ಮನೆಯ ಹತ್ತಿರ ಬಂದು ಆನೆ ಮಾಡಿದ ಕೆಲಸಕ್ಕೆ ಬಾಯಿತುಂಬಾ ಹೊಗಳಿದ ನೆಟ್ಟಿಗರು! ನೋಡಿ ಈ Viral Video!
ಕೆಲವೊಮ್ಮೆ ಕೆಲವೊಂದು ವೀಡಿಯೋಗಳು ಬಹಳ ಬೇಗ ಎಲ್ಲರ ಗಮನವನ್ನು ಸೆಳೆಯುತ್ತವೆ. ಅದರಲ್ಲೂ ಅದು ಪ್ರಾಣಿಗಳ ವೀಡಿಯೋಗಳೇನಾದರೂ ಆದರೆ ಬಹಳ ಬೇಗ ಜನರ ಗಮನ ಸೆಳೆಯುತ್ತವೆ. ಮೂಕ ಪ್ರಾಣಿಗಳು ಅಮಾಯತೆಯಿಂದಾನೋ, ಮುಗ್ಧತೆ ಇಂದಾನೋ ಅಥವಾ ಅವುಗಳ ತುಂಟಾಟಗಳೋ ನೋಡುವವರ ಮನಸ್ಸನ್ನು ಗೆದ್ದು ಬಿಡುತ್ತವೆ. ಈಗ ನಾವು ಹೇಳೋಕೆ ಹೊರಟಿರೋ ವೀಡಿಯೋ ಕೂಡಾ ಅಂತದ್ದೇ, ಆದರೆ ಈ ವೀಡಿಯೋದಲ್ಲಿ ಪ್ರಾಣಿಗಳು ಯಾವುದೇ ತುಂಟಾಟವನ್ನೋ ಅಥವಾ ಚೇಷ್ಟೆಯನ್ನೋ ಮಾಡಿಲ್ಲ, ಬದಲಾಗಿ ಇಲ್ಲಿ ಮೂಕ ಪ್ರಾಣಿಯೊಂದು ಸಾಮಾಜಿಕ ಕಳಕಳಿಯನ್ನು, ಪರಿಸರದ ಬಗ್ಗೆ ತನ್ನ ಕಾಳಜಿಯನ್ನು ತೋರಿರುವುದು ನಂಬಲು ಸಾಧ್ಯವಾಗದೇ ಇರಬಹುದಾದರೂ ಈ ವೀಡಿಯೋ ನಮ್ಮನ್ನು ನಂಬುವಂತೆ ಮಾಡುತ್ತಿದೆ.
ಪರ್ವೀನ್ ಕಾಸ್ವಾನ್ ಎನ್ನುವ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಒಂದು ವಿಶೇಷವಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ನಮಗೆ ಗಜರಾಜ ಅಥವಾ ಆನೆಯೊಂದರ ಪರಿಸರ ಕಾಳಜಿ ಹಾಗೂ ಸ್ವಚ್ಚತೆಯ ಬಗ್ಗೆ ಅದಕ್ಕೆ ಇರುವ ಅವಗಾಹನೆ ನೋಡಬಹುದಾಗಿದ್ದು, ಆನೆಯು ಮಾಡುತ್ತಿರುವ ಕೆಲಸವನ್ನು ನೋಡಿದರೆ ನಾವು ಕೂಡಾ ವಾರೆವ್ಹಾ ಎನ್ನದೇ ಇರುವುದು ಅಸಾಧ್ಯವೆಂದು ಒಮ್ಮೆ ವೀಡಿಯೋ ನೋಡಿದರೆ ತಿಳಿಯುತ್ತದೆ. ವೀಡಿಯೋ ಹಂಚಿಕೊಂಡ ಅಧಿಕಾರಿಯು ಅದರ ಜೊತೆಗೆ ಈ ಆನೆಯು ಮಸ್ಕಟ್ ನಲ್ಲಿ ಸ್ವಚ್ಛ ಭಾರತ ಮಾಡುತ್ತಿರುವ ಹಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೋದಲ್ಲಿ ನಾವು ನೋಡಿದಾಗ ಒಂದು