ ಅವರ ಮೆದುಳು ಅಮೆರಿಕದ ಒಂದು ಸಂಗ್ರಹಾಲಯದಲ್ಲಿ 46 ತುಣುಕುಗಳಲ್ಲಿ ಸುರಕ್ಷಿತವಾಗಿದೆ. ಪ್ರಸಿದ್ಧ ಶಾಸ್ತ್ರಜ್ಞರಾದ ಡಾಕ್ಟರ್ ಹಾರ್ವೆ ಅವರು ಐನ್ಸ್ಟೈನ್ ಅವರ ಮೆದುಳನ್ನು ಪರೀಕ್ಷೆಗಾಗಿ ತೆಗೆದುಕೊಂಡ ನಂತರ ಅವರು ಅದನ್ನು ಮರಳಿ ಕೊಡಲೇ ಇಲ್ಲ ಎಂಬ ಒಂದು ವದಂತಿಯೂ ಇದೆ. ನಂತರ ಇದು ಸುಳ್ಳಾಯಿತು. ಡಾಕ್ಟರ್ ಹಾರ್ವೆ ಅವರ ನಂತರ ಐನ್ಸ್ಟೈನ್ ಅವರ ಮೆದುಳು ಲೂಸಿ ರಾಹುರ್ಕೆ ಅಡಮ್ಸ್ ಅವರ ಕಡೆಗೆ ಬಂತು. ಇವರು ಅಮೆರಿಕೆಯ ಫಿಲಿಡೆಲ್ಫಿಯಾದಲ್ಲಿಯ ಮ್ಯೂಟರ್ ಸಂಗ್ರಹಾಲಯದಲ್ಲಿ ಮತ್ತು ಐತಿಹಾಸಿಕ ಮೆಡಿಕಲ್ ಸಂಗ್ರಹಾಲಯದಲ್ಲಿ ಇಡುವ ನಿರ್ಧಾರವನ್ನು ಮಾಡಿದರು. ಅಲ್ಲೇ ಒಂದು ಗಾಜಿನ ಬಾಟಲಿಯಲ್ಲಿ ಖ್ಯಾತ ವಿಜ್ಞಾನಿ ಐನ್ಸ್ಟೈನ್ ಅವರ ಮೆದುಳನ್ನು ಇಟ್ಟದ್ದು ನೋಡಬಹುದು.