ಶಾರುಖ್ ಖಾನ್’ಗೆ ದೊಡ್ಡ ತಲೆನೋವು ಆಗುತ್ತಿರುವ ಮಗಳು ಸುಹಾನಾ! ಅಂತಾಳೆ – “ಈ ವಿವಾಹಿತ ನಟನೊಂದಿಗೆ ಡೇಟ್ ಗೆ ಹೋಗುವಾಸೆ!”

ಶಾರುಖ್ ಖಾನ್ ಅವರಿಗೆ ಬಾಲಿವುಡ್ ಬಾದಶಹಾ ಎಂದೇ ಕರೆಯಲಾಗುತ್ತದೆ. ಮಧ್ಯಮ ವರ್ಗದಿಂದ ಮೇಲೆ ಬಂದು ಯಾರೂ ಗಾಡ್ ಫಾದರ್ ಗಳಿಲ್ಲದೆ ಬಾಲಿವುಡ್ ನಲ್ಲಿ ಸ್ವಂತ ಪರಿಶ್ರಮದ ಬಲದ ಮೇಲೆ ಸ್ಥಿರವಾಗಿ ನಿಂತ ಧೀರ ನಟ. ಈ ಬಾದಶಾಹನ ಮಗಳು ಸುಹಾನಾ ಖಾನ್ ಅವಳ ಸುದ್ದಿಯನ್ನೇ ತಮಗಾಗಿ ತಂದಿದ್ದೇವೆ.

ಸ್ಟಾರ್ ಮಕ್ಕಳು ಸ್ವಲ್ಪ ದೊಡ್ಡವರಾದರೆ ಸಾಕು ಮಿಡಿಯಾದವರ ಕಣ್ಣು ಅವರ ಮೇಲೆ ಬಿದ್ದೇ ಬೀಳುತ್ತವೆ. ಒಮ್ಮೆ ಮಿಡಿಯಾದವರ ಕಣ್ಣಿಗೆ ಬಿದ್ದರೆ ಆಯ್ತು ಆ ನಂತರ ಈ ಸ್ಟಾರ್ ನಟರ ಮಕ್ಕಳು ಕುಂತರೂ ಸುದ್ದಿಯೇ ನಿಂತರೂ ಸುದ್ದಿಯೇ ಆಗುತ್ತದೆ. ಫ್ಯಾನ್ಸ್ ಗಳು ಸಹಿತ ತಮ್ಮ ಪ್ರೀತಿಯ ನಟರ ಬಗ್ಗೆ ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು ಹೇಗೆ ಕುತೂಹಲವನ್ನು ತೋರಿಸುತ್ತಾರೋ, ಅದೇ ಪ್ರಕಾರ ಅವರ ಮಕ್ಕಳ ಬಗ್ಗೆಯೂ ತಿಳಿದುಕೊಳ್ಳಲು ತುಂಬಾ ಅಭಿರುಚಿಯನ್ನು ತೋರಿಸುತ್ತಾರೆ.

ಈಗ ಸುಹಾನಾಳು ಒಂದು ಸುದ್ದಿಗಾಗಿ ತುಂಬಾ ಚರ್ಚೆಯಲ್ಲಿದ್ದಾಳೆ. ಅದೇ ಸುದ್ದಿಯನ್ನು ನಾವು ಇಲ್ಲಿ ಪ್ರಸ್ತಾಪಿಸಲಿದ್ದೇವೆ. ಆಕೆಯ ಹೃದಯ ಬಾಲಿವುಡ್ ನಲ್ಲಿಯ ಫೇಮಸ್ ನಟನಿಗಾಗಿ ಹಾತೊರೆಯುವ ಬಗ್ಗೆ ಹೇಳಿದ್ದಾಳೆ. ಶಾರುಖ್ ಖಾನ್ ಅವರಿಗೆ ಮಗಳ ಇದೇ ವಿಷಯ ತಲೆನೋವಾಗಿದೆ.

ಸುಹಾನಾಳ ಹೃದಯವನ್ನು ಗಾಸಿ ಗೊಳಿಸಿದ ನಟ ಬೇರಾರು ಅಲ್ಲ, ಈಗಾಗಲೇ ಮದುವೆಯಾದರೂ ಸಹಿತ ಅನೇಕ ಹುಡುಗಿಯರ ಹೃದಯದ ಮೇಲೆ ರಾಜ್ಯ ಮಾಡುವ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್.

ಶಾಹಿದ್ ಕಪೂರ್ ಅವರು ಮದುವೆಯಾಗಿ ಎರಡು ಮಕ್ಕಳ ತಂದೆಯೂ ಆಗಿದ್ದಾರೆ. ಒಂದು ಸಂದರ್ಶನದಲ್ಲಿ ಸುಹಾನಾಳು ತಮ್ಮ ಮನಸ್ಸಿನಲ್ಲಿಯ ವಿಚಾರವನ್ನು ಮುಕ್ತವಾಗಿ ಹೀಗೆ ಮಂಡಿಸಿದ್ದಾಳೆ. ಆಕೆ ಶಾಹಿದ್ ಅವರ ದೊಡ್ಡ ಫ್ಯಾನ್ ಆಗಿದ್ದಾಳಂತೆ, ಮತ್ತು ಅವರು ಎಷ್ಟು ಇಷ್ಟವಾಗುತ್ತಾರೆಂದರೆ, ‘ಆಕೆಗೂ ಶಾಹಿದ್ ಗೆ ಡೇಟ್ ಮಾಡುವ ಆಸೆಯಂತೆ’.