ಅಕ್ಷಯ್ ಕುಮಾರ್ ತಮ್ಮ ಮಗಳ ಮುಖ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೋರಿಸುವುದಿಲ್ಲ! ಯಾಕೆಂದರೆ ಇದರ ಹಿಂದಿನ ಕಾರಣವೇ ಬೇರೆ!
ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅವರು ತಮ್ಮದೇ ಆದ ಒಂದು ಶಿಸ್ತನ್ನು ಹೊಂದಿದ್ದಾರೆ. ಅವರು ಎಷ್ಟೊಂದು ಶ್ರೀಮಂತರಾದರೂ ಸಹಿತ ಶೂಟಿಂಗಿಗೆ ಹೋಗುವಾಗ ಮನೆಯಲ್ಲಿಯ ಊಟದ ಡಬ್ಬಿಯನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರೆ. ಯಾವುದೇ ನೈಟ್ ಪಾರ್ಟಿಗಳನ್ನು ಅವರು ಅಟೆಂಡ್ ಮಾಡುವುದಿಲ್ಲ. ರಾತ್ರಿ ಬೇಗ ಮಲಗಿಕೊಳ್ಳುತ್ತಾರೆ. ಮತ್ತು ಬೆಳಿಗ್ಗೆ ಬೇಗನೆ ಎದ್ದು ವಾರ್ಮ್ ಅಪ್, ವ್ಯಾಯಾಮ, ಜಿಮ್ ಇವೆಲ್ಲವುಗಳಿಗೆ ತುಂಬಾ ಮಹತ್ವವನ್ನು ಕೊಡುತ್ತಾರೆ. ಹೀಗಾಗಿ ಅವರ ಪ್ರತಿಯೊಂದು ಕೆಲಸಗಳು ತುಂಬಾ ವಿಶೇಷವಾಗಿರುತ್ತವೆ. ತಾವು ಮಾಡುವ ಕೆಲಸಗಳಲ್ಲಿ ಕ್ರಿಯೇಟಿವಿಟಿಯು ಇರುತ್ತದೆ.
ಅನೇಕ ನಟರುಗಳಿಗೆ ವರ್ಷಕ್ಕೆ ಒಂದೋ ಅಥವಾ ಎರಡು ಚಿತ್ರಗಳನ್ನು ತೆಗೆಯುವುದರಲ್ಲಿ ಸಾಕಾಗಿ ಹೋಗುತ್ತದೆ. ಆದರೆ ಅಕ್ಷಯ್ ಕುಮಾರ್ ಅವರು ವರ್ಷಕ್ಕೆ 4 ರಿಂದ 5 ಚಿತ್ರಗಳನ್ನು ಮಾಡುತ್ತಾರೆ. ಮತ್ತು ಅವರ ಚಿತ್ರಗಳು ತುಂಬಾ ಅಪರೂಪದ ನೈತಿಕ ಮೌಲ್ಯಗಳನ್ನು ಎತ್ತಿ ತೋರಿಸುವಂಥ ಕಥೆಗಳನ್ನು ಹೊಂದಿರುತ್ತವೆ.
ಒಳ್ಳೆ ಹೀರೋ ಎಂದಾಗ ಮೀಡಿಯಾದವರು ನಟರ ಚಿಕ್ಕಪುಟ್ಟ ಸುದ್ದಿಗಳನ್ನು ಸಹಿತ ತುಂಬಾ ದೊಡ್ಡದಾಗಿ ಮಾಡುತ್ತಾರೆ. ಎಷ್ಟೋ ಸಲ ನಾವು ನೋಡುತ್ತೇವೆ ಸ್ಟಾರ್ ಗಳ ಮಕ್ಕಳು ಹೊರಗೆ ಬಿದ್ದರೆ ಸಾಕು ಮೀಡಿಯಾದವರು, ಜನರು ಎಲ್ಲರೂ ಅವರ ಸುತ್ತಲೂ ಗುಂಪು ಗೂಡುತ್ತಾರೆ.
ಯಾವುದೇ ಪಬ್ಲಿಕ್ ಪ್ಲೇಸ್ ನಲ್ಲಿ ಅಕ್ಷಯ್ ಕುಮಾರ್ ಅವರು ತಮ್ಮ ಮಗಳ ಜೊತೆ ಬಂದಾಗ ಅವರು ಹೆಚ್ಚಾಗಿ ತಮ್ಮ ಮಗಳ ಮುಖವನ್ನು ಮುಚ್ಚಲು ಅಥವಾ ಯಾರಿಗೂ ತೋರಿಸಲು ಇಷ್ಟಪಡುವುದಿಲ್ಲ. ನನ್ನ 6 ವರ್ಷದ ಮಗಳು ರಾತ್ರಿ ಹೊರಗೆ ಡಿನ್ನರ್ ಗಾಗಿ ಹೋಗಬೇಕೆಂದರೆ ಸ್ಪಷ್ಟವಾಗಿ ಆಕೆ ಬೇಡ ಎನ್ನುತ್ತಾಳೆ. ಆಗ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇದಕ್ಕೆ ಕಾರಣವೂ ಹಾಗೆಯೇ ಇದೆ. ಏನೆಂದರೆ, ನಾವು ಸ್ಟಾರ್ ಗಳೆಂದರೆ ನಮ್ಮ ಸುತ್ತಮುತ್ತ ಜನ ಮತ್ತು ಮೀಡಿಯಾದವರು ನೆರೆಯುವುದು ಸಹಜ. ನಾನು ಇಲ್ಲಿ ಯಾರಿಗೂ ದೋಷ ಕೊಡುವುದಿಲ್ಲ. ಯಾಕೆಂದರೆ ನಮ್ಮ ಜೀವನವೇ ಹಾಗೆ ಇದೆ, ಮತ್ತು ಇದಕ್ಕೆ ನಾವು ಹೊಂದಿಕೊಂಡಿದ್ದೇವೆ. ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಈ ವಿಷಯವು ನನಗೆ ಸರಿ ಎನಿಸುವುದಿಲ್ಲ. ಅಷ್ಟೇ ಏಕೆ ಅಕ್ಷಯ್ ಕುಮಾರ್ ಅವರ ಮಗನಿಗೂ ಸಹಿತ ಈ ವಿಷಯ ಸರಿಯೆನಿಸುವುದಿಲ್ಲ, ಮಗ ಆರವ್ ಸಹಿತ ಮೀಡಿಯಾ, ಫೋಟೋಗ್ರಾಫರ್ ಈ ಕಾರಣಗಳಿಂದ ಹೆಚ್ಚು ಹೊರಗೆ ಬೀಳುವುದಿಲ್ಲ.

