Funny Jokes: ಒಬ್ಬ ಅವಿವಾಹಿತ ಯುವತಿ ಗರ್ಭಿಣಿ ಆದ್ಳು.. ಆಗ ಅವಳ ಫ್ರೆಂಡ್: ಮಗುವಿನ ತಂದೆ ಯಾರು? ಹುಡುಗಿ: ಗೊತ್ತಿಲ್ಲ ಕಣೆ, ಚಿಕ್ಕ..

ಜೀವನದಲ್ಲಿ ನಗು ಇಲ್ಲವೆಂದರೆ ಒಂದು ಬಹುದೊಡ್ಡ ಸಂಪತ್ತನ್ನು ನಾವು ಕಳೆದುಕೊಂಡಂತೆ. ದಿನವೆಲ್ಲಾ ಕೂಡಾ ಎಷ್ಟೇ ಒತ್ತಡವಿದ್ದರೂ, ಒಮ್ಮೆಯಾದರೂ ಮನಸಾರೆ ನಕ್ಕರೆ, ಮನಸ್ಸಿನ ಭಾರವೆಲ್ಲಾ ಇಳಿದು, ಒಂದು ಆರಾಮದಾಯಕ ಹಾಗೂ ಆಹ್ಲಾದಕರ ಅನುಭವವು ನಮ್ಮದಾಗುತ್ತದೆ‌. ನಾವು ಉಲ್ಲಾಸದಿಂದ ಜೀವನ ನಡೆಸಲು ನಗು ನಮ್ಮ ಜೊತೆಗಿರಬೇಕು. ನಗು ಎಂಬ ಅಮೂಲ್ಯವಾದ ಸಂಪತ್ತನ್ನು ನಿಮ್ಮ ಮೊಗದಲ್ಲಿ ಮೂಡಿಸುವ ಈ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದು, ಇದು ನಿಮಗೆ ನಗುವನ್ನು ಮೂಡಿಸಿದರೆ ಅದಕ್ಕಿಂತ ಸಾರ್ಥಕತೆ ಮತ್ತೊಂದಿಲ್ಲ.

ಜೋಕ್ ೧

ಎರಡು ಸೊಳ್ಳೆಗಳು ಅಧ್ಯಯನ ಮಾಡುತ್ತಾ ಇದ್ದವು.

ಮೊದಲ ಸೊಳ್ಳೆ: ನಾನು ಮುಂದೆ ಡಾಕ್ಟರ್ ಆಗ್ತೇನೆ.
ಎರಡನೇ ಸೊಳ್ಳೆ: ನಾನು ಮುಂದೆ ಇಂಜಿನಿಯರ್ ಆಗ್ತೇನೆ.

ಅಷ್ಟರಲ್ಲಿ ಆ ಮನೆಯಲ್ಲಿದ್ದ ಅಜ್ಜಿ ಬಂದು ಮಾರ್ಟಿನ್ ಆನ್ ಮಾಡಿದ್ಲು..

ಎರಡು ಸೊಳ್ಳೆಗಳು ಥೂ ಈ ಮುದುಕಿ ನಮ್ಮ ಭವಿಷ್ಯದ ಮೇಲೆ ಕಲ್ಲು ಎಳೆದು ಬಿಟ್ಟಳು ಎಂದು ಅಲ್ಲಿಂದ ಹಾರ್ಕೊಂಡು ಹೋದವು.

ಜೋಕ್ ೨

ಟೀಚರ್ : ಯಾವ ವಸ್ತುವನ್ನು ಎಳೆದರೆ ಚಿಕ್ಕದಾಗುತ್ತದೆ‌.

ಗುಂಡ: ಸರ್ ಬೀಡಿ…

ಟೀಚರ್: ಏ ಗುಂಡ ನೀನು ಕೆಟ್ಟು ಕೂತಿದ್ಯ.. ಮೊದ್ಲು ನನ್ನ ಕ್ಲಾಸಿಂದ ಹೊರಗೆ ನಡೆ‌..

ಗುಂಡ: ಥ್ಯಾಂಕ್ಯೂ ಸರ್…

ಜೋಕ್: ೩

ಹೆಂಡತಿ: ರೀ ನಿಮ್ಮ ತಲೆ ಕೂದಲು ಇದೇ ತರ ಉದುರ್ತಾ ಇದ್ರೆ ನಾನು ನಿಮಗೆ ಡೈವೋರ್ಸ್ ಕೊಡ್ತೀ‌ನಿ..

ಗಂಡ(ಆಶ್ಚರ್ಯದಿಂದ): ಹೌದಾ! ನಿಜಾನಾ! ಈ ವಿಷಯ ಗೊತ್ತಿಲ್ದೇ ನಾನು ಕೂದಲು ಉದರೋದು ನಿಲ್ಲಲಿ ಅಂತ ಏನೇನೋ ಉಪಯೋಗಿಸಿ ಖರ್ಚು ಮಾಡಿಬಿಟ್ಟೆ…

ಜೋಕ್ : ೪

ಶಿಷ್ಯ: ಗುರುಗಳೇ ಯಾಕೋ ಬಲಗೈ ನವೆ ಆಗ್ತಿದೆ..

