VIDEO: ಕರೆಂಟ್ ಹಿಡಿದ ವ್ಯಕ್ತಿಯನ್ನು ಪಾಕಿಸ್ತಾನಿ ಹೇಗೆ ಕಾಪಾಡುತ್ತಾನೆ ವಿಡಿಯೊ ನೋಡಿ…!
ನಮ್ಮ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಏನು ಎಂದು ಕೇಳಿದರೆ ಹಣ, ಆಸ್ತಿ, ಐಶ್ವರ್ಯ, ಸಿರಿ, ಸಂಪತ್ತು, ಕಾರು, ಬಂಗಲೆ ಹೀಗೆ ನೂರು ಜನರ ನೂರು ಆಸೆಗಳು ಅವರಿಗೆ ಮುಖ್ಯವಾಗಿ ಕಾಣುತ್ತವೆ. ಆದರೆ ವಾಸ್ತವವಾಗಿ ಇವೆಲ್ಲವುಗಳಿಗಿಂತ ಮುಖ್ಯವಾದುದು ನಮ್ಮ ಜೀವ ಅಥವಾ ಪ್ರಾಣ. ಏಕೆಂದರೆ ಜೀವ ಇದ್ದರೆ ಅಲ್ಲವೇ ಜೀವನ ಹಾಗೂ ಆಸೆಗಳು, ಆಕಾಂಕ್ಷೆಗಳು ಹಾಗೂ ಕೋರಿಕೆಗಳು, ಪ್ರಾಣವೇ ಹೋದ ದೇಹಕ್ಕೆ ಇದಾವುಗಳ ಜಂಜಾಟವೂ ಕೂಡಾ ಇರುವುದಿಲ್ಲ.
ಆದ್ದರಿಂದಲೇ ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾದುದು ಹಾಗೂ ಅತ್ಯಮೂಲ್ಯವಾದುದು ಎಂದರೆ ಅದು ಅವನ ಜೀವ. ಅದಕ್ಕೆ ಅಪಾಯದಲ್ಲಿ ಇರುವವರ ಜೀವ ಉಳಿಸಿದರೆ, ಜೀವದಾತನನ್ನು ದೇವರಿಗೆ ಹೋಲಿಕೆ ಮಾಡಿ ಕೃತಜ್ಞತೆ ಸಲ್ಲಿಸುವುದು ಕೂಡಾ ನಮ್ಮಲ್ಲಿ ಇರುವ ಒಂದು ಸಂಪ್ರದಾಯ.
ಜೀವನದಲ್ಲಿ ಅಪಾಯ ಎಂಬುದು ಹೇಳಿ ಕೇಳಿ ಬರುವುದಾಗಿದ್ದರೆ ಬಹುಶಃ ಜನರು ಅಪಾಯಕ್ಕೆ ಸಿಲುಕುತ್ತಲೇ ಇರಲಿಲ್ಲ. ಆದರೆ ವಾಸ್ತವ ಹಾಗಿಲ್ಲ, ಕೇಳದೇ ಬರುವುದು, ಹೇಳದೇ ಪ್ರಾಣಕ್ಕೆ ಸಂಚಕಾರ ಒಡ್ಡುವುದನ್ನೇ ನಾವು ಅಪಾಯ, ಅವಘಡ ಎಂದು ಕರೆಯುವುದು. ಇಂತಹ ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ ಪ್ರತಿಯೊಬ್ಬರ ಆಲೋಚನೆಗಳು ಕೂಡಾ ಒಂದು ಕ್ಷಣ ಸ್ತಬ್ಧವಾಗಿಬಿಡುತ್ತದೆ.
ಪ್ರಾಣ ಭಯದಲ್ಲಿ ಅಪಾಯದಿಂದ ಹೊರ ಬರಲು ಏನು ಮಾಡಬೇಕೆಂದು ತೋಚುವುದೂ ಇಲ್ಲ. ಗಾಬರಿ, ಆತಂಕ, ಭಯಗಳು ನಮ್ಮನ್ನು ನಿಷ್ಕ್ರಿಯರನ್ನಾಗಿ ಮಾಡಿ ಬಿಡುತ್ತದೆ. ಆದರೆ ಈಗ ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ಅನಿರೀಕ್ಷಿತವಾಗಿ ಬಂದೆರೆಗಿದ ಅವಘಡವನ್ನು ತಡೆಯುವಲ್ಲಿ, ಒಂದು ಪ್ರಾಣವನ್ನು ಉಳಿಸುವಲ್ಲಿ ವ್ಯಕ್ತಿಯೊಬ್ಬರು ಕೆಲವೇ ಸೆಕೆಂಡುಗಳಲ್ಲಿ ಮಾಡಿದ ಕೆಲಸ ಅಥವಾ ಮಾಡಿದ ಆಲೋಚನೆಯಿಂದಾಗಿ ಅಪಾಯದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರ ಜೀವನ ಉಳಿಸಿದ್ದ.
