ಎರಡೂ ಕಣ್ಣು ಕಳೆದುಕೊಂಡ ಸಾಕು ನಾಯಿ ಡಿಕ್ಕಿ ಹೊಡೆದು ಗಾಯಗೊಳ್ಳಬಾರದೆಂದು ಮಾಲಿಕ್ ಮಾಡಿದ್ದೇನು? ನೋಡಿ ಈ Viral Video!
ಸಾಕು ಪ್ರಾಣಿಗಳೆಂದರೆ ಎಲ್ಲರಿಗೂ ಕೂಡಾ ಇಷ್ಟವೇ. ಆದರೆ ಕೆಲವರಿಗೆ ಅದು ಇಷ್ಟ ಮಾತ್ರವಲ್ಲ ಪ್ರೀತಿ ಕೂಡಾ ಆಗಿರುತ್ತದೆ. ತಾವು ಸಾಕಿದ ಪ್ರಾಣಿಗಳನ್ನು ಕೂಡಾ ತಮ್ಮ ಕುಟುಂಬದ ಸದಸ್ಯರಂತೆ ಅಮಿತವಾದ ಪ್ರೇಮವನ್ನು ತೋರುವ ಮಂದಿ ಎಲ್ಲಾ ಕಡೆ ಇದ್ದಾರೆ. ಸಾಮಾನ್ಯವಾಗಿ ಮನೆಯಲ್ಲಿ ನಮ್ಮವರಿಗೆ ಏನಾದರೂ ತೊಂದರೆಯೋ ಅಥವಾ ದೈಹಿಕ ಸಮಸ್ಯೆಯೋ ಆದರೆ ನಾವು ಅವರನ್ನು ಬಿಟ್ಟು ಬಿಡುವುದಿಲ್ಲ. ಬದಲಿಗೆ ಅವರ ಆರೈಕೆಯನ್ನು ಮಾಡುತ್ತೇವೆ. ಆದರೆ ಅದೇ ಸಮಸ್ಯೆ ಸಾಕು ಪ್ರಾಣಿಗಳಿಗೆ ಬಂದಾಗ ಕೆಲವರು ಅದನ್ನು ಅಸಹನೀಯ ಎಂದುಕೊಂಡು ಬಿಡುತ್ತಾರೆ. ಆದರೆ ಬಹಳ ವಿರಳವಾದರೂ ಕೂಡಾ ತಾವು ಸಾಕಿದ ಪ್ರಾಣಿಗಳಿಗೆ ಸಮಸ್ಯೆ ಎದುರಾದರೂ ಅವನ್ನು ಮಕ್ಕಳಂತೆ ಆರೈಕೆ ಮಾಡುವ ಹೃದಯವಂತರೂ ಕೂಡಾ ಇದ್ದಾರೆ.
ಇಂತಹುದೇ ಒಂದು ವೀಡಿಯೋ ನಿನ್ನೆ ತಾನೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ಈ ವೀಡೀಯೋವನ್ನು ಈಗಾಗಲೇ ಒಂದು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ವೀಡಿಯೋ ನೋಡಿದವರಿಗೆ ನಿಜಕ್ಕೂ ಕೂಡಾ ಸಾಕು ಪ್ರಾಣಿಗಾಗಿ ಆ ವ್ಯಕ್ತಿ ತೋರಿಸಿರುವ ಕಾಳಜಿ ಹಾಗೂ ಅಪರಿಮಿತವಾದ ಪ್ರೀತಿಗೆ ನಮಗೂ ಕೂಡಾ ಒಂದು ಮೆಚ್ಚುಗೆ ನೀಡದೇ ಬರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ವೀಡಿಯೋ ಮನಮುಟ್ಟುವಂತೆ ಅಥವಾ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರೆ ಕೂಡಾ ತಪ್ಪಾಗಲಾರದು. ಹಾಗಾದರೆ ಅಂತಹ ವೀಡಿಯೋ ಯಾವುದದು ಎನ್ನುವುದಕ್ಕೆ ಉತ್ತರ ಇಲ್ಲಿದೆ.
