OMG! ನೀರಿನಿಂದ ಮೇಲಕ್ಕೆ ಜಿಗಿದು ಅದ್ಭುತ ಸ್ಟಂಟ್ ಮಾಡಿದ ದೈತ್ಯ ಗಾತ್ರದ ತಿಮಿಂಗಿಲ! ದೃಶ್ಯ ನೋಡಿ ಬೆಚ್ಚಿ ಬಿದ್ದ ಹುಡುಗಿ! ನೋಡಿ ಈ Viral Video
ಕೆನಡಾದಲ್ಲಿ ತಂದೆ ಮತ್ತು ಮಗಳು ಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ಅವರಿಗೆ ಸಮುದ್ರದಲ್ಲಿ ಒಂದು ಅದ್ಭುತವನ್ನು ನೋಡಲು ಸಿಕ್ಕಿದೆ. ಕಣ್ಮುಂದೆ ಕಂಡ ಆ ಸುಂದರವಾದ ದೃಶ್ಯವು ಅನಿರೀಕ್ಷಿತವಾಗಿ ನಡೆದಿದ್ದರಿಂದ ಆ ತಂದೆ ಮಗಳು ಒಂದು ಕ್ಷಣ ದಿಗ್ಭ್ರಾಂತರಾಗಿದ್ದು ಸುಳ್ಳಲ್ಲ. ಕಳೆದ ಭಾನುವಾರದಂದು ಈ ಘಟನೆ ನಡೆದಿದ್ದು, ಸಿಬಿಸಿ ನ್ಯೂಸ್ ಪ್ರಕಾರ, ಸೀನ್ ರಸ್ಸೆಲ್ ಮತ್ತು ಅವರ 10 ವರ್ಷದ ಮಗಳು ಸಾರಾ ನ್ಯೂಫೌಂಡ್‌ಲ್ಯಾಂಡ್‌ನ ಕಾನ್ಸೆಪ್ಟ್ ಕೊಲ್ಲಿಯಲ್ಲಿ ಮೀನುಗಾರಿಕೆ ಮಾಡಲು ತೆರಳಿದ್ದರು. ಆ ಸಂದರ್ಭದಲ್ಲಿ ಎರಡು ಹಂಪ್‌ಬ್ಯಾಕ್ ತಿಮಿಂಗಿಲಗಳು ತಮ್ಮ ದೋಣಿಯ ಹತ್ತಿರ ಈಜುತ್ತಿರುವುದನ್ನು ನೋಡಿದ್ದಾರೆ. ತಿಮಿಂಗಿಲ ತನ್ನ ನಡವಳಿಕೆಯಲ್ಲಿ ಬದಲಾವಣೆ ಮಾಡುತ್ತಿರುವುದನ್ನು ಗಮನಿಸಿದ ರಸ್ಸೆಲ್ ಅದನ್ನು ಮಗಳಿಗೆ ತಿಳಿಸಿದ್ದಾರೆ.
