OMG! ಯಾವುದೇ ಭಯವಿಲ್ಲದೆ ಮೊಸಳೆಯ ತಲೆಯ ಮೇಲೆ ನಡೆದುಕೊಂಡು ಬರುತ್ತಿರುವ ಕೋಳಿ, ಕೋಳಿ ಕೆಳಗೆ ಇಳಿಯುತ್ತಲೇ ಮೊಸಳೆ… ನೋಡಿ ಈ Viral Video!
ಕೆಲವೊಂದು ವೀಡಿಯೋಗಳನ್ನು ನೋಡಿದಾಗ ತಕ್ಷಣಕ್ಕೆ ನಮಗೆ ಅದು ಒಂದು ಮೋಜಿನ ವೀಡಿಯೋ ಆಗಿಯೋ, ಒಂದು ಆಕರ್ಷಣೀಯ ವೀಡಿಯೋ ಆಗಿಯೋ ಅಥವಾ ಹಾಸ್ಯದ ವೀಡಿಯೋ ಆಗಿಯೋ ನಮ್ಮನ್ನು ಅವು ರಂಜಿಸಿರುತ್ತವೆ. ನಾವು ಅದನ್ನು ಶೇರ್ ಕೂಡಾ ಮಾಡುತ್ತೇವೆ. ಅದನ್ನು ನೋಡಿದವರು ಕೂಡಾ ಆ ವೀಡಿಯೋದಲ್ಲಿರುವ ಸನ್ನಿವೇಶವನ್ನು ತಮಗೆ ಹೇಗೆ ಅರ್ಥವಾಗುತ್ತದೋ ಹಾಗೆ ನೋಡಿ ಖುಷಿ ಪಡುತ್ತಾರೆ. ಆದರೆ ಕೆಲವೊಮ್ಮೆ ಹೀಗೆ ವೈರಲ್ ಆಗುವ ವೀಡಿಯೋಗಳು ನಮಗೆ ಮೊದಲ ಸಲ ನೋಡಿದಾಗ ಮನರಂಜನೆ ಎನಿಸಿದ್ದು ಎರಡು ಮೂರನೇ ಸಲ ನೋಡಿದಾಗ ಅಬ್ಬಾ ಎಂತಹ ವಿಶೇಷ ಇದು, ಇಲ್ಲೊಂದು ಪ್ರಾಣದ ವಿಷಯವೇ ಅಡಗಿತ್ತಲ್ಲಾ? ವಾವ್ ಎಂದೆಲ್ಲಾ ಉದ್ಗಾರ ಕೂಡಾ ತೆಗೆಯಬಹುದು.
ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ವೀಡಿಯೋ ಕೆಲವೇ ಸೆಕೆಂಡ್ ಗಳಿವೆ, ವೀಡಿಯೋ ನೋಡಿದ್ರೆ ಓಹ್ ಅನ್ಸುತ್ತೆ, ಅನಂತರ ಅಲ್ಲಿ ಆ ವೀಡಿಯೋಗೆ ಜೊತೆ ಹಾಕಿರೋ ಶೀರ್ಷಿಕೆ ಓದಿದಾಗ, ಜನರ ಕಾಮೆಂಟ್ ನೋಡಿದಾಗ ಹೌದಲ್ವಾ, ಈ ಸನ್ನಿವೇಶಕ್ಕೆ ಮತ್ತೊಂದು, ಮಗದೊಂದು ಆ್ಯಂಗಲ್ ಕೂಡಾ ಇದೆ ಎನಿಸಬಹುದು. ಮೊದಲಿಗೆ ವೈರಲ್ ಆಗಿರೋ ವೀಡಿಯೋದಲ್ಲಿ ಏನಿದೆ ಅಂತ ತಿಳಿಯೋಣ ಬನ್ನಿ. ಈ ವೀಡಿಯೋದಲ್ಲಿ ಒಂದು ಮೊಸಳೆ ನೀರಲ್ಲಿ ಮಲಗಿ, ನದಿ ಅಥವಾ ಕೊಳದ ದಂಡೆ ಕಡೆ ತಲೆ ಹಾಕಿದೆ. ಅದರ ತಲೆ ಮೇಲಿಂದ ನಡ್ಕೊಂಡು ಒಂದು ಕೋಳಿ ಯಾವುದೇ ಭಯ ಇಲ್ಲದೆ ದಡಕ್ಕೆ ಬರುತ್ತೆ.

