1998ರ ವಿಶ್ವಕಪ್ ಗೆಲುವಿಗೆ ಕಾರಣನಾದ ‘ಈ’ ಹೀರೋಗೆ ಇಂದು ದನ ಕಾಯುವ ಸ್ಥಿತಿ ಬಂದಿದೆ!
ಭಾರತವು ಕ್ರಿಕೆಟ್ ಆಟವನ್ನು ಪ್ರೀತಿಸುವ ದೇಶವಾಗಿದೆ. ಕ್ರಿಕೆಟ್ ಯಾವ ದೇಶದಲ್ಲಿ ಹುಟ್ಟಿದೆ ಆ ಇಂಗ್ಲೆಂಡ್ ದೇಶದಲ್ಲಿ ಸಾಕರ್ ಜನಪ್ರಿಯ ಆಟವಾಗಿದೆ. ಭಾರತದಲ್ಲಿ ಕ್ರಿಕೆಟ್ ಆಟ ಶುರುವಾಯ್ತು ಅಂದ್ರೆ ಕೋಟ್ಯಾವಧಿ ವೀಕ್ಷಕರು ಊಟ, ನೀರು ಮರೆತು ಟಿವಿ ಮುಂದೆ ಕುಳಿತು ಬಿಡುತ್ತಾರೆ. ಅದರಲ್ಲಿ ವಿಶೇಷವಾದ ಮ್ಯಾಚ್ ಗಳಿದ್ದರಂತೂ ಆಯ್ತು, ತಮ್ಮ ಕೆಲಸಗಳನ್ನು ಸಹಿತ ಬಿಟ್ಟು ಮನೆಯಲ್ಲಿಯೇ ಮ್ಯಾಚ್ ನೋಡಲು ಕುಳಿತು ಕೊಳ್ಳುತ್ತಾರೆ. ಹೀಗಾಗಿ ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಮರ್ಯಾದೆಗಿಂತ ಹೆಚ್ಚಿಗೆ ಮಹತ್ವ ನೀಡಲಾಗಿದೆ. ಹೀಗಾಗಿ ಯುವ ಆಟಗಾರರು ಹೆಚ್ಚಾಗಿ ಕ್ರಿಕೆಟ್ ಆಟದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಎಷ್ಟೋ ಆಟಗಾರರಂತೂ ಇದನ್ನೇ ತಮ್ಮ ಕರಿಯರ್ ನ್ನಾಗಿ ಮಾಡಿಕೊಂಡಿದ್ದಾರೆ.
ಇಲ್ಲಿ ಹಣವು ಸಹಿತ ತುಂಬಾ ಜಾಸ್ತಿ ಇದೆ. ಇದೇ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ನಲ್ಲಿ ತಮ್ಮ ಸ್ಥಾನವನ್ನು ನಿಶ್ಚಿತಮಾಡಿಕೊಳ್ಳಲು ತುಂಬಾ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಹೀಗಾಗಿ ಅವರ ಆಟದಲ್ಲಿ ಸ್ವಲ್ಪ ಕಳಪೆ ಪ್ರದರ್ಶನವಾದರೂ ಅವರನ್ನು ತಂಡದಿಂದ ಹೊರಗಿಡಲಾಗುತ್ತದೆ.

ತಮ್ಮ ದೇಶಕ್ಕಾಗಿ ಏನೇಕ ಆಟಗಾರರೂ ಒಳ್ಳೆಯ ಪಂದ್ಯಗಳನ್ನು ಪ್ರದರ್ಶಿಸಿದರೂ ಸಹ ಆಟದಲ್ಲಿ ಸಾತತ್ಯತೆ ಇರದ ಕಾರಣ ಅಥವಾ ಬೇರೆ ಯಾವದೋ ಒಂದು ಕಾರಣದಿಂದ ಟೀಮಿನಲ್ಲಿ ಸ್ಥಾನ ಸಿಗದೆ ಇದ್ದಾಗ ಯಾರಿಗೂ ಗೊತ್ತಿಲ್ಲದೆ ಅಪರಿತರ ಜೀವನವನ್ನು ಸಹಿತ ಎಷ್ಟೋ ಆಟಗಾರರು ತೆಗೆಯುತ್ತಿದ್ದಾರೆ. 1998 ರಲ್ಲಿ ಬಾಲಾಜಿ ಡಾಮೋರ್ ಹೆಸರಿನ ಒಬ್ಬ ಸ್ಟಾರ್ ಆಟಗಾರ ಬಂದಿದ್ದ. ಈ ಆಟಗಾರನ ಅದೃಷ್ಟದಲ್ಲಿಯೂ ಹೀಗೆಯೇ ಆಗಿದೆ. ಇಲ್ಲಿ ಆತನ ಬಗ್ಗೆಯೇ ತಿಳಿದುಕೊಳ್ಳುವಾ.
1998 ರ ವಿಶ್ವಕಪ್ ಟೂರ್ನಿಯ ಹೀರೊ ಇದ್ದರು ಈ ಬಾಲಾಜಿ ಡಾಮೋರ್.
ಅಂಧರಿಗಾಗಿ 1998 ರಲ್ಲಿ ಏರ್ಪಡಿಸಿದ ವಿಶ್ವಕಪ್ ಟೂರ್ನಿಯ ಸದಸ್ಯನಷ್ಟೇ ಅಲ್ಲ ಆ ಪಂದ್ಯಗಳ ಹೀರೊ ಆಗಿದ್ದರು ಈ ಬಾಲಾಜಿ. ಆದರೆ ಇದೇ ಬಾಲಾಜಿ ಈಗ ಬಯಲಿನಲ್ಲಿ ದನಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದಾರೆ ಎಂದರೆ ಬಹುಶಃ ನಿಮಗೆ ವಿಶ್ವಾಸವೆನಿಸಲಿಕ್ಕಿಲ್ಲ.

