ಭವಿಷ್ಯ ನುಡಿದ ಮೊಹಮ್ಮದ್ ಕೈಫ್, ಈ ಟೀಮ್ ಗೆಲ್ಲಲಿದೆಯಂತೆ 2020ರ IPL ಕಪ್!
ತಮ್ಮ ಕ್ರಿಕೆಟ್ ಜೀವನದಲ್ಲಿ ಮೋಹಮ್ಮದ್ ಕೈಫ್ ಅವರು ಉತ್ತಮ ಬ್ಯಾಟ್ಸ್ಮನ್ ಜೊತೆಗೆ ಅತ್ಯುತ್ತಮವಾದ ಫೀಲ್ಡರ್ ಆಗಿದ್ದರು. ಸದ್ಯಕ್ಕೆ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಐಪಿಎಲ್ ನಲ್ಲಿ ಇಲ್ಲಿಯವರೆಗೆ ದೆಹಲಿ ತಂಡವು ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಆದರೆ ಸದ್ಯದ ಸೀಸನ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ಗೆಲ್ಲುವ ಎಲ್ಲಾ ಗುಣಗಳನ್ನು ಹೊಂದಿದೆ ಎಂದು ಈ ತಂಡದ ಸಹಾಯಕ ಕೋಚ್ ಆದ ಮಹಮದ್ ಕೈಫ್ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಈ ಟೂರ್ನಮೆಂಟ್ ಗೆ ಸಂಬಂಧಿಸಿ ದೆಹಲಿ ಕ್ಯಾಪಿಟಲ್ಸ್ ತಂಡದ ಎಲ್ಲ ಆಟಗಾರರು ತುಂಬಾ ಧನಾತ್ಮಕವಾಗಿದ್ದಾರೆ.
ಕೈಫ್ ಅವರು ಒಂದು ನ್ಯೂಸ್ ಏಜೆನ್ಸಿ ಜೊತೆಗೆ ನೀಡಿದ ಸಂದರ್ಶನದಲ್ಲಿ ತಂಡದ ಬಲದ ಬಗ್ಗೆ ಹೇಳಿದ್ದಾರೆ. ತಂಡದಲ್ಲಿರುವ ಆಟಗಾರರು ಉತ್ಸುಕತೆ ಯಲ್ಲಿದ್ದಾರೆ.
ಈ ಪಂದ್ಯಗಳಲ್ಲಿ ಆಟಗಾರರಿಗೆ ತುಂಬಾ ಕಠಿಣವಾದ ಪರಿಸ್ಥಿತಿಗಳಿಗೆ ಎದುರಾಗಬೇಕಾಗಿದೆ. ಏಕೆಂದರೆ ಪ್ರತಿಯೊಬ್ಬ ಆಟಗಾರ ಅನೇಕ ನಿಯಮಗಳ ಪಾಲನೆ ಮಾಡಬೇಕಾಗಿದೆ.
ಕೊರನದಿಂದಾಗಿ ಆಟಗಾರರ ಮತ್ತು ಸಪೋರ್ಟ್ ಸ್ಟಾಫ್ ದ ಅನೇಕ ಟೆಸ್ಟಗಳನ್ನು ಮಾಡಲಾಗುತ್ತಿದೆ.
ಇಷ್ಟೆಲ್ಲಾ ಆದರೂ ಕೈಫ್ ಹೇಳುತ್ತಾರೆ, ಈ ವರ್ಷದ ಐಪಿಎಲ್ ಆಯೋಜನೆಯನ್ನು ಮಾಡಿದ್ದಕ್ಕಾಗಿ ವ್ಯವಸ್ಥಾಪಕ ಮಂಡಳಿಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಇವರು ಹೇಳುವ ಹಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ತುಂಬಾ ಉತ್ತಮವಾದ ಹಾಗೂ ಎಲ್ಲ ರೀತಿಯ ಸಂತುಲನವನ್ನು ಕಾಯ್ದುಕೊಂಡ ತಂಡವಾಗಿದೆ. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ವರ್ಷದ ಐಪಿಎಲ್ ಕಿರೀಟವನ್ನು ಧರಿಸುವ ಅವರ ಫೇವರಿಟ್ ತಂಡ ಎಂದಿದ್ದಾರೆ. ಈ ತಂಡದಲ್ಲಿಯ ಅನುಭವಿಗಳಾದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಸಿಮ್ರಾನ್ ಹೆಟ್ಮೈಯರ್, ಅಲೆಕ್ಸ್ ಕ್ಯಾರಿ ಇಂತಹ ದಿಗ್ಗಜರಿಂದ ಬಲಗೊಂಡಿದೆ. ಹಾಗಾಗಿ ಈ ವರ್ಷದ ಐಪಿಎಲ್ ತಮ್ಮ ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ಗೆಲ್ಲುವುದು ಎಂಬ ಭರವಸೆಯನ್ನು ವ್ಯಕ್ತ ಮಾಡಿದ್ದಾರೆ.

ಐಪಿಎಲ್ ಮ್ಯಾಚ್ ಗಳಿಗೂ ಮುನ್ನ ಕೆಲವು ಅಭ್ಯಾಸ ಪಂದ್ಯಗಳಿಗೂ ಅವಕಾಶವನ್ನು ಕೊಡಬೇಕಾಗಿತ್ತು ಎಂಬ ವಿಚಾರವನ್ನು ಸಹಿತ ಈ ಸಂದರ್ಭದಲ್ಲಿ ಕೈಫ್ ಅವರು ಹೊರಹಾಕಿದ್ದಾರೆ.