ಮಗಳ ಮುಖವನ್ನು ಹೆಚ್ಚಾಗಿ ಯಾರಿಗೂ ತೋರಿಸದ ಕಾರಣವನ್ನು ಅಕ್ಷಯ್ ಕುಮಾರ್ ಅವರಿಗೆ ಕೇಳಿದಾಗ ಅಕ್ಷಯ್ ಅವರು ಹೀಗೆ ಹೇಳುತ್ತಾರೆ, ಕ್ಯಾಮೆರಾದ ಸತತವಾದ ಫ್ಲ್ಯಾಶ್ ಲೈಟ್ ಮಗಳಿಗೆ ಸರಿ ಎನಿಸುವುದಿಲ್ಲ. ಇನ್ನೊಂದು ಎಲ್ಲಿಯವರೆಗೆ ಮಕ್ಕಳು ಶಿಕ್ಷಣವನ್ನು ಕಲಿತು ಯಾವುದೇ ಒಂದು ಕ್ಷೇತ್ರದಲ್ಲಿ ಸ್ವತ: ಪ್ರಸಿದ್ಧಿಯನ್ನು ಪಡೆಯುವುದಿಲ್ಲವೋ ಅಲ್ಲಿಯವರೆಗೆ ಸಾರ್ವಜನಿಕವಾಗಿ ಪೋಷಕರ ಹೆಸರಿನ ಮೇಲೆ ಪ್ರಸಿದ್ಧಿಯನ್ನು ಪಡೆಯುವದು ನನಗೆ ಇಷ್ಟವಾಗುವುದಿಲ್ಲ ಎನ್ನುತ್ತಾರೆ. ಮಕ್ಕಳು ಯಾರದ್ದೇ ಆಗಿರಲಿ 21 ವರ್ಷಗಳವರೆಗೆ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಅಸಭ್ಯವಾಗಿ ಮಾತಾಡಕೂಡದು. ಎಲ್ಲ ಮಕ್ಕಳಂತೆ ನಮ್ಮ ಮಕ್ಕಳು ಸಹಿತ ಇವೆ. ಆದರೂ ಮಾಧ್ಯಮಗಳಲ್ಲಿ ನಟ-ನಟಿಯರ ಮಕ್ಕಳ ಬಗ್ಗೆ ಇಲ್ಲದ ಸಲ್ಲದ ಆರೋಪಗಳನ್ನು ಚೇಷ್ಟೆಗಳನ್ನು ಮಾಡುವ ಜನರಿಗೆ ಅಕ್ಷಯ್ ಅವರ ಹತ್ತಿರ ಯಾವುದೇ ಶಬ್ದಗಳಿಲ್ಲ. ಅವರ ಪ್ರಕಾರ ಸೋಶಿಯಲ್ ಮೀಡಿಯಾ ಬಲಾಢ್ಯ ಮತ್ತು ಪ್ರಶಸ್ತವಾಗಿರತಕ್ಕಂತ ಪ್ಲಾಟ್ ಫಾರ್ಮ್ ನ್ನು ಜನರು ಇನ್ನೊಬ್ಬರಿಗೆ ದುಖಿತರನ್ನಾಗಿ ಮಾಡಲು ಹಾಗೂ ಇನ್ನೊಬ್ಬರ ಕಾಲೆಳೆಯಲು ಉಪಯೋಗಿಸುವುದನ್ನು ನೋಡಿದರೆ ಮನಸ್ಸಿಗೆ ಕೆಡುಕೆನಿಸುತ್ತದೆ.
ಈ ಎಲ್ಲ ಕಾರಣಗಳಿಂದ ಅಕ್ಷಯ್ ಕುಮಾರ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮಗಳ ಮುಖವನ್ನು ಬಹಿರಂಗಪಡಿಸಲು ಮತ್ತು ಮೀಡಿಯಾದಿಂದ ಮಕ್ಕಳನ್ನು ಬಚಾವ್ ಮಾಡಲು ಹೀಗೆ ವರ್ತಿಸುತ್ತಾರೆ.