Viral Video: ಹೆಬ್ಬಂಡೆಯನ್ನು ‘ಯುಕ್ತಿಯಿಂದ’ ಕೆಲವೇ ಕ್ಷಣಗಳಲ್ಲಿ ಒಡೆದು ಎರಡು ತುಂಡು ಮಾಡಿದ ಯುವಕ; ಯುವಕನ ಬುದ್ಧಿವಂತಿಕೆ ನೋಡಿ ‘ಜಿನಿಯಸ್’ ಎಂದ ಜನ!

ಶಕ್ತಿಗಿಂತ ಯುಕ್ತಿ ಮೇಲು ಎನ್ನುವ ಮಾತನ್ನು ನಾವೆಲ್ಲರೂ ಕೂಡಾ ಕೇಳಿಯೇ ಇದ್ದೇವೆ. ಇದರರ್ಥ ಕೇವಲ ಶಕ್ತಿಯಿಂದಲೇ ಎಲ್ಲಾ ಕೆಲಸಗಳನ್ನು ಮಾಡುವ ಅಗತ್ಯ ಇರುವುದಿಲ್ಲ, ಕೆಲವೊಮ್ಮೆ ಬುದ್ಧಿಯನ್ನು ಬಳಸುವುದರಿಂದ, ಮಾಡುವ ಕೆಲಸದಲ್ಲಿ ಕೌಶಲವನ್ನು ಪ್ರದರ್ಶ‌ನ ಮಾಡುವುದರಿಂದ ಹಾಗೂ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ನಾವು ಮಾಡುವ ಕೆಲಸವನ್ನು ಮತ್ತಷ್ಟು ಆಸಕ್ತಿಕರ, ಶ್ರಮವನ್ನು ಕಡಿಮೆ ಮಾಡುವ ಹಾಗೂ ಸಮಯವನ್ನು ಕೂಡಾ ಉಳಿತಾಯ ಮಾಡುವ ಅವಕಾಶಗಳು ಇರುತ್ತವೆ. ಆದರೆ ಇದನ್ನು ಅರಿಯದೇ ಅನೇಕರು ಹೆಚ್ಚಾಗಿ ಶ್ರಮವನ್ನೇ ನಂಬಿ, ಕಠಿಣ ಪರಿಶ್ರಮದಿಂದ ತಮ್ಮ ಶಕ್ತಿಯನ್ನೆಲ್ಲಾ ಬಳಸಿ ಕೆಲಸಗಳನ್ನು ಮಾಡುವುದೂ ಉಂಟು.

ಸೋಶಿಯಲ್ ಮಿಡಿಯಾದಲ್ಲೊಂದು ವೀಡಿಯೋ ಎಲ್ಲರ ಗಮನವನ್ನು ಸೆಳೆದಿದ್ದು, ಮಾಡುವ ಕೆಲಸದಲ್ಲಿ ಕೌಶಲವನ್ನು ಉಳ್ಳವನು ಹೇಗೆ ತನ್ನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ಚಾಕಚಕ್ಯತೆಯಿಂದ ನಿರ್ವಹಿಸುತ್ತಾನೆ ಎಂಬುದನ್ನು ಈ ವೀಡಿಯೋ ಮೂಲಕ ನಾವು ಕೂಡಾ ನೋಡಬಹುದಾಗಿದೆ. ಸಾಮಾನ್ಯವಾಗಿಯೇ ದೊಡ್ಡ ಬಂಡೆಯನ್ನು ಒಡೆಯಬೇಕೆಂದರೆ ಅಥವಾ ಕತ್ತರಿಸಬೇಕೆಂದರೆ ಕಾರ್ಮಿಕರು ಅದನ್ನು ಒಡೆಯುವ ಸಾಮಗ್ರಿಗಳನ್ನು ಬಳಸಿ, ಅದನ್ನು ಒಡೆದು ಕತ್ತರಿಸುವ ಪ್ರಯತ್ನವನ್ನು ಮಾಡುತ್ತಾರೆ. ಇದು ಹೆಚ್ಚು ಶ್ರಮದಾಯಕ ಹಾಗೂ ಒಡೆಯುವಾಗ ಏಳುವ ಧೂಳು, ಕೆಲವೊಮ್ಮೆ ಬಂಡೆಯು ಚೂರುಗಳಾಗುವುದು ಕೂಡಾ ಸಂಭವಿಸುತ್ತದೆ.

ಆದರೆ ವೈರಲ್ ಆಗಿರುವ ವೀಡಿಯೋದಲ್ಲಿ ಬಂಡೆಯನ್ನು ಕತ್ತರಿಸುವ ಬದಲಾಗಿ ಯುವಕ ಅದನ್ನು ಬಹಳ ಉತ್ತಮವಾದ ವಿಧಾನ ಅನುಸರಿಸಿ ಎರಡಾಗಿ ವಿಭಜಿಸಿದ್ದಾರೆ. ಉಳಿಗಳನ್ನು ಬಂಡೆಗೆ ಒಂದರ ಮೇಲೊಂದರಂತೆ ಒಡೆದು, ಅನಂತರ ತನ್ನ ಬಳಿಯಿರುವ ದೃಢ ಹಾಗೂ ಭಾರವಾದ ಸುತ್ತಿಗೆಯೊಂದಿಗೆ, ತನ್ನ ಬಲವನ್ನು ಬಳಸಿ ಹೊಡೆದಾಗ ಬಂಡೆಯು ಚೂರು ಚೂರುಗಳಾಗದೆ ಎರಡು ಭಾಗವಾಗಿ ವಿಭಜಿಸಲ್ಪಡುತ್ತವೆ‌. ವೀಡಿಯೋ ನೋಡಿದಾಗ ನಮಗೂ ಕೂಡಾ ಹೌದಲ್ಲವೇ? ಎಂತಹ ಟೆಕ್ನಿಕ್ ಇದು, ಬಹಳ ಚೆನ್ನಾಗಿದೆ ಅನಿಸುತ್ತದೆ.

ನೋಡಿ ಈ ಸಖತ್ ವಿಡಿಯೋ

ಆಗಸ್ಟ್ 28 ರಂದು ಯೂಟ್ಯೂಬ್ ನಲ್ಲಿ ಕತ್ತರಿಸುವುದಕ್ಕಿಂತ, ವಿಭಜನೆ ಮಾಡುವುದು ಉತ್ತಮ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಮೂವತ್ತು ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ವೀಡಿಯೋ ನೋಡಿದ ಮಂದಿ ತಮ್ಮ ಪ್ರತಿಕ್ರಿಯೆ ಗಳಲ್ಲಿ ಬಂಡೆ ಹೊಡೆಯುವ ಕಾರ್ಮಿಕನ ಬುದ್ಧಿವಂತಿಕೆಯನ್ನು ಮೆಚ್ಚಿದ್ದಾರೆ, ಕೆಲವರು ಎಂತಹ ಸರಳ ವಿಧಾನ ಇದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಕೆಲವರು ಇಂತಹ ವೀಡಿಯೋಗಳನ್ನು ಎಷ್ಟು ಸಲ ನೋಡಿದರೂ ಕೂಡಾ ಪ್ರತಿ ಸಲವೂ ಕೂಡಾ ಹೊಸದಾಗಿ ನೋಡಿದಂತೆಯೇ ಎನಿಸುತ್ತದೆ ಎಂದು ಹೇಳಿದ್ದಾರೆ.‌