ಕೂಡಲೇ ಅವರು ಮುಂದೆ ನಡೆಯಲಿರುವ ದೃಶ್ಯದ ಬಗ್ಗೆ ಆಲೋಚನೆ ಮಾಡಿ, ಕ್ಯಾಮೆರಾಗಳನ್ನು ಸಿದ್ಧಪಡಿಸಿಕೊಂಡು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾ ದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ದೈತ್ಯ ಗಾತ್ರದ ತಿಮಿಂಗಿಲವು ನೀರಿನಿಂದ ಮೇಲಕ್ಕೆ ಜಿಗಿದು, ಗಾಳಿಯಲ್ಲಿ ಹಾರಿ ಗಾಳಿಯಲ್ಲಿ ತೇಲುತ್ತಿರುವುದನ್ನು ನಾವು ನೋಡಬಹುದು. ತಿಮಿಂಗಲದ ವಿನ್ಯಾಸವನ್ನು ನೋಡಿದ ಬಾಲಕಿಯು ಆ ವಿಸ್ಮಯವನ್ನು ನೋಡುತ್ತಾ ತೆರೆದ ಬಾಯಿ ತೆರೆದಂತೆ ಅಚ್ಚರಿಯಿಂದ ಅದನ್ನು ನೋಡಿದ್ದಾಳೆ. ಅಪ್ಪ ಮಗಳು ಇಬ್ಬರೂ ಕೂಡಾ ಅದೇ ಮೊದಲ ಬಾರಿಗೆ ತಿಮಿಂಗಿಲಗಳು ಮಾಡಿದ ಇಂತಹ ಅದ್ಭುತ ಸಾಹಸವನ್ನು ನೋಡಿದ್ದಾರೆ. ಇದನ್ನು ನೋಡಿದ ಹುಡುಗಿ ಆಶ್ಚರ್ಯದಿಂದ, ‘ಮೈಂಡ್ ಬ್ಲೋಯಿಂಗ್’ ಎಂದು ಉದ್ಗಾರ ಮಾಡಿದ್ದು, ಅವರ ತಂದೆ ಕೂಡಾ ಮಗಳಂತೆ ಆ ವಿಸ್ಮಯವನ್ನು ಕಣ್ತುಂಬಿಕೊಂಡಿದ್ದಾರೆ.
ವಿಡಿಯೋ ನೋಡಿ….
Most majestic video ever?
— Rex Chapman🏇🏼 (@RexChapman) August 25, 2020
Oh my goodness.
Newfoundland, bruh…pic.twitter.com/5I9daIwUhq
ಈ ವೀಡಿಯೋವನ್ನು ಮೊದಲು ಐಇಎಸ್ ಹಾಕಿ ತಂಡ, ನ್ಯೂ ಫೌಂಡ್ ಲ್ಯಾಂಡ್ ಗ್ರೋಲ್ಡರ್ಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಅನಂತರ ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚೆಪ್ಸ್ ಮೆನ್ ಇದನ್ನು ರೂ ಪೋಸ್ಟ್ ಮಾಡಿ ತಮ್ಮ ಹಿಂಬಾಲಕರಿಗೆ ಇಲ್ಲಿಯವರೆಗೂ ನೋಡಿರದಂತಹ ಅದ್ಭುತ ವೀಡಿಯೋ ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಾಗಿನಿಂದ, ಈ ವೀಡಿಯೋ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಾವಿರಾರು ರಿಟ್ವೀಟ್‌ಗಳು ಮತ್ತು ಕಾಮೆಂಟ್‌ಗಳೊಂದಿಗೆ 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿರುವುದು ಅದರ ವಿಶೇಷತೆ ಎನಿಸಿದೆ.
ಈ ಬಗ್ಗೆ ರಸ್ಸೇಲ್ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ “ತಿಮಿಂಗಿಲಗಳು ದೋಣಿಯ ಸುತ್ತಲೂ ಇರುವುದು ಅಸಾಮಾನ್ಯವೇನಲ್ಲ. ತಿಮಿಂಗಿಲಗಳು ಸಾಮಾನ್ಯವಾಗಿ ತಿರುಗಾಡುತ್ತವೆ, ಆದರೆ ನೀರಿನಲ್ಲಿ ಅವು ಮಾಡಿದ ಸ್ಟಂಟ್ ಗಳು ಅಸಾಮಾನ್ಯ ಹಾಗೂ ಆಕರ್ಷಣೀಯ” ಎಂದು ಹೇಳಿದ್ದಾರೆ. ವೀಡಿಯೋ ನೋಡಿದ ಟ್ವಿಟರ್ ಬಳಕೆದಾರರೊಬ್ಬರು, ನೇರವಾಗಿ ತಿಮಿಂಗಲಗಳ ಇಂತಹ ಸ್ಟಂಟ್ ಗಳನ್ನು ಯಾರಾದರೂ ನೋಡುತ್ತಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಿಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅದ್ಭುತ, ವಿಸ್ಮಯಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.