ಬೈಕ್ ಬೇಕೆಂದು ಹಠ ಹಿಡಿದ ಮಗ; ಮನೆಯಲ್ಲಿಯೇ ಸ್ಕೂಟರ್ ನಂತೆ ಕಾಣುವ ಸೈಕಲ್ ತಯಾರಿಸಿ ಕೊಟ್ಟ ತಂದೆ! ನೋಡಿ Video!

ಕೆಲವು ಸಲ ಮನಸ್ಸಿದ್ದರೆ ಮಾರ್ಗ ಎನ್ನುವ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಯಾವುದಾದರೂ ಒಂದು ಕೆಲಸವನ್ನು ಮಾಡಲೇಬೇಕು ಎಂದು ದೃಢ ಮನಸ್ಸಿನಿಂದ ನಿರ್ಧಾರವನ್ನು ಮಾಡಿದರೆ ಖಂಡಿತ ಆ ಕೆಲಸವನ್ನು ಮಾಡಿ ಬಿಡುತ್ತೇವೆ. ಆಗ ಯಾವುದೇ ಪರಿಸ್ಥಿತಿ ಅಥವಾ ಸಮಸ್ಯೆ ಎಂಬುದು ನಮ್ಮ ಕಾರ್ಯಕ್ಕೆ ಅಡ್ಡಿಯನ್ನು ಒಡ್ಡಲಾರದು. ಈಗ ಇಂತಹುದೇ ಒಂದು ಮನಸ್ಸಿದ್ದರೆ ಮಾರ್ಗ ಎಂಬಂತೆ ಮಗನ ಕೋರಿಕೆಯನ್ನು ಈಡೇರಿಸಲು ತಂದೆಯೊಬ್ಬರು ಮಾಡಿದ ಕಾರ್ಯ ವೀಡಿಯೋ ರೂಪದಲ್ಲಿ ಬಂದು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಮಾತ್ರವಲ್ಲದೇ, ಮಗನಿಗಾಗಿ ತಂದೆ ಮಾಡಿದ ಆಲೋಚನೆಗೆ ನೆಟ್ಟಿಗರು ಕೂಡಾ ಫಿದಾ ಆಗಿ ವಾವ್ ವಾವ್ ಎಂದು ಹೊಗಳುತ್ತಿದ್ದಾರೆ.

ಇಷ್ಟಕ್ಕೂ ವಿಚಾರ ಏನೆಂದರೆ ಪಂಜಾಬ್ ನ ಲುಧಿಯಾನದಲ್ಲಿ ತಂದೆಯೊಬ್ಬರು ಮನೆಯಲ್ಲಿ ಕುಳಿತ ಕಡೆಯಲ್ಲೇ ಲಭ್ಯವಿದ್ದಂತಹ ಹಳೆಯ ಸಾಮಾಗ್ರಿಗಳನ್ನು ಬಳಸಿ ಒಂದು ವಿಶೇಷವಾದ ಸೈಕಲನ್ನು ತಯಾರಿಸಿದ್ದಾರೆ‌. ಈ ಸೈಕಲ್ ಬಗ್ಗೆ ತಿಳಿದರೆ ನೀವು ಕೂಡಾ ಇದನ್ನು ವಿಶೇಷ ಸೈಕಲ್ ಎಂದು ಒಪ್ಪಲೇಬೇಕು. ಈ ಸೈಕಲ್ ನಾವು ಈಗಾಗಲೇ ನೋಡಿರುವ ಸಾವಿರಾರು ಸೈಕಲ್ ಗಳ ಮಾದರಿಯಲ್ಲಿ ಇಲ್ಲದಿರುವುದೇ ಇದರ ವಿಶೇಷತೆ ಎಂಬುದು ನಿಜವಾದ ಮಾತು. ಹಾಗಾದರೆ ಇದೇನು ಸೈಕಲ್ ರೀತಿಯಲ್ಲದೇ ಮತ್ಯಾವ ರೀತಿಯಲ್ಲಿ ಇದೆ ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಕೂಡಾ ನೀಡುವೆವು ಬನ್ನಿ. ಈ ಘಟನೆಯು ಪಂಜಾಬ್‌ನ ಲುಧಿಯಾನದ ಲಖೋವಲ್ ಎಂಬ ಗ್ರಾಮವೊಂದರಲ್ಲಿ ನಡೆದಿದೆ.

ಇಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಹರ್ಮನ್‌ಜೋತ್ ತನ್ನ ತಂದೆಗೆ ಸೈಕಲ್ ಬೇಕು ಎಂದು ಕೇಳಿದ್ದಾನೆ. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಹರ್ಮನ್ ಅವರ ತಂದೆಗೆ ಮಗನಿಗೆ ಹೊಸ ಸೈಕಲ್ ಖರೀದಿ ಮಾಡಲು ಅಗಿಲ್ಲ. ಆದ್ದರಿಂದ ಅವರು ಮನೆಯಲ್ಲೇ ಇದ್ದ ಅನುಪಯುಕ್ತಗಳಿಂದ ಸ್ಕೂಟರ್ ತರಹದ ಬೈಸಿಕಲ್ ಅನ್ನು ವಿನ್ಯಾಸಗೊಳಿಸಿದ್ದಾರೆ.‌ ಅಂದರೆ ಮುಂಭಾಗದಿಂದ, ಈ ಬೈಸಿಕಲ್ ಸ್ಕೂಟರ್ ನಂತೆ ಕಾಣುತ್ತದೆ ಮತ್ತು ತುಳಿಯಲು ಪೆಡಲ್ ಗಳನ್ನು ಅಳವಡಿಸಲಾಗಿದೆ. ‌ಹುಡುಗ ಸ್ಕೂಟರ್ ನಂತೆ ಕಾಣುವ ಸೈಕಲನ್ನು ಹೊರ ತೆಗೆದು ಪೆಡಲ್ ತುಳಿದು ಬರುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ‌.

24 ಆಗಸ್ಟ್ ಎಂದು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೋವನ್ನು 27 ಸಾವಿರ ಜನರು ವೀಕ್ಷಣೆಯನ್ನು ಮಾಡಿದ್ದು, 800 ಕ್ಕಿಂತ ಅಧಿಕ ಲೈಕ್ ಗಳು ಬಂದಿವೆ. ಈ ವೀಡಿಯೋವನ್ನು ನೂರಾರು ಜನರು ಹಂಚಿಕೊಂಡಿದ್ದು ನೋಡುಗರು ಬಹಳ ಅದ್ಬುತ ಎಂದು ಕಾಮೆಂಟ್ ಗಳನ್ನು ನೀಡುತ್ತಿದ್ದಾರೆ. ಸ್ಕೂಟರ್ ಮಾದರಿಯಲ್ಲಿ ಕಾಣುತ್ತಿರುವ ಈ ವಿಚಿತ್ರ, ವಿಭಿನ್ನವಾಗಿದ್ದು ಎಲ್ಲರ ಗಮನ ವನ್ನು ಸೆಳೆಯುತ್ತಿದೆ.