ನಾಲೆಡ್ಜ್ ಹಬ್ ಎನ್ನುವ ಟ್ವಿಟರ್ ಬಳಕೆದಾರರು ಒಂದು ವೀಡಿಯೋವನ್ನು ಶೇರ್ ಮಾಡಿದ್ದು, ಇದರಲ್ಲಿ ಒಂದು ಕಣ್ಣು ಕಾಣದ ಶ್ವಾನದ ಒಂದು ಅದ್ಭುತವಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ. ಶ್ವಾನ ಕ್ಕೆ ಕಣ್ಣು ಕಾಣಿಸದ ಕಾರಣದಿಂದ ಅದು ಮನೆಯಲ್ಲಿ ಓಡಾಡುವಾಗ ಪೀಠೋಪಕರಣಗಳಿಗೆ ಅಥವಾ ಗೋಡೆಗೆ ಅಥವಾ ಇನ್ನಾವುದೋ ವಸ್ತುವಿಗೆ ಡಿಕ್ಕಿ ಹೊಡೆಯುವ, ಗಾಯವಾಗುವ ಅವಕಾಶಗಳು ಇರುವುದರಿಂದ ಅದಕ್ಕೆ ಅಂತಹ ಯಾವುದೇ ಅನಾಹುತ ಅಥವಾ ಅಪಾಯ ಸಂಭವಿಸದೇ ಇರಲೆಂದು ಆ ಶ್ವಾನದ ಮಾಲೀಕ ಒಂದು ಬುದ್ಧಿವಂತಿಕೆಯ ಕೆಲಸವನ್ನು ಮಾಡಿದ್ದಾರೆ.
ಆ ನಾಯಿಯ ಮುಂದಿನ ಎರಡು ಕಾಲುಗಳ ಹಿಂಭಾಗದಿಂದ ಬೆನ್ನ ಮೇಲೆ ಬರುವ ಹಾಗೆ ಬೆಲ್ಟ್ ಒಂದನ್ನು ಕಟ್ಟಿ, ಅದಕ್ಕೆ ಅಳವಡಿಸಿದಂತಹ ಒಂದು ವೃತ್ತಾಕಾರಾದ ತೆಳುವಾದ ಲೋಹದ ಮಾದರಿಯನ್ನು ಮಾಡಿದ್ದು, ಅದನ್ನು ನಾಯಿಯ ಮುಖದ ಮುಂದೆ ಸ್ವಲ್ಪ ದೂರದ ವರೆಗೆ ಹರಡಿಕೊಂಡಿರುವಂತೆ ವ್ಯವಸ್ಥೆ ಮಾಡಲಾಗಿದೆ. ನಾಯಿಯು ಗೋಡೆಯ ಬಳಿಗೋ, ಮತ್ತಾವುದೇ ವಸ್ತುವಿನ ಬಳಿಗೋ ಹೋದಾಗ ಆ ವೃತ್ತಾಕಾರದ ಲೋಹದ ಮಾದರಿಯು ಗೋಡೆಗೆ ಸ್ಪರ್ಶವಾಗಿ ನಾಯಿಯನ್ನು ಸ್ವಲ್ಪ ಹಿಂದಕ್ಕೆ ಮೃದುವಾಗಿ ನೂಕುತ್ತದೆ. ಆಗ ಆ ಶ್ವಾನಕ್ಕೆ ಮುಂದೆ ಏನೂ ದಾರಿಗೆ ಅಡ್ಡವಾಗಿದೆ ಎಂಬುದು ತಿಳಿದು ಅದು ಹಿಂದಕ್ಕೆ ಬರಲು ಸಹಾಯವಾಗುತ್ತದೆ.
ವಿಡಿಯೋ ನೋಡಿ…..
Blind Dog Was Scared To Walk. So Owner Made This For Him pic.twitter.com/rUlISK0HWn
— Knowledge Hub (@knowIedgehub) September 1, 2020
ತಾನು ಸಾಕಿದ ಮುದ್ದಿನ ನಾಯಿಯ ಮೇಲೆ ಇಂತಹ ಒಂದು ವಾತ್ಸಲ್ಯ ವನ್ನು ಮರೆದಿರುವ ಅದರ ಮಾಲೀಕನ ವ್ಯಕ್ತಿತ್ವ ನಿಜಕ್ಕೂ ಎಷ್ಟು ಗ್ರೇಟ್ ಎನ್ನುವುದು ಈ ವೀಡಿಯೋ ನೋಡಿದಾಗ ನಮಗೆ ತಿಳಿಯುತ್ತದೆ. ಆ ನಾಯಿಯ ಮಾಲಿಕನಿಗೆ ನಾವು ಕೂಡಾ ಹ್ಯಾಟ್ಸಾಫ್ ಎಂದು ತಪ್ಪದೇ ಹೇಳೋಣ.