ಆ ಸ್ಪರ್ಧೆಯಲ್ಲಿ ಬಾಲಾಜಿ ತಮ್ಮ ಉತ್ತಮ ಫಾರ್ಮ್ ನಿಂದಾಗಿ ಭಾರತಕ್ಕೆ ಸೆಮಿ ಫೈನಲ್ ವರೆಗೆ ತಲುಪಿಸಲು ಯಶಸ್ವಿಯಾಗಿದ್ದರು.
ಬಾಲಜಿಯು ಒಂದು ಬಡ ಕುಟುಂಬದಿಂದ ಬಂದ ಸಾಮಾನ್ಯ ವ್ಯಕ್ತಿ. ಅಂಧರಿಗಾಗಿ ಆಡಿದ ಈ ಪಂದ್ಯಗಳಲ್ಲಿ ಉತ್ತಮ ಪರ್ಫಾರ್ಮನ್ಸ್ ತೋರಿಸಿದ ಮೇಲೆ ಅವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ ಎಂದು ತಿಳಿದಿದ್ದರು. ಆದರೆ ಅದು ಅವರ ಪಾಲಿಗೆ ಬರೀ ಕನಸಾಯಿತು. ಆ ಪಂದ್ಯಗಳು ಮುಗಿದು 20 ವರ್ಷಗಳೇ ಕಳೆಯಲು ಬಂದರೂ ಅವರ ಜೀವನದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಲಿಲ್ಲ. ಹೀಗಾಗಿ ಅವರು ಇಂದಿಗೂ ದನಗಳನ್ನು ಮೇಯಿಸುವದರ ಜೊತೆಗೆ ತೋಟಕ್ಕೆ ಸಂಬಂಧಿಸಿದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೆ.
ಎಲ್ಲಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆಯುವ ದಾಖಲೆ ಇವರ ಹೆಸರಿಗಿದೆ.
ಬಾಲಾಜಿ ಗುಜರಾತಿನ ಆಲ್ ರೌಂಡರ್ ಆಟಗಾರರಾಗಿದ್ದು ಅವರ ಹೆಸರ ಮೇಲೆ ಭಾರತದ ಕಡೆಯಿಂದ ಎಲ್ಲಕ್ಕೂ ಹೆಚ್ಚು ವಿಕೆಟ್ ಗಳನ್ನು ಕಬಳಿಸಿದ ದಾಖಲೆ ಇದೆ. ಇವರು ಆಡಿದ 125 ಪಂದ್ಯಗಳಲ್ಲಿ 3125 ರನ್ ಗಳನ್ನು ಕಲೆ ಹಾಕಿದ್ದಾರೆ, ಜೊತೆಗೆ 150 ವಿಕೆಟ್ ಗಳನ್ನು ಸಹ ಪಡೆದಿದ್ದಾರೆ.

ಇಷ್ಟೆಲ್ಲ ಮಾಡುತ್ತಿರುವಾಗ ಬಾಲಾಜಿವರ ಕಣ್ಣುಗಳು ಎಳ್ಳಷ್ಟೂ ಕಾಣಿಸುವದಿಲ್ಲವೆನ್ನುವದು ಗಮನಾರ್ಹ ವಿಷಯ. ಇವರು ಒಟ್ಟು 8 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರ ಒಳ್ಳೆಯ ಆಟದಿಂದಾಗಿ ಸರಕಾರದಿಂದ ಏನಾದರೂ ಸಹಾಯ ಲಭಿಸಿ ಜೀವನ ಮಟ್ಟದಲ್ಲಿ ಒಳ್ಳೆಯ ಬದಲಾವಣೆಯಾಗುವ ಕನಸು ಕಂಡಿದ್ದರು. ಆದರೆ ಇವರ ದುರ್ಭಾಗ್ಯ ಆ ಪ್ರಕಾರದ ಯಾವ ಸಹಾಯವೂ ದೊರೆಯಲಿಲ್ಲ. ಇಂದಿಗೂ ಮೊದಲಿನ ಪರಿಸ್ಥಿತಿಯಲ್ಲಿಯೇ ಅವರು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಅವರ ಆಟದ ಮತ್ತು ಅಂಧರ ಮಿಸಲಾತಿಯೂ ಸಹಿತ ಕೆಲಸಕ್ಕೆ ಬರಲಿಲ್ಲ.

ಇವರ ಈ ರೀತಿಯ ನಡೆಸುವ ಜೀವನವನ್ನು ನೋಡಿದರೆ ಭಾರತ ಸರಕಾರ ಮತ್ತು ಬಂಗಾರದ ಮೊಟ್ಟೆಯನ್ನಿಡುವ ಕೋಳಿಯನ್ನು ಹೊಂದಿರುವ IPL ಚಲಾಯಿಸುವ BCCI ಇಬ್ಬರು ಕೂಡಿ ಈ ಅಂಧ ಪ್ರತಿಭೆಯನ್ನುಳ್ಳ ಆಟಗಾರ ಬಾಲಾಜಿಗೆ ಏನಾದರೂ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ, ಅಲ್ವಾ ಫ್ರೆಂಡ್ಸ್?