ರಾಷ್ಟ್ರೀಯ ಉದ್ಯಾನದಲ್ಲಿ ಆನೆಯೊಂದು ಬಂದು ಅಲ್ಲೇ ಸುತ್ತ ಮುತ್ತ ಬಿದ್ದಿರುವ ಕಸವನ್ನು ತನ್ನ ಸೊಂಡಿಲಿನಿಂತ ಎತ್ತಿಕೊಂಡು ಕಸದ ಬುಟ್ಟಿಗೆ ಹಾಕುತ್ತಿದೆ. ವೀಡಿಯೋ ನೋಡಿದಾಗ ಮನುಷ್ಯರಿಗೆ ಇರದ ಒಂದು ನೈತಿಕ ಜವಾಬ್ದಾರಿಯನ್ನು ಪ್ರಾಣಿಯು ಸಾರಿ ಹೇಳುತ್ತಿರುವಂತೆ ಕಾಣುತ್ತದೆ. ನಾಗರಿಕರು ಎನಿಸಿಕೊಂಡವರು, ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು ಎನ್ನುವ ಜ್ಞಾನ ಇರುವ ಮನುಜರು ಹೀಗೆ ಎಲ್ಲೆಂದರಲ್ಲಿ ಬಿಸಾಡಿ ಹೋದ ಕಸವನ್ನು ಒಂದು ವನ್ಯ ಮೃಗವು ಎತ್ತಿ ಕಸದ ತೊಟ್ಟಿಗೆ ಹಾಕುತ್ತಿರುವುದು ಒಂದು ಸಲ ಎಲ್ಲರನ್ನೂ ಕೂಡಾ ಆಲೋಚಿಸುವ ಹಾಗೆ ಮಾಡುವುದು ಕೂಡಾ ವಾಸ್ತವ.
ವಿಡಿಯೋ ನೋಡಿ….
This elephant should be mascot of Swatch Bharat. A forward. pic.twitter.com/1oOeoe1MA9
— Parveen Kaswan, IFS (@ParveenKaswan) August 28, 2020
ಆಗಸ್ಟ್ 28 ರಂದು ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಮೂರ ಲಕ್ಷ ಎಪ್ಪತ್ತು ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ ನೆಟ್ಟಿಗರು. ಅಲ್ಲದೇ 35 ಸಾವಿರ ದಾಟಿದ ಲೈಕ್ ಗಳು, 6 ಸಾವಿರ ದಾಟಿದ ರೀಟ್ವೀಟ್ ಗಳೊಂದಿಗೆ ಈ ವೀಡಿಯೋ ಜಬರ್ದಸ್ತ್ ಆಗಿ ವೈರಲ್ ಕೂಡಾ ಆಗುತ್ತಿದೆ. ವೀಡಿಯೋ ನೋಡಿದವರು ಕೂಡಾ ಆನೆಯ ಪರಿಸರ ಕಾಳಜಿ, ಸ್ವಚ್ಚತೆಯ ಬಗ್ಗೆ ಅದಕ್ಕಿರುವ ಅರಿವಿನ ಕುರಿತಾಗಿ ಮೆಚ್ಚುಗೆಯನ್ನು ತಮ್ಮ ಪ್ರತಿಕ್ರಿಯೆಗಳ ಮೂಲಕ ತೋರಿಸುತ್ತಿದ್ದಾರೆ. ಕೆಲವರು ಭೂಮಿಯ ಮೇಲೆ ಮನುಷ್ಯ ಮತ್ತು ಡಾಲ್ಫಿನ್ ಗಳ ನಂತರ ಆನೆಗಳೇ ಬುದ್ಧಿವಂತ ಜೀವಿಗಳು ಎಂದು ಕೂಡಾ ಹೇಳಿದ್ದಾರೆ.