ಅಬ್ಬಾ! ಕಾರಿನಿಂದ ಹಿಡಿದು ಟ್ರಕ್ ಗಳ ವರೆಗೆ ಹಾದು ಹೋಗಬಲ್ಲ 50 ಸಾವಿರ ಬಿದಿರುಗಳಿಂದ ತಯಾರಿಸಿದ ಅಸಾಮಾನ್ಯ ಬ್ರಿಜ್!
ಜಗತ್ತಿನಲ್ಲಿಯ ಅನೇಕ ನೈಸರ್ಗಿಕ ಅದ್ಭುತಗಳ ಬಗ್ಗೆ ಕೇಳಿದ್ದೇವೆ. ಹಾಗೆಯೇ ಮಾನವನಿರ್ಮಿತ ಅದ್ಭುತಗಳೇನು ಕಡಿಮೆ ಇಲ್ಲ. ಈ ಲೇಖನದಲ್ಲಿ ಮಾನವನಿಂದ ತಯಾರಾದ ಎರಡು ದ್ವೀಪಗಳನ್ನು ಜೋಡಿಸುವ ಬಿದಿರಿನ ಬಾಂಬುಗಳಿಂದ ತಯಾರಾದ ಅದ್ಭುತ ಸೇತುವೆಯ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಈ ಬ್ರಿಜ್ ದ ಇನ್ನೊಂದು ವಿಶೇಷತೆ ಏನೆಂದರೆ, ಮಳೆಗಾಲ ಆರಂಭವಾಗುವ ಮುನ್ನ 3300 ಫೀಟ್ ಉದ್ದದ ಈ ಸೇತುವೆಯನ್ನು ಪೂರ್ಣತ: ಬಿಚ್ಚಿ ಬೇರೆ ಇಡಲಾಗುವುದು. ಮಳೆಗಾಲ ಮುಗಿದ ತಕ್ಷಣ ಈ ಸೇತುವೆಯನ್ನು ಮತ್ತೆ ತಯಾರಿಸಿ ನಿಲ್ಲಿಸಲಾಗುತ್ತದೆ.

ಯಾವುದು ಈ ಸೇತುವೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿರಬಹುದು ಅಲ್ವಾ? ಹಾಗಾದರೆ ತಿಳಿದುಕೊಳ್ಳಿ ಈ ಸೇತುವೆಯ ವಿಶೇಷತೆಗಳ ಬಗ್ಗೆ.
ಈ ಸೇತುವೆ ಕಾಂಬೋಡಿಯಾ ದೇಶದಲ್ಲಿ ಬರುತ್ತದೆ. ಎರಡು ದ್ವೀಪಗಳನ್ನು ಜೋಡಿಸುವ ಈ ಸೇತುವೆ ತಯಾರಿಸಲು 50 ಸಾವಿರ ಬಿದಿರಿನ ಬಾಂಬುಗಳನ್ನು ಉಪಯೋಗಿಸಲಾಗುತ್ತದೆ. 1986 ರಿಂದ ಇಲ್ಲಿಯವರೆಗೆ ಇದೇ ರೀತಿಯಾಗಿ ಈ ಸೇತುವೆಯನ್ನು ಪ್ರತಿವರ್ಷ ನಿರ್ಮಿಸುವುದು ಮತ್ತು ಮಳೆಗಾಲದ ಮುನ್ನ ಬಿಚ್ಚುವುದು ನಡೆದುಕೊಂಡೇ ಬಂದಿದೆ. ಈ ಸೇತುವೆ ಕಾಂಬೋಡಿಯ ಪ್ರಾಂತದಲ್ಲಿಯ ಕಾಮಪೊಂಗ್ ಚಾಮ್ ಮತ್ತು ಕೊಹ್ ಪೆನ್ ಎರಡು ದೀಪಗಳನ್ನು ಜೋಡಿಸುವ ಮುಖ್ಯ ದಾರಿಯಾಗಿದೆ.
ಮೇ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಅದೃಶ್ಯವಾಗುತ್ತದೆ ಈ ಸೇತುವೆ.

ಮಳೆಗಾಲ ಬರುತ್ತಲೇ ಮೇ ತಿಂಗಳಿನಲ್ಲಿ ಈ ಸೇತುವೆಯನ್ನು ಬಿಚ್ಚಿ ಬೇರ್ಪಡಿಸುವ ಕಾರಣವೇನೆಂದರೆ, ಮಳೆಯಿಂದ ನದಿಯ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆಯು ಮುರಿದು ಹೋಗುವ ಅಥವಾ ನೀರಿನಲ್ಲಿ ಹರಿದು ಹೋಗುವ ಭಯವಿರುವುದರಿಂದ ಇದನ್ನು ಬಿಚ್ಚಿಡುತ್ತಾರೆ. ಮಳೆಗಾಲದ ಕಾಲಾವಧಿ ಮುಗಿದ ನಂತರ ನವೆಂಬರ್ ತಿಂಗಳಿನಲ್ಲಿ ಮತ್ತೆ ಈ ಸೇತುವೆಯನ್ನು ಅದೇ ಬಿದಿರಿನ ಬಾಂಬುಗಳಿಂದ ಪುನರ್ನಿರ್ಮಾಣ ಮಾಡುತ್ತಾರೆ. ಈ ಸೇತುವೆಯನ್ನು ಸಂಪೂರ್ಣವಾಗಿ ಬಿದಿರಿನಿಂದಲೇ ತಯಾರಿಸಲಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಭೀಮ್ ಗಳ ಉಪಯೋಗವನ್ನು ಮಾಡಿದ್ದಾರೆ. ಹೀಗಾಗಿ ಈ ಸೇತುವೆ ತುಂಬಾ ಸುರಕ್ಷಿತವಾಗಿದೆ ಎಂದು ಪ್ರವಾಸಿಗರು ಈ ಸೇತುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ವಿಡಿಯೋ ನೋಡಿ…..
ಪ್ರವಾಸಿಗರ ಇಷ್ಟವಾದ ತಾಣ.
ಕಾಂಬೋಡಿಯಾಗೆ ಬರುವ ಪ್ರವಾಸಿಗರ ತುಂಬಾ ಇಷ್ಟವಾದ ತಾಣ ಈ ಬಿದಿರಿನ ಸೇತುವೆಯಾಗಿದೆ. ಇಲ್ಲಿ ಬರುವವರು ಈ ಸೇತುವೆಗೆ ಬೇಟಿ ಕೊಟ್ಟೆ ಕೊಡುತ್ತಾರೆ. ಇಲ್ಲಿ ಸುತ್ತಾಡಲು ಬರುವವರಿಗೆ 100 ಕಂಬೋಡಿಯನ್ ರಿಯಲ್ ಕೊಡಬೇಕಾಗುತ್ತದೆ. ಹೊರಗಿನ ದೇಶದವರಿಗೆ ಇದರ 40 ಪಟ್ಟು ಹೆಚ್ಚಿಗೆ ಹಣವನ್ನು ಕೊಡಬೇಕಾಗುವುದು. ಈ ಸೇತುವೆ ಹೆಚ್ಚು ತೂಕವನ್ನು ಸಹಿಸಿಕೊಳ್ಳಬಲ್ಲ ತುಂಬಾ ಮಜಬೂತಾದ ಸೇತುವೆ ಆಗಿದೆ. ಇದರ ಮೇಲಿಂದ ಬೈಕ್ ಗಳ ಜೊತೆಗೆ ಕಾರುಗಳು ಮತ್ತು ಟ್ರಕ್ ಗಳು ಸಹಿತ ತಿರುಗಾಡುತ್ತವೆ.