ಅದು ದಡಕ್ಕೆ ಬಂದ ಕೂಡಲೇ ಮೊಸಳೆ ತನ್ನ ಬಾಯನ್ನು ಅಗಲವಾಗಿ ತೆರೆದು ಬಹುಶಃ ಕೋಳಿಯನ್ನು ಹಿಡಿಯೋ ಪ್ರಯತ್ನ ಮಾಡಿದೆ ಆದರೆ ಅದು ಆಗಿಲ್ಲ. ಫಾರೆಸ್ಟ್ ಆಫೀಸರ್ ಸುಸಾಂತ್ ನಂದಾ ಅವರು ಶೇರ್ ಮಾಡಿರೋ ಈ ವೀಡಿಯೋ ನೋಡಿದಾಗ ನಿಜವಾಗಿಯೂ ಎಂತ ವಂಡರ್ ಫುಲ್ ವೀಡಿಯೋ ಇದು ಅನಿಸುತ್ತೆ. ಕೋಳಿ ಅದರ ತಲೆ ಮೇಲೆ ನಡೆದು ಬರ್ತಾ ಇದ್ರೂ ಸುಮ್ಮನೆ ಇದ್ದ ಮೊಸಳೆ ಒಮ್ಮೆಲೆ ತನ್ನ ಬಾಯಿಯನ್ನು ತೆರೆದಿದ್ದು ಕೋಳಿಯನ್ನು ಹಿಡಿಯುವುದಕ್ಕೋ ಅಥವಾ ಮತ್ತೊಮ್ಮೆ ಇಂತಹ ಪ್ರಯತ್ನಕ್ಕೆ ಕೈ ಹಾಕಬೇಡವೆಂದು ಎಚ್ಚರಿಕೆ ನೀಡುವುದಕ್ಕೋ ತಿಳಿದಿಲ್ಲ.
ಒಟ್ಟಾರೆ ಬಿಂದಾಸ್ ಆಗಿ ಮೊಸಳೆ ಮೇಲೆ ನಡೆದು ಬಂದ ಕೋಳಿಯ ಈ ವೀಡಿಯೋಗೆ ಸುಸಾಂತ್ ಅವರು ಕ್ಷಮಾಪಣೆ ಎನ್ನುವುದು ಯಾವಾಗಲೂ ನಿನಗೆ ಸಿಗಬಹುದು ಆದರೆ ಅವಕಾಶಗಳಲ್ಲ ಎಂದಿದ್ದಾರೆ. ಅಂದರೆ ಬಹುಶಃ ಕೋಳಿ ಮತ್ತೊಮ್ಮೆ ಇಂತಹುದೇ ತಪ್ಪು ಮಾಡಿದರೆ ಪ್ರಾಣವನ್ನು ಉಳಿಸಿಕೊಳ್ಳುವ ಅವಕಾಶ ಸಿಗದೇ ಇರಬಹುದು ಎನ್ನುವ ಸೂಚನೆಯನ್ನು ನೀಡಿದ್ದಾರೆ. ಹೌದಲ್ಲವೇ ಮಿತ್ರರೇ ತಿಳಿದೋ, ತಿಳಿಯದೆಯೋ ಜೀವನದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡು ಪಾರಾದ ಮೇಲೆ ಮತ್ತೊಮ್ಮೆ ಅದೇ ತಪ್ಪು ಮಾಡಬಾರದಲ್ವೇ?
Excuses will always be there for you,
— Susanta Nanda IFS (@susantananda3) August 29, 2020
Opportunities won’t… pic.twitter.com/f7IqZVmH2r
ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಬಹುಶಃ ಮೊಸಳಗೆ ವಿರಕ್ತಿ ಬಂದಿದೆ ಎಂದೂ, ಎಂತಹಾ ಗ್ರೇಟ್ ಎಸ್ಕೇಪ್ ಎಂದೂ, ಬಹುಶಃ ತಾನು ಮೊಸಳೆಯ ಬಾಯಿಯ ಮೇಲೆ ನಡೆದು ಬರುತ್ತಿದ್ದೇನೆಂದು ಆ ಕೋಳಿಗೆ ತಿಳಿದಿರಲಿಲ್ಲವೇನೋ, ಅದೃಷ್ಟಶಾಲಿ ಕೋಳಿ ಅದು ಎಂದೂ, ಮೊಸಳೆ ಬಾಯಿ ತೆರೆದಾಗ ಭಯವಾಗಿತ್ತೆಂದು ಎಂದೂ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈಗಾಗಲೇ 11 ಸಾವಿರಕ್ಕಿಂತ ಅಧಿಕ ವೀಕ್ಷಣೆಗಳನ್ನು ಪಡೆದಿರುವ ಈ ವೀಡಿಯೋ ಸಾವಿರಕ್ಕಿಂತ ಅಧಿಕ ಲೈಕ್ ಗಳನ್ನು ಕೂಡಾ ಪಡೆದಿದೆ.