ಗುರು: ವತ್ಸ, ಲಕ್ಷ್ಮೀ ಆಗಮನ ಆಗುತ್ತೆ.

ಶಿಷ್ಯ: ಗುರುಗಳೇ ಯಾಕೋ ಬಲಗಡೆ ಕಾಲಲ್ಲಿ ನವೆ ಆಗ್ತಿದೆ.

ಗುರು: ವತ್ಸ ಪ್ರಯಾಣದ ಯೋಗ ಸಿಗುತ್ತೆ.

ಶಿಷ್ಯ: ಗುರುಗಳೇ ಯಾಕೋ ಹೊಟ್ಟೆ ಮೇಲೆ ನವೆ ಆಗ್ತಿದೆ‌.

ಗುರು: ವತ್ಸ, ಪುಷ್ಕಳ ಭೋಜನ ಪ್ರಾಪ್ತಿ ಆಗುತ್ತೆ.

ಶಿಷ್ಯ: ಗುರುಗಳೇ ಯಾಕೋ ಕುತ್ತಿಗೆ ಮೇಲೆ ನವೆ ಆಗ್ತಿದೆ‌

ಗುರು: ದರಿದ್ರವನೇ ದೂರ ಹೋಗು, ನಿನಗೆ ಕಜ್ಜಿ ತುರಿಕೆ ರೋಗ ಇದೆ…

ಜೋಕ್: ೫

ಗುಂಡನ ಅಜ್ಜಿ ಸತ್ತು ಹೋದ್ಲು.. ಅಂತಿಮ ದರ್ಶನಕ್ಕೆ ಜನ ಬಂದ್ರು.‌.

ಒಬ್ಬ: ಅಜ್ಜಿ ನನ್ನ ಕೂಡಾ ಜೊತೇಲೆ ಕರ್ಕೊಂಡು ಹೋಗೋದಲ್ವಾ..

ಇನ್ನೊಂದಿಬ್ರು: ಅಜ್ಜಿ ನಮ್ಮನ್ನು ಯಾಕೆ ಬಿಟ್ಟು ಹೋದೆ.. ನಮ್ಮನ್ನೂ ಕೂಡಾ ಕರ್ಕೊಂಡು ಹೋಗೋದಲ್ವಾ….

ಗುಂಡ: ಮುಚ್ರೀ ಬಾಯಿ ಸಾಕು, ಅಜ್ಜಿ ಏನು ಬುಲೇರೋ ದಲ್ಲಿ ಹೋಗಿದ್ದಾಳಾ??

ಜೋಕ್ : ೬

ಒಬ್ಬ ಹುಚ್ಚ ಖಾಲಿ ಪೇಪರ್ ಗೆ ಮತ್ತೆ ಮತ್ತೆ ಮುತ್ತು ಕೊಡ್ತಾನೇ ಇದ್ದ..

ಎರಡನೇ ಹುಚ್ಚ : ಏನದು ಅಷ್ಟೊಂದು ಮುತ್ತು ಕೊಡ್ತಾ ಇದ್ಯಾ??

ಮೊದಲನೆಯ ಹುಚ್ಚ: ಇದಾ, ಲವ್ ಲೆಟರ್ ಕಣೋ..

ಎರಡನೆಯ ಹುಚ್ಚ: ಲವ್ ಲೆಟರಾ ಹಾಗಾದ್ರೆ ಫುಲ್ ಖಾಲಿ ಇದೆ, ಒಂದಕ್ಷರ ಕೂಡಾ ಇಲ್ಲ ಇದ್ದಲ್ಲಿ…‌

ಮೊದಲನೇ ಹುಚ್ಚ: ಅಯ್ಯೋ, ನನಗೂ ನನ್ನವಳಿಗೂ ಜಗಳ ಆಗಿದೆ ಅದಕ್ಕೆ ಮಾತಿಲ್ಲ‌…

ಜೋಕ್: ೭

ಪಾರ್ಕ್ ನಲ್ಲಿ ಒಬ್ಬ ಸುಂದರವಾದ ಹುಡುಗಿ ಒಂಟಿಯಾಗಿ ಹೋಗ್ತಾ ಇದ್ಲು, ಅದನ್ನು ಗುಂಡ ನೋಡಿದ..

ಗುಂಡ ಕೂಡಲೇ ಕೈಯಲ್ಲಿ ಹೂವನ್ನು ಹಿಡಿದು ಅವಳ ಹಿಂದೆ ಹೊರಟ..

ಹುಡುಗಿ : ಏಯ್ ಹುಷಾರು ಹಿಂದೆ ನಮ್ಮ ಅಮ್ಮ ಬರ್ತಾ ಇದ್ದಾರೆ…

ಗುಂಡ: ಹೇ, ಡೋಂಟ್ ವರಿ, ನಮ್ಮ ಕುಟುಂಬಾನೇ ಪ್ರೇಮಿಗಳ ಕುಟುಂಬ…

ನಮ್ಮಪ್ಪ ನಿಮ್ಮ ಅಮ್ಮ ಹಿಂದೇನೇ ಬರ್ತಾ ಇದ್ದಾರೆ.