ರಾಜಮಹಾರಾಜರ ಅರಮನೆಯಂತಿದೆ ಸುರೇಶ್ ರೈನಾ ಮನೆ! ಬೆಲೆ ಕೇಳಿದರೆ ‘ಅಬ್ಬಾ!’ ಎನ್ನುವಿರಿ!

ಯಶಸ್ವಿ ನಾಯಕ ಎಂಎಸ್ ಧೋನಿ ಯವರು ರಿಟೈರ್ ಆದ ನಂತರ ಅವರ ಜೊತೆಗೆ ಆಗಸ್ಟ್ 15 ರಂದೇ ಸುರೇಶ್ ರೈನಾ ಅವರು ಸಹ ಕ್ರಿಕೆಟ್ ನಿಂದ ಸನ್ಯಾಸತ್ವವನ್ನು ಸ್ವೀಕರಿಸಿದರು.

ಧೋನಿಯವರ ಆಪ್ತಮಿತ್ರರೆಂದೇ ಚಿರಪರಿಚಿತರಾಗಿರುವ ಸುರೇಶ್ ರೈನಾ ಅವರು ಮೂಲತ: ದೆಹಲಿ ಹತ್ತಿರದ ಗಾಜಿಯಾಬಾದ್ ಪಟ್ಟಣದವರು.

ಇಬ್ಬರು ಗೆಳೆಯರು ಏಕಕಾಲಕ್ಕೆ ಕ್ರಿಕೆಟ್ ನಿಂದ ನಿವೃತ್ತಿಯಾದ ಕಾರಣ ಸದ್ಯಕ್ಕೆ ಮೀಡಿಯಾದಲ್ಲಿ ಇಬ್ಬರು ಟ್ರೆಂಡಿಂಗ್ ನಲ್ಲಿದ್ದಾರೆ.

ಸುರೇಶ್ ರೈನಾ ಅವರು ದೆಹಲಿ, ಲಖನೌ ಮತ್ತು ಗಾಜಿಯಾಬಾದ್ ನಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಇವುಗಳಲ್ಲಿ ಗಾಜಿಯಾಬಾದ್ ನಲ್ಲಿರುವ ಸುಂದರವಾದ ಅರಮನೆಯಂತಹ ಮನೆಯ ಬೆಲೆಯ ಬಗ್ಗೆ ಈ ಲೇಖನದಲ್ಲಿ ಪ್ರಸ್ತಾಪಿಸಿದ್ದೇವೆ. ರೈನಾ ಅವರ ಈ ಮನೆ ಗಾಜಿಯಾಬಾದ್ ನಲ್ಲಿಯ ಅತ್ಯಂತ ಹಾಯ್ ಫಾಯ್ ಏರಿಯಾ ಎಂದು ಗುರುತಿಸಿಕೊಂಡ ‘ರಾಜನಗರ’ ಭಾಗದಲ್ಲಿದೆ.

ಗಾಜಿಯಾಬಾದ್ ನಲ್ಲಿರುವ ಈ ಅರಮನೆಯಂತಹ ಮನೆಯಲ್ಲಿ ಸುರೇಶ್ ರೈನಾ ಅವರು ತನ್ನ ತಾಯಿ, ತಂದೆ, ಹೆಂಡತಿ, ಮಕ್ಕಳು ಹೀಗೆ ತಮ್ಮ ತುಂಬು ಕುಟುಂಬದೊಂದಿಗೆ ಇರುತ್ತಾರೆ. ಮಾಧ್ಯಮ ಮೂಲಗಳ ಪ್ರಕಾರ ಸುರೇಶ್ ರೈನಾ ಅವರ ಈ ಮನೆಯ ಸದ್ಯದ ಬೆಲೆಯು 20 ಕೋಟಿ ರೂಪಾಯಿಗಳಷ್ಟು ಇದೆ ಎಂದು ಅಂದಾಜಿಸಲಾಗಿದೆ. 2017 ರಲ್ಲಿ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಈ ಮನೆಗೆ ಭೇಟಿಯನ್ನು ಕೊಟ್ಟಿದ್ದರು. ಸುರೇಶ್ ಅವರ ಲಿವಿಂಗ್ ರೂಮ್ ಹಳೆಯ ಕೌಟುಂಬಿಕ ನೆನಪುಗಳಿಂದ ಸಿಂಗರಿಸಲಾಗಿದೆ.

33 ವರ್ಷದ ಸುರೇಶ್ ರೈನಾ ಅವರು ಧೋನಿಯ ಜೊತೆಗೆ ಕ್ರಿಕೆಟ್ ನಿಂದ ಆಕಸ್ಮಿಕ ನಿವೃತ್ತಿಯನ್ನು ಘೋಷಿಸಿ ಎಲ್ಲರಿಗೂ ದಿಗ್ಭ್ರಮೆಗೊಳಿಸಿದರು. 2018 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಈಗ ಕಳೆದೆರಡು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿದ್ದಾರೆ. ಅವರ ವಯಸ್ಸಿನ ವಿಚಾರ ಮಾಡಲಾಗಿ ರೈನಾ ಅವರು ಬೇಗನೆ ಕ್ರಿಕೆಟ್ ನಿಂದ ದೂರವಾದರೂ ಎಂದು ಅನಿಸುತ್ತದೆ. ಹಾಗೆ ನೋಡಲಾಗಿ ಟೀಮ್ ಇಂಡಿಯಾದಲ್ಲಿ ಮತ್ತೆ ಮರಳಿ ಬರುವ ಸಲುವಾಗಿ ಸುರೇಶ್ ಅವರು ತುಂಬಾ ಪರಿಶ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ ಧೋನಿ ಅವರು ನಿವೃತ್ತಿ ಘೋಷಿಸಿದ ನಂತರ ಸುರೇಶ್ ರೈನಾ ಅವರು ಯಾವುದೇ ಪೂರ್ವಾಲೋಚನೆ ಮಾಡದೆ ನಿವೃತ್ತಿಯ ವಿಚಾರ ಬೇಗನೆ ತೆಗೆದುಕೊಂಡರೇನೊ ಎಂದು ಎನಿಸುತ್ತಿದೆ.