ಸೂಕ್ತ ಸಮಯದಲ್ಲಿ ಬಹಳ ಬೇಗ ಅಂತಹುದೊಂದು ಆಲೋಚನೆ ಮಾಡಿದ ಆ ಅಪರಿಚಿತ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದರೆ, ಮತ್ತೊಂದು ಕಡೆ ಈ ವೀಡಿಯೋ ಕೂಡಾ ಸಿಕ್ಕಾಪಟ್ಟೆ ವೈರಲ್ ಕೂಡಾ ಆಗುತ್ತಾ ಸಾಗಿದೆ. ಈ ವಿಡಿಯೊವನ್ನು ನೀವು ಯೂಟ್ಯೂಬ್ ನಲ್ಲಿಯೇ ನೋಡಬೇಕು, ಏಕೆಂದರೆ ಅದನ್ನು 18 ವರ್ಷ ಮೇಲ್ಪಟ್ಟವವರು ನೋಡಬೇಕು ಎಂದು ಯುಟ್ಯೂಬ್ ರಿಸ್ಟ್ರಿಕ್ಸನ್ ಹಾಕಿದೆ
ವಿಡಿಯೋ ನೋಡಿ….
ಆ ನಂತರ ಆತ ತಡ ಮಾಡದೇ ಪಟ್ ಅಂತ ತಾನು ಧರಿಸಿದ್ದ ಭುಜದ ಮೇಲೆ ಹಾಕಿಕೊಂಡಿದ್ದ ಟವೆಲ್ ನಂತಹದ್ದನ್ನು ತೆಗೆದು ಶಾಕ್ ಹೊಡೆದಿದ್ದ ಯುವಕನ ಕುತ್ತಿಗೆ ಭಾಗಕ್ಕೆ ಹಾಕಿ ಹಿಂದಕ್ಕೆ ಗಟ್ಟಿಯಾಗಿ ಎಳೆದಿದ್ದಾನೆ. ಆ ಮೂಲಕ ವಿದ್ಯುತ್ ಶಾಕ್ ಹಿಡಿದಿದ್ದ ಯುವಕ ಕೆಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈಗಾಗಲೇ ಕೋಟ್ಯಾಂತರ ವೀಕ್ಷಣೆ ಪಡೆದಿರುವ ಈ ವೀಡಿಯೋ ನೋಡಿದ ನೆಟ್ಟಿಗರು ಆತನೇ ನಿಜವಾದ ಬುದ್ಧಿವಂತ, ಅಷ್ಟು ಬೇಗ ಆಲೋಚನೆ ಮಾಡಿ ಪ್ರಾಣ ಉಳಿಸಿದ ಆತನಿಗೆ ದೇವರು ಒಳ್ಳೆಯದು ಮಾಡಲಿ, ಎಂಟೇ ಸೆಕೆಂಡುಗಳಲ್ಲಿ ಸಮಸ್ಯೆ ಅರ್ಥ ಮಾಡಿಕೊಂಡ ಆತನ ಬ್ರೈನ್ ಸೂಪರ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಹೀರೋಗಳೆಲ್ಲಾ ಶೀಲ್ಡ್ ಧರಿಸಿರುವುದಿಲ್ಲ ಕೆಲವರು ಸ್ಕಾರ್ಫ್ ಧರಿಸಿರುತ್ತಾರೆ ಎಂದೆಲ್ಲಾ ಕಾಮೆಂಟ್ ಮಾಡಿ ತಮ್ಮ ಅಪಾರ ಮೆಚ್ಚುಗೆಯನ್ನು ನೀಡಿರುವ ಈ ವೀಡಿಯೋಗೆ 18 ಸಾವಿರಕ್ಕಿಂತ ಅಧಿಕ ಮಂದಿ ಕಾಮೆಂಟ್ ಬಂದಿರುವುದು ವಿಶೇಷ.
-Team Infotrend